ಅಬುಧಾಬಿ: ಯುಎಇಯಲ್ಲಿನ ಟ್ರಾಫಿಕ್ ಅಪಘಾತಗಳ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಒಳಿತು. ಏಕೆಂದರೆ ಇದು ನಿಮಗೆ ದೊಡ್ಡ ಮಟ್ಟದಲ್ಲಿ ದಂಡ ಕಟ್ಟಲು ಕಾರಣವಾಗಬಹುದು.
ಅಂತಹ ಪೋಸ್ಟ್ ಮಾಡಿದರೆ 150,000 ದಿರ್ಹಂ ದಂಡವನ್ನು ವಿಧಿಸಲಾಗುವುದು ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.
ಅಬುಧಾಬಿ ಪೊಲೀಸ್ ಸಂಚಾರ ಮತ್ತು ಗಸ್ತು ವಿಭಾಗದ ನಿರ್ದೇಶಕ ಬ್ರಿಗೇಡಿಯರ್ ಖಲೀಫಾ ಮುಹಮ್ಮದ್ ಅಲ್-ಖೈಲಿ ಅವರು ಅಪಾಯಕಾರಿ ಫೋಟೋಗಳನ್ನು ಪೋಸ್ಟ್ ಮಾಡುವುದು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಹೇಳಿದರು.ಸಂಚಾರ ಗಸ್ತು, ಆಂಬ್ಯುಲೆನ್ಸ್ ಮತ್ತು ಸಿವಿಲ್ ಡಿಫೆನ್ಸ್ ವಾಹನಗಳ ಕಾರ್ಯಾಚರಣೆಗೆ ಅದು ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು.
ತುರ್ತು ಸ್ಥಿತಿಯಲ್ಲಿ ತಲುಪಬೇಕಾಗುವ ವಾಹನಗಳು ಈ ಸ್ಥಳಕ್ಕೆ ತಲುಪಲು ಸಾಧ್ಯವಾಗದಿರುವ ಕಾರಣ ಗಾಯಾಳುಗಳ ಸಾವಿಗೂ ಕಾರಣವಾಗಬಲ್ಲದು ಎಂದು ಅವರು ಹೇಳಿದರು.
ವ್ಯಕ್ತಿಯ ಗೌಪ್ಯತೆಗೆ ಪ್ರವೇಶಿಸುವ ಎಲೆಕ್ಟ್ರಾನಿಕ್ ಸಾಧನವನ್ನು ಬಳಸುವ ವ್ಯಕ್ತಿಯಿಂದ 50,000ದಿಂದ 1,30,000 ದಿರ್ಹಂ ವರೆಗೆ ದಂಡ ಮತ್ತು ಆರು ತಿಂಗಳ ಬಂಧನ ವಿಧರಿಸಲಾಗುತ್ತದೆ 2012 ರ ಸೈಬರ್ ಅಪರಾಧ ಕಾನೂನು ಪ್ರಕಾರ ಈ ಕಾನೂನು ಜಾರಿಯಲ್ಲಿದೆ.
ಅಬುಧಾಬಿ ಪೋಲಿಸ್ ಡಿಪಾರ್ಟ್ಮೆಂಟ್ ಡೈರೆಕ್ಟರೇಟ್ ಮತ್ತು ಸೆಕ್ಯುರಿಟಿ ಮೀಡಿಯಾ ಇಲಾಖೆಯು ಡೂವಿನ ಸಹಕಾರದೊಂದಿಗೆ ‘ಪೋಸ್ಟ್ ವಿಸ್ಳೀ’ ಎನ್ನುವ ಹೆಸರಿನಲ್ಲಿ ಟ್ರಾಫಿಕ್ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ.