janadhvani

Kannada Online News Paper

ಯುಎಇ ಯಲ್ಲಿರುವ ವಿದೇಶೀಯರು ಅರಿತಿರಬೇಕಾದ ಪ್ರಮುಖ ಅಂಶಗಳು

ಪ್ರತಿ ದೇಶಗಳಲ್ಲಿ ಉದ್ಯೋಗಗಳನ್ನು ಹುಡುಕುವ ವಿದೇಶಿಯರು ಅಲ್ಲಿನ ಕಾನೂನು ಮತ್ತು ಜೀವನ ಪರಿಸ್ಥಿತಿಗಳನ್ನು ತಿಳಿದುಕೊಳ್ಳುವುದು ಉತ್ತಮ. ಯುಎಇ ಯಲ್ಲಿ ಉದ್ಯೋಗ ಪಡೆಯಲು ಬಯಸುವ ವಿದೇಶಿಯರು ಅಲ್ಲಿನ ಕಾನೂನುಗಳನ್ನೂ ಅರ್ಥೈಸಿಕೊಳ್ಳಬೇಕು. ಕಾನೂನಿನ ಅಜ್ಞಾನವು ಪೊಲೀಸ್ ಅಥವಾ ನ್ಯಾಯಾಲಯದಲ್ಲಿ ಸಲ್ಲಿಸಬಹುದಾದ ಕಾರಣವಾಗುವುದಿಲ್ಲ.ಉದ್ಯೋಗ ಮತ್ತು ಸಾಮೂಹಿಕ ಜೀವನದಲ್ಲಿ ವಾಸಿಸುತ್ತಿರುವ ವಿದೇಶಿಯರಿಗೆ ತಮ್ಮ ಜವಾಬ್ದಾರಿಗಳೊಂದಿಗೆ ನಮ್ಮ ಹಕ್ಕುಗಳನ್ನು ಗುರುತಿಸಲು ಸಹ ಇದು ಸಹಾಯಕವಾಗುತ್ತದೆ.

ಇದು ಕೆಲಸಗಾರರಿಗೆ ಮಾತ್ರವಲ್ಲ ಉದ್ಯೋಗದಾತರಿಗೂ ಅನ್ವಯವಾಗುತ್ತದೆ. ವಿದೇಶಿ ಕೆಲಸಗಾರನಿಗೆ ಪ್ರಾಯೋಜಕತ್ವ ನೀಡುವವರು ಉದ್ಯೋಗದಾತರಾಗಿದ್ದಾರೆ. ಉದ್ಯೋಗದಾತನು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯಾಗಬಹುದು.

ದೇಶದಲ್ಲಿ ವಿದೇಶಿ ಕೆಲಸಗಾರರು ವೈದ್ಯಕೀಯ ಪರೀಕ್ಷೆ ಮುಗಿಸಿದ ನಂತರ ವಿಸಾ ಮತ್ತು ಎಮಿರೇಟ್ಸ್ ID ಯನ್ನು ಪಡೆದುಕೊಳ್ಳುತ್ತಾರೆ. ಎಮಿರೇಟ್ಸ್ ID ಯನ್ನು ಎಮಿರೇಟ್ನಲ್ಲಿ ವಾಸಿಸುತ್ತಿರುವ ವಿದೇಶಿಯರು ಯಾವಾಗಲೂ ತಮ್ಮ ಬಳಿಯಲ್ಲೇ ಉಳಿಸಿಕೊಳ್ಳಿ

ಈ ನಿಯಮಗಳು ತಿಳಿದಿರಬೇಕು:

* ಫೆಡರಲ್ ಕಾನೂನಿನ ಪ್ರಕಾರ ದೇಶದ ವಿದೇಶಿ ನೌಕರರು ಮಾನವ ಸಂಪನ್ಮೂಲ ಮತ್ತು ಸಬಲೀಕರಣ ಸಚಿವಾಲಯದಿಂದ ಕೆಲಸದ ಪರವಾನಗಿಯನ್ನು ಪಡೆಯಬೇಕು.

* ಕೆಲಸಗಾರನನ್ನು ನೇಮಕ ಮಾಡುವ ಎಲ್ಲಾ ಕಾರ್ಯವಿಧಾನಗಳ ವೆಚ್ಚವನ್ನು ಉದ್ಯೋಗದಾತನು ಹೊತ್ತುಕೊಳ್ಳಬೇಕು,ನಿವಾಸ ವೀಸಾ, ಕೆಲಸದ ಪರವಾನಗಿ ಇತ್ಯಾದಿಗಳಿಗೂ ಇದು ಅನ್ವಯಿಸುತ್ತದೆ.

