janadhvani

Kannada Online News Paper

ಮಕ್ಕಾ ತಲುಪಿದ ಕರ್ನಾಟಕ ಹಾಜಿಗಳ ತಂಡ : ಬರಮಾಡಿಕೊಂಡ ಕೆಸಿಎಫ್ ಹೆಚ್.ವಿ.ಸಿ ಕಾರ್ಯಕರ್ತರು

ದಣಿದ ಹಜ್ಜಾಜ್ ಗಳಿಗೆ ಝಂ ಝಂ ನೀರು ಕೊಟ್ಟು, ತಮ್ಮ ಕೊಠಡಿ ಗಳಿಗೆ ತಲುಪಿಸುತ್ತಿರುವ ಹೆಚ್ ವಿಸಿ ಕಾರ್ಯಕರ್ತರು

ಮಕ್ಕಾ: ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಮಂಗಳೂರಿನಿಂದ ಆಗಮಿಸಿದ ಹಜ್ಜಾಜಿಗಳ ಮೊದಲ ತಂಡ ಮದೀನಾದಲ್ಲಿ 8 ದಿವಸಗಳ ಕಾಲ ಝಿಯಾರತ್ ನಡೆಸಿ , ಹಜ್ಜ್ ಕರ್ಮ ನಿರ್ವಹಿಸಲು ಮಕ್ಕಾ ತಲುಪಿದ್ದಾರೆ.ಕರ್ನಾಟಕ ಕಲ್ಚರಲ್ ಫೌಂಡೇಶನ್ ಹಜ್ಜ್ ವಾಲೇಂಟಿಯರ್ ಕೋರ್ ಸದಸ್ಯರು ಮಂಗಳೂರಿನ ಮೊದಲ ಹಜ್ಜಾಜಿಗಳ ತಂಡವನ್ನು ಬಹಳ ಆದರದಿಂದ ಬೀಳ್ಕೊಟ್ಟರು.

ಹಜ್ಜಾಜಿಗಳ ಲಗೇಜ್ ಗಳನ್ನು ಪ್ಯಾಕ್ ಮಾಡಲು ಸಹಕರಿಸಿದ ಮದೀನಾ ಹೆಚ್.ವಿ.ಸಿ ಕಾರ್ಯಕರ್ತರು, ಹಾಜಿಗಳ ಕೊಠಡಿಗಳಿಂದ ಲಗೇಜ್ ಗಳನ್ನು ಬಸ್ ಗೆ ಸಾಗಿಸಲು ನೆರವಾದರು. ಹಜ್ಜಾಜಿಗಳ ತಂಡ ಮಕ್ಕಾ ನಗರದ ಅಫಯಾರ್ ಹಾಗೂ ಅಝೀಝಿಯಾ ತಲುಪಿದ್ದೆ ತಡ, ಮಕ್ಕಾದಲ್ಲಿರುವ ಹೆಚ್.ವಿ.ಸಿ ಕಾರ್ಯಕರ್ತರು ದಣಿದ ಹಜ್ಜಾಜಿಗಳಿಗೆ ಝಂ ಝಂ ನೀರು, ಫಲಹಾರ ಕ್ವಿಟ್ ನೀಡಿ ಸ್ವಾಗತಿಸಿದರು.

ಹೆಚ್ ವಿಸಿ ಹಜ್ ತರಬೇತಿ ದಾರರಾದ ಉಮರ್ ಮದನಿ,ಕಾಮಿಲ್ ಸಖಾಫಿ ಪರಪ್ಪು ಮತ್ತು ಹೆಚ್ ವಿಸಿ ಸೆಕ್ಟರ್ ಕ್ಯಾಪ್ಟನ್ ಹನೀಫ್ ಸಖಾಫಿ ಬೊಳ್ಮಾರ್ ಉಮ್ರಾ ನಿರ್ವಹಣೆಗೆ ನೇತೃತ್ವ ನೀಡುತ್ತಿರುವುದು

ಹಜ್ಜಾಜಿಗಳು ತಂಗುವ ರೂಮ್ ಗಳಿಗೆ ತೆರಳಿದ ಮಕ್ಕಾ ಹೆಚ್.ವಿ.ಸಿ ಕಾರ್ಯಕರ್ತರು, ಆಯಾಸದಿಂದ ಬಂದ ಹಜ್ಜಾಜ್ ಗಳ ಲಗೇಜ್ ಗಳನ್ನು ಅವರವರ ಕೊಠಡಿಗಳಿಗೆ ತಲುಪಿಸಲು ಸಹಕರಿಸಿದ್ದು, ಹಾಜಿಗಳಿಗೆ ಉಮ್ರಾ ನಿರ್ವಹಿಸಲು ಅಮೀರ್ ವ್ಯವಸ್ಥೆಯನ್ನು ಕೂಡ ಕಲ್ಪಿಸಿದ್ದಾರೆ.ನಾವು ಮಂಗಳೂರು ತಲುಪಿದರೆ ನಮ್ಮನ್ನು ಯಾವ ರೀತಿ ನಮ್ಮ ಬಂಧುಬಳಗದವರು ಆದರದಿಂದ ಸ್ವಾಗತಿಸುತ್ತಾರೆಯೋ, ಆ ರೀತಿ ಮಕ್ಕಾದಲ್ಲಿರುವ ಕೆಸಿಎಫ್ ಕಾರ್ಯಕರ್ತರು ನಮ್ಮನ್ನು ಸ್ವಾಗತಿಸಿದರು.

