ಮಕ್ಕಾ: ಹಜ್ ನಿರ್ವಹಣೆಗಾಗಿ ಬಂದುದ್ದ ಕೋಝಿಕ್ಕೋಡ್ ಕಡಲುಂಡಿ ಸ್ವದೇಶಿ ಬಶೀರ್ ಅವರು ಹೋಟೆಲ್‌ನ ಲಿಫ್ಟ್‌ನಿಂದ ಬಿದ್ದು ಮೃತಪಟ್ಟಿದ್ದು, ಲಿಫ್ಟ್ ಕಂಪೆನಿಯ ಅನಾಸ್ತೆಯೇ ಕಾರಣ ಎಂದು ತಿಳಿದುಬಂದಿದೆ. ದುರಸ್ತಿ ನಡೆಯುವ ಬಗ್ಗೆ ಎಚ್ಚರಿಕೆ ನೀಡದಿರುವುದೇ ಮರಣಕ್ಕೆ ಕಾರಣ ಎನ್ನಲಾಗಿದೆ. ಬಶೀರ್ ಲಿಫ್ಟ್ ಅನ್ನು ಏರುವ ಸಿಸಿಟಿವಿ ದೃಶ್ಯಗಳು ಹೊರಬಂದಿವೆ. ಇದು ಲಿಫ್ಟ್ ರಿಪೇರಿ ಕಂಪೆನಿಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.
ಕೇರಳ ರಾಜ್ಯ ಹಜ್ ಸಮಿತಿಯ ಮೂಲಕ ಬಶೀರ್ ಹಜ್ ನಿರ್ವಹಿಸಲು ಪತ್ನಿಯೊಂದಿಗೆ ಬಂದಿದ್ದರು. ಅಝೀಝಿಯಾ ವಿಭಾಗದಲ್ಲಿ 300ನೇ ಕಟ್ಟಡದಲ್ಲಿ ಭಾರತೀಯ ಹಜ್ ಮಿಶನ್ ಅವರಿಗೆ ನಿವಾಸ ಒದಗಿಸಿತ್ತು. ಕಟ್ಟಡದಲ್ಲಿ ಬಶೀರ್ ಸಂಬಂಧಿಕರೂ ಸಹ ಇದ್ದರು. ಈ ಕಟ್ಟಡದಲ್ಲಿನ ಹೆಚ್ಚಿನ ಸಿಬ್ಬಂದಿಗಳು ಕೇರಳೀಯರು ಎನ್ನಲಾಗಿದೆ.
ಕೆಳಗಿನ ಅಂತಸ್ತಿನಲ್ಲಿದ್ದವರು ಆಹಾರ ಪಡೆಯುವಂತೆ ಕರೆದಾಗ ಲಿಫ್ಟ್ ಮೂಲಕ ಕೆಳಗೆ ಇಳಿದ ಬಶೀರ್ ಕಾಣೆಯಾಗಿದ್ದರು. ಕಂದಕದಲ್ಲಿ ಲಿಫ್ಟ್ ಪತ್ತೆಯಾಗಿತ್ತು. ಹುಡುಕಾಟ ನಡೆಸಿದಾಗ, ಹಾಳಾದ ಲಿಫ್ಟ್‌ನ ಗುಂಡಿಯಲ್ಲಿ ಮೃತದೇಹ ಪತ್ತೆಯಾಗಿದ್ದವು. ಕೇಡಾದ ಲಿಫ್ಟ್ ಆಫ್ ಮಾಡಿ ಎಚ್ಚರಿಕೆ ಫಲಕವನ್ನು ಇರಿಸ ಬೇಕು ಎನ್ನುವುದು ಕಾನೂನಾಗಿದೆ. ಹಾಜಿ ಕಾಣೆಯಾಗಿದ್ದಾಗ, ಸಂಬಂಧಿಗಳು ಆರಂಭದಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಹೋಟೆಲ್ ಅಧಿಕಾರಿಗಳನ್ನು ಕೇಳಿಕೊಂಡಾಗ ಅವರು ಕೂಡಾ ನಿರಾಕರಿಸಿದ್ದರು.
ಒತ್ತಾಯಕ್ಕೆ ಮಣಿದು ನಂತರ ದೃಶ್ಯಗಳನ್ನು ಪರೀಕ್ಷಿಸಲಾಯಿತು. ವೀಡಿಯೊದಲ್ಲಿ ಬಶೀರ್ ಲಿಫ್ಟ್ ನ ಮುಂಭಾಗದಲ್ಲಿ ನಿಂತಿರುವುದು ಕಾಣ ಬಹುದು ಮತ್ತು ಬಾಗಿಲನ್ನು ತೆರೆದು ಹೊಳಗೆ ಹೊಕ್ಕಿದಾಗ ಬಾಗಿಲು ಮುಚ್ಚುತ್ತದೆ. ಲಿಫ್ಟ್ ಹೊಕ್ಕಿದ ಕೂಡಲೇ ಅವರು ಕೆಳಗೆ ಬಿದ್ದಿದ್ದರು ಎನ್ನಲಾಗಿದೆ. ತನಿಖೆ ನಡೆಯುತ್ತಿದೆ.