janadhvani

Kannada Online News Paper

ಹೊಸನಗರದಲ್ಲಿ ವಿಜೃಂಭಣೆಯ ಧ್ವಜ ದಿನ

ಹೊಸನಗರ (ಜನಧ್ವನಿ ವಾರ್ತೆ): ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ಹ 30ನೇ ವರ್ಷಕ್ಕೆ ಪಾದಾರ್ಪಣೆಗೆಯ್ಯುವ ಸಂಭ್ರಮದಲ್ಲಿ ಜನಾಬ್ ಮುಹಮ್ಮದಲಿ ಮದನಿಯವರ ದುಆ ಮೂಲಕ SSF ಅಧ್ಯಕ್ಷರಾದ ನಿಝಾಮುಯದ್ದೀನ್ ಕಬ್ಬಿನಮಕ್ಕಿ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಜಯನಗರ ಮಸೀದಿ ಖತೀಬರಾದ ಉಮರುಲ್ ಫಾರೂಕ್ ಝುಹ್ರಿ ವಿಷಯ ಮಂಡಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಜನಾಬ್ ಅಲ್ತಾಫ್, ಜಾಮಿಯಾ ಮಸೀದಿಯ ಮುಲ್ಲಾ ಬಾಸಿತ್, ಸೋಪಾ ನಜೀರ್, ಅಶ್ರಫ್ ಗುಲ್ವಾಡಿ, ಎಲೆಕ್ಟ್ರೇಶನ್ ಇಸ್ಮಾಯಿಲ್ ಹಾಗೂ SYS SSF SBS ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯುವ ನಾಯಕ ಇಂತಿಯಾಝ್ ಗುಲ್ವಾಡಿ ಸ್ವಾಗತಿಸಿದರು, ಕಾರ್ಯದರ್ಶಿ ಸಯ್ಯದ್ ವಂದಿಸಿದರು.

error: Content is protected !! Not allowed copy content from janadhvani.com