ವಾರದ ಹಿಂದೆ ಮಂಗಳೂರಿನಿಂದ ಮದೀನಾ ಏರ್ಪೋರ್ಟ್ ತಲುಪಿದ ಸಂಧರ್ಭ ಆಯಾಸ ಹಾಗೂ ಗಲಿಬಿಲಿಯಿಂದ ನನ್ನ ಬಳಿಯಿದ್ದ ಪಾಸ್‌ಪೋರ್ಟ್, ಮತ್ತಿತರ ದಾಖಲೆ ಹಾಗೂ ಸೌದಿ ರಿಯಾಲ್ ಗಳಿದ್ದ ಕವರ್ ಏರ್ಪೋರ್ಟ್ ಸಿಬ್ಬಂದಿ ಗೆ ನೀಡಿದ್ದು ಆತ ಹಣವನ್ನು ನನಗೆ ಹಿಂತಿರುಗಿಸಿಲ್ಲ. ಈ ಬಗ್ಗೆ ಮದೀನಾದಲ್ಲಿ ಕೆಸಿಎಫ್ ಕಾರ್ಯಕರ್ತರಿಗೆ ತಿಳಿಸಿದ್ದು, ತಕ್ಷಣ ಕಾರ್ಯ ಪ್ರವೃತರಾದ ಕೆಸಿಎಫ್ ತಂಡ ನನ್ನ ಹಣವನ್ನು ಹಿಂತಿರುಗಿ ಪಡೆಯಲು ಸಹಕರಿಸಿದ್ದಾರೆ ಎಂದು ಬಜ್ಪೆಯಿಂದ ಆಗಮಿಸಿದ ಇಸ್ಮಾಯಿಲ್ ಹಾಜಿ ತಿಳಿಸಿದರು.

ಮದೀನಾದಿಂದ ಮಕ್ಕಾ ಕ್ಕೆ ಆಗಮಿಸಿದ ನಮಗೆ ಕೆಸಿಎಫ್ ಕಾರ್ಯಕರ್ತರು ಉತ್ತಮ ಸಹಾಯ-ಸಹಕಾರವನ್ನು ನೀಡಿದ್ದಾರೆ ಎಂದು ಎಸ್.ವೈ.ಎಸ್ ಉಳ್ಳಾಲ ಸುಂದರಭಾಗ್ ಬ್ರಾಂಚ್ ನಾಯಕ ಅಹ್ಮದ್ ಉಳ್ಳಾಲ ತಿಳಿಸಿದ್ದಾರೆ.

ಅಕ್ಬರ್ ಅಲಿ ಉಡುಪಿಯವರು ತಮ್ಮ ಕುಟುಂಬ ಸಮೇತ ಹಜ್ ಕರ್ಮ ನಿರ್ವಹಿಸಲು ಆಗಮಿಸಿದ್ದು,ಕೆಸಿಎಫ್ ಕಾರ್ಯಕರ್ತರ ಸೇವೆಯನ್ನು ಮುಕ್ತಕಂಠ ದಿಂದ ಪ್ರಶಂಸಿಸಿದ್ದಾರೆ(ಆಡಿಯೋ)

ಹಜ್ಜ್ ಸಂದರ್ಭಗಳಲ್ಲಿ ಎಲ್ಲಾ ದಿವಸಗಳಲ್ಲಿಯೂ ನಾವು ಹರಂ ಪರಿಸರದಲ್ಲಿ ಹಜ್ಜಾಜಿಗಳ ಸೇವೆಯಲ್ಲಿ ನಿರತರಾಗುತ್ತೇವೆ, ಹರಂ ಪರಿಸರದಲ್ಲಿ ಕರ್ತವ್ಯ ದಲ್ಲಿರುವ ಪೋಲೀಸ್ ನವರು ಕೂಡ ನಮ್ಮ ಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿರುವುದು ಸಂತಸದ ವಿಚಾರವಾಗಿದೆ ಎಂದು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಪ್ರಧಾನ ಕಾರ್ಯದರ್ಶಿ ಹಾಗೂ ಹೆಚ್.ವಿ.ಸಿ ಮಕ್ಕಾ
ಸೆಕ್ಟರ್ ಕೊರ್ಡಿನೆಟರ್ ಇಕ್ಬಾಲ್ ಕಕ್ಕಿಂಜೆ ತಿಳಿಸಿದ್ದಾರೆ. ಈ ವೇಳೆಹೆಚ್.ವಿ.ಸಿ ಸೆಕ್ಟರ್ ನಾಯಕರಾದ ಹನೀಫ್ ಸಖಾಫಿ ಬೊಳ್ಮಾರ್, ಮೂಸಾ ಹಾಜಿ ಕಿನ್ಯ, ಹೆಚ್.ವಿ.ಸಿ ಹಜ್ಜ್ ತರಬೇತಿದಾರರಾದ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು, ಹೆಚ್.ವಿ.ಸಿ ಸೆಕ್ಟರ್ ಮಿಡಿಯಾ ಕನ್ವಿನರ್ ಕಲಂದರ್ ಶಾಫಿ ಅಸೈಗೋಳಿ, ಅಬ್ದುಲ್ ಹಮೀದ್ ಉಳ್ಳಾಲ, ನವಾಝ್ ಇಮ್ದಾದಿ ಬಜಾಲ್, ಬಶೀರ್ ಕೆಜೆಕಾರ್, ಹಾರಿಸ್ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.

ಹೆಚ್.ವಿ.ಸಿ ಸೆಕ್ಟರ್ ಮಿಡಿಯಾ ಕನ್ವಿನರ್ ಕಲಂದರ್ ಶಾಫಿ ಅಸೈಗೋಳಿಯವರು ಇವತ್ತಿನ ಅನುಭವ ವನ್ನು ವಿವರಿಸುತ್ತಿದ್ದಾರೆ.(ಆಡಿಯೋ)

ವರದಿ: ಹಕೀಂ ಬೋಳಾರ್

error: Content is protected !! Not allowed copy content from janadhvani.com