ರಿಯಾದ್: ಸೌದಿ ವಿದೇಶಾಂಗ ಸಚಿವಾಲಯದಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಸಂಪರ್ಕ ಮತ್ತು ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೇಂದ್ರದ ಉದ್ಘಾಟನೆಯನ್ನು ವಿದೇಶಾಂಗ ಸಚಿವ ಆದಿಲ್ ಅಲ್-ಝುಬೈರ್ ನಿರ್ವಹಿಸಿದರು.
ರಿಯಾದ್ ನಲ್ಲಿ ಸ್ಥಾಪಿಸಲಾದ ಸಂಪರ್ಕ ಕೇಂದ್ರವು ಮಾಹಿತಿ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಆಗಲಿದೆ ಎಂದು ವಿದೇಶಾಂಗ ಸಚಿವ ಆದಿಲ್ ಹೇಳಿದರು.
32 ಭಾಷೆಗಳಲ್ಲಿ ಮಾಹಿತಿ ಸೇವೆಗಳನ್ನು ಒದಗಿಸುವ ಕೇಂದ್ರವು ಪ್ರಬಲ ಜಾಗತಿಕ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲು ಸಹಾಯ ಮಾಡಲಿದೆ ಎಂದು ಸಚಿವರು ಹೇಳಿದರು.
ನಿರ್ಮಿತವಾದ ಜ್ಞಾನದ ಮೂಲಕ ವಿದೇಶಾಂಗ ಸಚಿವಾಲಯದ ಸಂದೇಶಗಳನ್ನು ಅಂತರಾಷ್ಟ್ರೀಯ ಮಾಧ್ಯಮಗಳಿಗೆ ವಿನಿಮಯ ಮಾಡುವ ಸಾಮರ್ಥ್ಯವನ್ನು ಅದು ಹೊಂದಿದೆ ಎಂದು ಸೆಂಟರ್ ನ ಜನರಲ್ ಮ್ಯಾನೇಜರ್, ಅಹ್ಮದ್ ಅಲ್ ತ್ವವಯಾನ್ ಹೇಳಿದರು.
ವಿಷನ್ 2030 ರ ಭಾಗವಾಗಿ ವಿಶ್ವಸಂಸ್ಥೆಯೊಂದಿಗೆ ಸಂವಹನ ಕೇಂದ್ರವು ಹೆಚ್ಚಿನ ಸಹಾಯವನ್ನು ಸಕ್ರಿಯಗೊಳಿಸಲಿದೆ. ಸಾಮಾಜಿಕ ಮಾಧ್ಯಮದ ಸಾಧ್ಯತೆಗಳನ್ನು ಬಳಸಿಕೊಳ್ಳಲು ಸಂವಹನ ಕೇಂದ್ರದಲ್ಲಿ ತಜ್ಞರ ತಂಡವನ್ನು ನೇಮಿಸಲಾಗಿದೆ.
ಡಿಜಿಟಲ್ ಫಾರ್ಮ್ ಡೇಟಾವನ್ನು ನಿರೀಕ್ಷಣೆ ಮಾಡಲು ಮತ್ತು ತಪ್ಪಾದ ಸಂದೇಶಗಳನ್ನು ತಡೆಯಲು ವಿಸ್ತಾರವಾದ ಸಿದ್ಧತೆಗಳನ್ನು ವಿನ್ಯಾಸಗೊಳಿಸಲಾಗಿದೆ.
ಇದು ನಿಯಮಿತವಾಗಿ ವಿವಿಧ ದೇಶಗಳಲ್ಲಿರುವ ಸೌದಿ ರಾಯಭಾರಿಗಳೊಂದಿಗೆ ಸಂವಹನ ನಡೆಸುತ್ತದೆ ಮತ್ತು ಮಾಹಿತಿಯನ್ನು ಸಂಗ್ರಹಿಸುತ್ತದೆ. ಇದರ ಜೊತೆಗೆ, ಸೌದಿಯ ನಿಲುವುಗಳನ್ನು ತಿಳಿಸಲು ಸಂವಹನ ಮತ್ತು ಮಾಧ್ಯಮ ಕೇಂದ್ರವು ಮಹತ್ವದ ಪಾತ್ರ ವಹಿಸಲಿದೆ ಎಂದು ಅಹ್ಮದ್ ವಿವರಿಸಿದರು.