* ಉದ್ಯೋಗ ಒಪ್ಪಂದದ ಮೂಲಕ ತಿಳಿಸಲಾದ ಸಂಬಳವನ್ನು ಪ್ರತಿ ತಿಂಗಳು ಬ್ಯಾಂಕುಗಳು / ಹಣಕಾಸು ಸಂಸ್ಥೆಗಳ ಮೂಲಕ ಉದ್ಯೋಗದಾತ ಕಾರ್ಮಿಕನಿಗೆ ನೀಡಬೇಕು

* ಕೆಲಸದ ಸಮಯವು ದಿನಕ್ಕೆ 8 ಗಂಟೆಗಳು ಅಥವಾ ವಾರಕ್ಕೆ 48 ಗಂಟೆಗಳಾಗಿರುತ್ತದೆ. ಹೋಟೆಲುಗಳು, ಭದ್ರತಾ ಸೇವೆಗಳು ಮುಂತಾದ ಕೆಲವು ಹುದ್ದೆಗಳಲ್ಲಿ  ಮಾತ್ರ ಸಮಯದಲ್ಲಿ ಬದಲಾವಣೆ ಇದೆ.

* ಸಂಭವನೀಯ ಅವಧಿಯು ಆರು ತಿಂಗಳುಗಳನ್ನು ಮೀರಬಾರದು. ಕೆಲಸಗಾರನಿಗೆ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ರಜೆಯನ್ನು ನೀಡಬೇಕು.

* ರಜಾದಿನಗಳಲ್ಲಿ ಅಥವಾ ಕೆಲಸದ ದಿನಗಳಲ್ಲಿ ಅಧಿಕ ಸಮಯವನ್ನು ಬಳಸಿದರೆ, ಉದ್ಯೋಗದಾತನು ಹೆಚ್ಚುವರಿಯಾಗಿ ಸಮಯದ ಅನುಸಾರ ವೇತನ ಪಾವತಿಸ ಬೇಕಾಗುತ್ತದೆ.

• ಕೆಲಸಗಾರನಿಗೆ ಅಧಿಕೃತ ರಜಾ ದಿನಗಳಲ್ಲಿ ವೇತನ ಸಹಿತ ರಜೆ ನೀಡಬೇಕಾಗುತ್ತದೆ. ಇದಲ್ಲದೆ, ಪ್ರತಿ ವರ್ಷ ಮೂವತ್ತು ದಿನಗಳ ವಾರ್ಷಿಕ ರಜೆಯು ವಿದೇಶಿ ಕಾರ್ಮಿಕರಿಗೆ ಕಾನೂನು ಅನುವುಮಾಡಿ ಕೊಟ್ಟಿದೆ.

ಇದು ನಮ್ಮ ಬದ್ದತೆಯಾಗಿರಲಿ

• ಧರ್ಮ, ವರ್ಣಭೇದದ ಹೆಸರಲ್ಲಿ ಪದಗಳು ಅಥವಾ ಕಾರ್ಯಗಳ ಮೂಲಕ ಯಾರದೇ ವಿರುದ್ಧ ನಿಂದನೆ ಅಥವಾ ತಾರತಮ್ಯ ಮಾಡಬೇಡಿ. ಇದನ್ನು ಕಾನೂನು ಕಠಿಣವಾಗಿ ನಿಷೇಧಿಸಿದೆ.

* ದೇಶಕ್ಕೆ ದೋಷಪೂರಿತ ಅಥವಾ ವ್ಯಕ್ತಿ ನಿಂದನೆ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಪ್ರಚಾರ ಪಡಿಸುವುದು ಕಾನೂನಿನಲ್ಲಿ ಅಪರಾಧ ಕ್ರಮವಾಗಿದೆ. ಸಾಮಾಜಿಕ ಮಾಧ್ಯಮವನ್ನು ಉತ್ತಮ ಕಾರ್ಯಗಳಿಗಾಗಿ ಬಳಸಬೇಕು.

* ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯ ವಸ್ತ್ರಗಳನ್ನು ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮ ಸಲ್ಲಾಪ ಪ್ರಕಟಿಸುವಿಕೆಯು ದಂಡ ಪಾವತಿಗೆ ಕಾರಣವಾಗಬಹುದು.

