ಬನ್ನೂರು:- ಕರ್ನಾಟಕ ಸುನ್ನೀ ಸ್ಟೊಡೆಂಟ್ ಫೆಡರೇಶನ್ ಇದರ 30ನೇ ಸಂವತ್ಸರಕ್ಕೆ ಕಾಲುಡುತ್ತೀರುವ ಸಂಭ್ರಮದಲ್ಲಿ ,ಕರ್ನಾಟಕದ ಪ್ರಪ್ರಥಮ ಎಸ್ಸೆಸ್ಸೆಫ್ ಬನ್ನೂರು ಶಾಖೆ ವತಿಯಿಂದ ಧ್ವಜರೋಹಣ ಮಾಡುವುದರೊಂದಿಗೆ “ಧ್ವಜದಿನ”ವನ್ನು ಬನ್ನೂರಿನ ಜಂಕ್ಷನ್‌ನಲ್ಲಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಟುಂಗೋಳಿ “ಸ್ವಚ್ಛ ಭಾವನೆಗಳಿಂದ ಮಾತ್ರ ಸ್ವಚ್ಛ ಭಾರತ ನಿರ್ಮಿಸಲು ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸಯದ್ ಉಮ್ಮರ್ ತಂಙಳ್ ದುಃಆ ಆಶಿರ್ವಚನ ಮಾಡಿದರು.
ಎಸ್ಸೆಸ್ಸೆಫ್ ಜಿಲ್ಲಾದ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಹಾಗೂ ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಅಧ್ಯಕ್ಷ ಅಬ್ದುಲ್ ರಝಾಕ್ ಸಹದಿ ಪ್ರಸ್ತಾವಿಕ ಮಾತನಾಡಿದರು.
ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದ್ಯಸ ಅಡ್ವಕೇಟ್ ಶಾಕೀರ್ ಹಾಜಿ ಶುಭಹಾರೈಸಿದರು.
ಎಸ್ಸೆಸ್ಸೆಫ್ ಬನ್ನೂರು ಶಾಖೆ ಸಮ್ಮೇಳನವೂ ಅಕ್ಟೊಬರ್ 28ರಂದು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಬನ್ನೂರು ಎಸ್.ವೈ.ಎಸ್ ಬ್ರಾಂಚ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ , ಸುನ್ನೀ ಸೆಂಟರ್ ಅಧ್ಯಕ್ಷ ಫಾರೋಕ್ ಬನ್ನೂರು, ದಅ್‌ವಾ ವಿಂಗ್ ಪ್ರಮುಖರಾದ ಅಬೂಶಝಾ ಉಸ್ತಾದ್ ಹಾಗೂಇಕ್ಬಾಲ್ ಬಪ್ಪಳಿಗೆ ,ಸುನ್ನೀ ಸೆಂಟರ್ ಕಾರ್ಯದರ್ಶಿ ಹಮೀದ್ ಲಕ್ಕೀ ಸ್ಟಾರ್, ಪುತ್ತೂರು ಟೌನ್ ಅಧ್ಯಕ್ಷ ಸಲೀಂ ಮುರ , ಎಸ್ಸೆಸ್ಸೆಫ್ ಬನ್ನೂರು ಶಾಖೆ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಬನ್ನೂರು, ಉಪಾಧ್ಯಕ್ಷ ಸಮೀರ್ ಅಕ್ಕರೆ, ಜಿಸಿಸಿ ಕಾರ್ಯಕರ್ತ ಹನೀಫ್ ಬನ್ನೂರು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಸ್.ವೈ.ಎಸ್. ಬ್ರಾಂಚ್ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು ಸ್ವಾಗತಿಸಿ ಮತ್ತು ವಂದಿಸಿದರು.
ವರದಿ:-ಇಬ್ರಾಹಿಂ ಖಲೀಲ್ ಬನ್ನೂರು