janadhvani

Kannada Online News Paper

ಯುಎಇಯಲ್ಲಿ ವಾಟ್ಸಾಪ್ ಕಾಲ್ ಅನುಮತಿಸಲಾಗಿದೆಯೇ?

ದುಬೈ: ಯುಎಇಯಲ್ಲಿ ವಾಟ್ಸ್ ಆ್ಯಪ್ ಕಾಲ್ ಅನ್ನು ಅನುಮತಿಸಲಾಗಿದೆ ಎನ್ನುವ ಊಹೆಗಳಿಗೆ ಯುಎಇ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟಿಆರ್ಎ) ಸ್ಪಷ್ಟನೆ ನೀಡಿದೆ. ಆ ಬಗ್ಗೆ ವದಂತಿಗಳು ತಪ್ಪು ಎಂದು ಅದು ಸ್ಪಷ್ಟಪಡಿಸಿದೆ.

ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಊಹೆಗಳನ್ನು ಪ್ರಚಾರಪಡಿಸುತ್ತಿರುವ ಹಿನ್ನೆಲೆಯಲ್ಲಿ ಟಿಆರ್ಎ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿರುವುದಾಗಿ ಇಮಾರಾತ್ ಅಲ್ ಯವ್ಮ್ ವರದಿ ಮಾಡಿದೆ.

ಸಾಮಾಜಿಕ ತಾಣಗಳಲ್ಲಿ ಹರಡುತ್ತಿರುವ ಸುದ್ದಿ ಸುಳ್ಳು ಮತ್ತು ನಂಬಲಾಗದು ಎಂದು ವರದಿ ಹೇಳುತ್ತದೆ.ಕೆಲವು ಯುಎಇ ನಿವಾಸಿಗಳು ವೈಫೈ ಬಳಸಿ ವಾಟ್ಸ್ ಆ್ಯಪ್ ಮೂಲಕ ಕರೆ ಮಾಡಲು ಸಮರ್ಥರಾಗಿದ್ದರು ಎಂದು ಪ್ರಚಾರ ಪಡಿಸಲಾಗಿತ್ತು. ದೇಶದ ನಿಯಂತ್ರಿತ ಕಾನೂನಿನೊಳಗೆ ಮಾತ್ರ ಯಾವುದೇ ಅಪ್ಲಿಕೇಶನ್ ಅನ್ನು ಬಳಸಬೇಕೆಂದು ಟಿಆರ್‌ಎ ಮತ್ತೊಮ್ಮೆ ಎಚ್ಚರಿಸಿದೆ.

ಯುಎಇಯ ಪ್ರಮುಖ ಉದ್ಯಮಿ ಖಲಾಫ್ ಅಲ್-ಹಾಬ್ತೋರ್ ಕಳೆದ ವಾರ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದ್ದರು,ವಿಒಐಪಿ ಗೆ ಸಂಬಂಧಿಸಿದ ಅಡೆತಡೆಗಳನ್ನು ತೆಗೆದುಹಾಕಲು ಅವರು ಯುಎಇ ಟೆಲಿಕಾಂ ಅಧಿಕಾರಿಗಳಿಗೆ ಆ ಮೂಲಕ ಒತ್ತಾಯಿಸಿದ್ದರು.ಯುಎಇನಲ್ಲಿರುವ ಜನರು ವ್ಯಾಟ್ಸಾಪ್ ಮತ್ತು ಸ್ಕೈಪ್ ಬಳಸಿಕೊಂಡು ಉಚಿತ ದೂರವಾಣಿ ಕರೆಗಳನ್ನು ಮಾಡುವ ಅವಕಾಶವನ್ನು ನೀಡಬೇಕೆಂದು ಖಲಾಫ್ ಅಲ್-ಹಬ್ತೋರ್ ಹೇಳಿದ್ದರು.

error: Content is protected !! Not allowed copy content from janadhvani.com