ಮಕ್ಕಾ: ಈ ವರ್ಷದ ಪವಿತ್ರ ಹಜ್ ಯಾತ್ರೆಗಾಗಿ ವಿಶ್ವದ ವಿವಿಧ ಕಡೆಗಳಿಂದ ಆಗಮಿಸುವ ಹಾಜಿಗಳ ರಕ್ಷಣೆಗಾಗಿ ಹೆಲಿಕಾಪ್ಟರ್ ಗಳನ್ನು ಸಜ್ಜುಗೊಳಿಸಲಾಗಿದೆ.
ಮಕ್ಕಾ ಮತ್ತು ಮದೀನಾದ ಟ್ರಾಫಿಕ್ ನಿರೀಕ್ಷಣೆ, ಎರಡು ಹರಮ್‌ಗಳಲ್ಲಿನ ಯಾತ್ರಿಗಳ ದಟ್ಟಣೆಯ ನಿರೀಕ್ಷಿಸಲು ಮತ್ತು ಹಜ್ ಯಾತ್ರಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸಲು ಹೆಲಿಕಾಪ್ಟರ್ ಗಳನ್ನು ಬಳಸಲಾಗುತ್ತದೆ.
ಹೆಲಿಕಾಪ್ಟರ್ಗಳ ನಿಯಂತ್ರಣವನ್ನು ವಿಶೇಷ ತರಬೇತಿ ಪಡೆದ ಸೈನಿಕರು ವಹಿಸಲಿದ್ದಾರೆ. ಹೆಲಿಕಾಪ್ಟರ್ಗಳಲ್ಲಿ ಕ್ಯಾಮೆರಾಗಳ ಮೂಲಕ 24 ಗಂಟೆಗಳೂ ವೀಡಿಯೊ ಚಿತ್ರೀಕರಣ ನಡೆಸಲಾಗುತ್ತದೆ.ವರದಿಗಳು ಮತ್ತು ಚಿತ್ರೀಕರಣವನ್ನು ಅದು ಕ್ಷಣದಲ್ಲೇ ನಿಯಂತ್ರಣ ಕೊಠಡಿಗೆ ತಲುಪಿಸುತ್ತದೆ ಮತ್ತು ತುರ್ತು ಆರೋಗ್ಯ ಸೇವೆಗಳನ್ನು ಖಾತರಿಪಡಿಸಲು ಇದು ಸಹಕಾರಿಯಾಗಲಿದೆ.
ಮೀನಾ, ಅರಫಾ, ಮುಝ್ದಲಿಫಾ ಮುಂತಾದೆಡೆ ವಿಶೇಷ ಹೆಲಿಪ್ಯಾಡ್‌ಗಳನ್ನು ಸ್ಥಾಪಿಸಲಾಗಿದೆ.ಪ್ರತ್ಯೇಕ ಪರಿಶೀಲನೆ ಲಭಿಸಿರುವ ಐನೂರ ಇಪ್ಪತ್ತಾರು ಭದ್ರತಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ವಿಶೇಷ ತಂಡವನ್ನು ಹೊಂದಿದ್ದೇವೆ ಎಂದು ಏವಿಯೇಷನ್ ಸೆಕ್ಯುರಿಟಿ ಕಮಾಂಡರ್ ಇನ್ ಚೀಫ್ ಜನರಲ್ ಇಂಜಿನಿಯರ್ ಝಾಹಿದ್ ಅಲ್ ಬಸ್ಸಾಮ್ ಹೇಳಿದ್ದಾರೆ