ಮನ್-ಶರ್ ಕೃಷಿ ಕ್ಷೇತ್ರದ ಹೊಸ ಹೆಜ್ಜೆಯಾದ ಮಿಲ್ಕಾಸ್ ಡೈರಿ ಇದರ ಅಧಿಕೃತ ವೆಬ್ಸೈಟ್ ಲೋಕಾರ್ಪಣೆ

Manshar Agro products Pvt Ltd ಅಧೀನದಲ್ಲಿ ಬೆಳ್ತಂಗಡಿಯಲ್ಲಿ ಕಾರ್ಯಾರಂಭಗೊಳ್ಳಲು ತಯಾರಾಗುತ್ತಿರುವ ಮಿಲ್ಕಾಸ್ ಡೈರಿ ಯೋಜನೆಯ ಅಧಿಕೃತ Website page *www.milqas.com* ಸೌದಿ ಅರೇಬಿಯಾದ ಅಲ್-ಜುಬೈಲ್ ನ ಹೋಟೆಲ್ ರೋಯಲ್ ಡೈನ್ ನಲ್ಲಿ ದಿನಾಂಕ 14/09/2018ನೇ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ Manshar Agro products Pvt Ltd ಮ್ಯಾನೇಜಿಂಗ್ ಡೈರೆಕ್ಟರ್ ಸಯ್ಯದ್ ಉಮರ್ ಅಸ್ಸಖಾಫ್  ಚಾಲನೆ ನೀಡಿದರು.

Manshar Agro products Pvt Ltd ಕಂಪನಿ ಅಧೀನದಲ್ಲಿ ಮಿಲ್ಕಾಸ್ ನಾಮಾಂಕಿತದಲ್ಲಿ ಜನರಿಗೆ ಉತ್ತಮವಾದ ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾರುಕಟ್ಟೆಗಿಳಿಸಿ,ಜನರನ್ನು ಉದ್ಯೋಗ ರಂಗದಲ್ಲಿ ಪ್ರೋತ್ಸಾಹಿಸಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಪ್ರೋತ್ಸಾಹಿಸುವ ಬಲುದೊಡ್ಡ ಯೋಜನೆ ಇದಾಗಿದ್ದು ಅದರ ಹೆಜ್ಜೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶವನ್ನು Website ಪೇಜ್ ಹೊಂದಿದ್ದು ಪ್ರತಿಯೊಬ್ಬರ ಸಹಕಾರವನ್ನು ಸಯ್ಯದ್ ಉಮರ್ ಅಸ್ಸಖಾಫ್ ಅಪೇಕ್ಷಿಸಿದರು.

ಕಾರ್ಯಕ್ರಮದಲ್ಲಿ ಮನ್-ಶರ್ ಸಿದ್ರಾ ಮ್ಯಾನೇಜರ್ ಅಬ್ದುಲ್ಲ ಸಖಾಫಿ ನಿಂತಿಕಲ್,ಮನ್-ಶರ್ ಸೌದಿ ರಾಷ್ಟೀಯ ಸಮಿತಿ ಕಾರ್ಯದರ್ಶಿಯಾದ ಆಸಿಫ್ ಗೂಡಿನಬಳಿ,ಸಯ್ಯದ್ ಅಹ್ಮದ್ ಪೂಕುಂಙಿ ತಂಙಲ್ ಉಪ್ಪಿನಂಗಡಿ,ಮುಹಮ್ಮದ್ ಅಲಿ ಉಪ್ಪಿನಂಗಡಿ, ಅಶ್ರಫ್ ಕೆಎಂಎಸ್,ನೀರಕಟ್ಟೆ(ಕಾರ್ಯದರ್ಶಿ,ಮನ್’ಶರ್ ರಿಯಾದ್ ) ಹಾಗೂ ಕೆ.ಸಿ.ಎಫ್ ಮತ್ತು ಮನ್-ಶರ್ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!