ರಿಯಾದ್: ಸೌದಿ ಅರೇಬಿಯದಲ್ಲಿ 12 ಸಣ್ಣ ಉದ್ಯಮ ವಲಯಗಳಲ್ಲಿ ಘೋಷಿಸಲಾದ ಸ್ವದೇಶೀಕರಣದ ಮೊದಲ ಹಂತವು ಬುಧವಾರದಿಂದ ಜಾರಿಗೆ ಬಂದಿದೆ. ಇದರೊಂದಿಗೆ, ಭಾರತೀಯರು ಸೇರಿದಂತೆ ನೂರಾರು ವಿದೇಶಿಯರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ. ಸಿದ್ದ ಉಡುಪುಗಳು,ಪೀಠೋಪಕರಣಗಳು, ಪಾತ್ರೆಗಳು, ಬಿಡಿಭಾಗಗಳು ಮತ್ತು ಕಾರ್ಪೆಟ್ ಗಳು ಮುಂತಾದ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವ ಸಣ್ಣ ವ್ಯವಹಾರ ಕೇಂದ್ರಗಳಲ್ಲಿ ಈ ಹೊಸ ನೀತಿ ಜಾರಿಗೆ ಬರಲಿದೆ.
ಶೇ 70 ರಷ್ಟು ಮೊದಲ ಹಂತದಲ್ಲಿ ಸ್ವದೇಶೀಕರಣ ಜಾರಿಗೊಳಿಸಲಾಗುತ್ತಿದ್ದು, ನಿರುದ್ಯೋಗವನ್ನು ನಿಭಾಯಿಸಲು ಮತ್ತು ಸ್ವದೇಶಿಗಳಿಗೆ ಹೆಚ್ಚಿನ ಅವಕಾಶಗಳನ್ನು ಪಡೆಯಲು ಸಣ್ಣ ವ್ಯವಹಾರಗಳಾದ್ಯಂತ ಈ ನೀತಿಯನ್ನು ವಿಸ್ತರಿಸಲಾಗಿದೆ. ಈ ವರ್ಷ ಜನವರಿ 28 ರಂದು ಕಾರ್ಮಿಕ ಸಚಿವಾಲಯವು 12 ವಲಯಗಳಲ್ಲಿ ಸಂಪೂರ್ಣ ದೇಶೀಕರಣವನ್ನು ಘೋಷಿಸಿದ್ದವು. ನಂತರ, ವಾಣಿಜ್ಯೋದ್ಯಮಿಗಳು ಮತ್ತು ವ್ಯಾಪಾರಿ ಚೇಂಬರ್ಗಳ ಬೇಡಿಕೆಯಂತೆ ಶೇ.70 ರಷ್ಟು ದೇಶೀಕರಣ ಮಾಡುವಂತೆ ಆದೇಶ ನೀಡಲಾಗಿದೆ.
ಆದಾಗ್ಯೂ ಭಾರತೀಯರ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿ ಕೊಂಡಿರುವ ಕಿರಾಣಿ ಅಂಗಡಿಯನ್ನು ಘೋಷಣೆಯಿಂದ ದೂರ ಇಡಲಾಗಿತ್ತು. ಕಾರ್ಮಿಕ ಸಚಿವಾಲಯವು ಗ್ರೋಸರಿಗಳಲ್ಲಿ ಸ್ವದೇಶೀಗಳನ್ನು ನೇಮಕಗೊಳಿಸುವಂತೆ ಸೂಚನೆ ನೀಡಿದೆ ಎಂಬ ವರದಿ ಪ್ರಚಾರಪಡಿಸಲಾಗಿತ್ತು. ಇದು ಸತ್ಯಕ್ಕೆ ದೂರ ಎಂದು ಇಲಾಖೆ ವ್ಯಕ್ತಪಡಿಸಿದೆ.















ಇನ್ನಷ್ಟು ಸುದ್ದಿಗಳು
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ
ವಿಮಾನ ನಿಲ್ದಾಣದ ಮೇಲೆ ದಾಳಿ: ಉಮ್ರಾಗೆ ಬಂದಿದ್ದ ಬಾಂಗ್ಲಾದೇಶದ ಶಿಕ್ಷಕನಿಗೆ ದಾರುಣ ಅಂತ್ಯ