ಮಂಗಳೂರು: ಭಾರೀ ಮಳೆಯ ಕಾರಣದಿಂದಾಗಿ ಶಿರಾಡಿ ಘಾಟಿಯ ಎರಡೂ ಕಡೆಗಳಿಂದ ಪ್ರಯಾಣ ಮಾಡಲು ಅಡಚಣೆಯುಂಟಾಗಿ ಸುಮಾರು 300 ಕ್ಕಿಂತಲೂ ಅಧಿಕ ವಾಹನಗಳಲ್ಲಿ ಸಾವಿರಕ್ಕಿಂತಲೂ ಅಧಿಕ ಪ್ರಯಾಣಿಕರು ಘಾಟಿ ಮಧ್ಯೆ ಸಿಲುಕಿಕೊಂಡು ನಿನ್ನೆ ಸಂಜೆಯಿಂದಲೇ ಅನ್ನ-ಪಾನೀಯ ಇಲ್ಲದೆ ತೀವ್ರ ತರದ ಸಂಕಷ್ಟದಲ್ಲಿದ್ದರು.ಅವರ ಸೇವೆಗಾಗಿ SSF ಉಪ್ಪಿನಂಗಡಿ ಡಿವಿಶನ್ ಇದರ ನೆಲ್ಯಾಡಿ ಸೆಕ್ಟರ್ ವ್ಯಾಪ್ತಿಯ ಸುಮಾರು 20 ರಷ್ಟು ಕಾರ್ಯಕರ್ತರ “SSF ಉಪ್ಪಿನಂಗಡಿ ಡಿವಿಶನ್ HELP LINE” ತಂಡವು ಶಿರಾಡಿ ಘಾಟಿ ಪ್ರದೇಶಕ್ಕೆ ತೆರಳಿ ಸಂಕಷ್ಟದಲ್ಲಿದ್ದ ಪ್ರಯಾಣಿಕರಿಗೆ ನೀರು, ಆಹಾರ ಪೊಟ್ಟಣಗಳನ್ನು ವಿತರಿಸಿತು.ಇನ್ನೊಂದೆಡೆ ವಾಹನಗಳ ದಟ್ಟನೆ ಹಾಗೂ ಅಲ್ಲಲ್ಲಿ ಮಣ್ಣು-ಮರಗಳು ರಸ್ತೆಗೆ ಕುಸಿದು ಬಿದ್ದು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ಘಾಟಿ ಪ್ರದೇಶಗಳಲ್ಲಿ ಟ್ರಾಫಿಕ್ ತೆರವುಗೊಳಿಸಿ ಸುಲಭ ಸಂಚಾರಕ್ಕೆ ಅನುವುಮಾಡಿಕೊಟ್ಟಿತು.
ಮತ್ತು ಬೆಳಗ್ಗಿನಿಂದ ಶಿರಾಡಿ ಘಾಟ್ ನಿಂದ ಉಪ್ಪಿನಂಗಡಿ ವರೆಗೆ ಸಂಚರಿಸಿ, ತೀವ್ರ ತರದ ಮಳೆಯಿಂದಾಗಿ ಉಂಟಾಗಿದ್ದ ಟ್ರಾಫಿಕ್ ಮತ್ತು ಇನ್ನಿತರ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಪರಿಹರಿಸುವ ಸಲುವಾಗಿ ತಂಡವು ನಿರಂತವಾದ ಕಾರ್ಯಾಚರಣೆಯನ್ನು ನಡೆಸಿತು.
ಸಮಾಜ ಸೇವಕರಾದ ಕೆ.ಇ ಅಬೂಬಕ್ಕರ್ SSF ಅಧ್ಯಕ್ಷ ರಿಯಾ ನೆಲ್ಯಾಡಿ, ಸೆಕ್ಟರ್ ಕಾರ್ಯದರ್ಶಿ ಮುಸ್ತಫಾ ರಹಿಮಾನ್, ಉಪಾಧ್ಯಕ್ಷ ಅಶ್ರಫ್ ಸಿ.ಎಂ ಕಾರ್ಯಕರ್ತರಾದ ರಫೀಕ್, ನೌಷಾದ್, ಹಬೀಬ್, ಅರ್ಶಾದ್,ಆದಂ, ಮೊದಲಾದವರು ತಂಡದಲ್ಲಿದ್ದರು.
Amiin