* ರಂಜಾನ್ ತಿಂಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆಹಾರವನ್ನು ತಿನ್ನುವುದು ಅಥವಾ ನೀರು ಕುಡಿಯುವುದಾಗಲಿ ಮಾಡಬೇಡಿ.

* ದೇಶದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಮಾಡುವುದು ಮತ್ತು ಮದ್ಯ ಹೊಂದುವುದು ಅಪರಾಧವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸುವುದು ಮತ್ತು ಮದ್ಯ ಸೇವಿಸಿ ಸಾರ್ವಜನಿಕ ಪ್ರವೇಶಕ್ಕೆ ಬರುವುದು ಕೂಡ ನಿಷೇಧಿತ ಅಪರಾಧವಾಗಿದೆ.

* ರಕ್ತ ಸಂಬಧಿಯಲ್ಲದ ವಿರುದ್ದ ಲಿಂಗದವರೊಂದಿಗೆ ವಾಸ ಸ್ಥಳ ಹಂಚಿಕೊಳ್ಳುವುದು ಅಪರಾಧವಾಗಿದೆ, ಮದುವೆಯಾಗದೆ ಒಟ್ಟಾಗಿ ವಾಸವಿರುವುದು ಜೈಲು, ದಂಡ ಪಾವತಿಸಬೇಕಾಗುವ ಅಪರಾಧವಾಗಿದೆ.

ಅಪರಾದ ಮತ್ತು ಶಿಕ್ಷೆ

1. ಉದ್ಯೋಗದಾತನ ಅನುಮತಿಯಿಲ್ಲದೆ ಇನ್ನೊಬ್ಬ ವ್ಯಕ್ತಿಗಾಗಿ ಅಥವಾ ಸಂಸ್ಥೆಗಾಗಿ ಕೆಲಸ ಮಾಡಿದರೆ – 50,000 ದಿರ್ಹಂ ದಂಡ.

2. ನಿವಾಸ ವಿಸಾ ಅವಧಿ ಮುಕ್ತಾಯದ ನಂತರ ಮೊದಲ ಆರು ತಿಂಗಳಲ್ಲಿ 25 ದಿರ್ಹಂನಂತೆ ಪ್ರತಿ ದಿನ ಪಾವತಿಸಬೇಕು. ಒಂದು ವರ್ಷದ ನಂತರ ಪ್ರತಿದಿನ 1000 ದಿರ್ಹಂನಂತೆ ದಂಡ ಪಾವತಿಸಬೇಕಾಗುತ್ತದೆ

3. ಅಮಲುಪಧಾರ್ಥ ಸಾಗಾಣಿಕೆ ಮತ್ತು ಕೊಲೆ ಮಾಡಿದವರಿಗೆ ಜೀವಾವಧಿ ಶಿಕ್ಷೆ

4. ಕಳವು ನಡೆಸಿದ್ದಲ್ಲಿ – ಮೂರು ವರ್ಷಕ್ಕಿಂತ ಹೆಚ್ಚಾಗದ ಜೈಲು ಶಿಕ್ಷೆ

5. ನಂಬಿಕೆ ದ್ರೋಹ, ಮೂರು ವರ್ಷಗಳ ಸೆರೆವಾಸ ಮತ್ತು ದಂಡ

6. ಜೂಜು – ಎರಡು ವರ್ಷಗಳ ಸೆರೆವಾಸ 20,000 ದಿರ್ಹಂ ದಂಡ

7. ವಂಚನೆ ಮತ್ತು ಮೋಸ – ಮೂರು ವರ್ಷಗಳ ಜೈಲು

8. ದಾಖಲೆಗಳಲ್ಲಿ ಮೋಸ ಮಾಡಿಕೊಂಡರೆ, 10 ವರ್ಷಗಳವರೆಗೆ ಜೈಲು ಶಿಕ್ಷೆ

9. ಲಂಚ ಪಡೆದರೆ 10 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು

10. ಲಂಚ ಆಮಿಷ ನೀಡಿದರೆ, ಅದು ಐದು ವರ್ಷಗಳ ವರೆಗೆ ಜೈಲು

11. ಸುಳ್ಳು ಆರೋಪಗಳು – ಆರು ತಿಂಗಳ ಜೈಲು ಮತ್ತು 3000 ದಿರ್ಹಂ ದಂಡ ಪಾವತಿಸ ಬೇಕಾದ ಅಪರಾಧವಾಗಿರುತ್ತದೆ.

error: Content is protected !! Not allowed copy content from janadhvani.com