janadhvani

Kannada Online News Paper

ನೊಂದವರ ಆಶಾಕಿರಣ: ಸಯ್ಯಿದ್ ಬಾಯಾರ್ ತಂಙಳ್.!

ಬಾಯಾರ್ ತಂಙಳ್ ಎಂದು ಕೇಳುವಾಗಲೇ ನೆನಪಾಗುವುದು, ಬಾಯಾರ್ ನಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್. ಏಡ್ಸ್, ಕ್ಯಾನ್ಸರ್, ಮೂಲವ್ಯಾಧಿ, ಕಿಡ್ನಿ ನಿಷ್ಕ್ರಿಯತೆ ಸೇರಿದಂತೆ, ಯಾವ ಡಾಕ್ಟರ್ ಗಳಿಂದಲೂ ಪರಿಹಾರವಾಗದ ಹತ್ತು ಹಲವಾರು ರೋಗಗಳು ಮತ್ತು ಸಮಸ್ಯೆಗಳು ಪರಿಹಾರವಾಗಿರುವುದೇ ಬಹುಮಾನ್ಯರಾದ ತಂಙಳ್ ರವರ ನೇತೃತ್ವದ ಸ್ವಲಾತ್ ಮಜ್ಲಿಸ್ ಇಷ್ಟೊಂದು ಪ್ರಖ್ಯಾತಿ ಹೊಂದಲು ಕಾರಣ.

ಈ ರೀತಿ ಸಮಸ್ಯೆಗಳ ಸರಮಾಲೆಯನ್ನೇ ಹೊತ್ತುಕೊಂಡ ಮನುಷ್ಯ, ಅದರ ಪರಿಹಾರಕ್ಕಾಗಿ ಬಾಯಾರ್ ತಂಙಳ್ ನೇತೃತ್ವದ ಸ್ವಲಾತ್ ಮಜ್ಲಿಸ್ ಕಡೆ ಮುಖ ಮಾಡುತ್ತಾನೆ. ಇಂದು ಇಂತಹವರ ಸಂಖ್ಯೆ ಲಕ್ಷ ದಾಟುತ್ತಿದೆ.
ಒಬ್ಬ ಡಾಕ್ಟರ್, ಅಥವಾ ಆಸ್ಪತ್ರೆಯಲ್ಲಿ ದಿನಾ ಜನ ಜಂಗುಳಿಯೇ ತುಂಬಿರುತ್ತದೆ ಅಂದರೆ, ಆ ಡಾಕ್ಟರ್/ಆಸ್ಪತ್ರೆ ಯಿಂದ ಜನರಿಗೆ ಫಲ ಕಂಡಿದೆ ಎಂದರ್ಥ. ಅದೇರೀತಿಯಾಗಿದೆ ಬಹುಮಾನ್ಯರಾದ ತಂಙಳ್ ರವರು ನೇತೃತ್ವ ನೀಡುವ ಸ್ವಲಾತ್ ಮಜ್ಲಿಸ್. ಲಕ್ಷಾಂತರ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡಿದ್ದರಿಂದಲೇ ಇಂದು ಆ ಸ್ವಲಾತ್ ಮಜ್ಲಿಸ್ ಸತ್ಯ ವಿಶ್ವಾಸಿಗಳಿಂದ ತುಂಬಿ ತುಳುಕುತ್ತಿರುವುದು.

ಸ್ವಲಾತ್ ಮಜ್ಲಿಸ್ ನಲ್ಲಿ ಬರುವ ಹಣವನ್ನು ತಂಙಳ್ ತಮ್ಮ ಸ್ವಂತಕ್ಕೆ ಉಪಯೋಗಿಸುತ್ತಾರೆಯೇ?

ಆಸ್ಪತ್ರೆಯಲ್ಲಿ ಸಾಮಾನ್ಯ ರೋಗವೊಂದಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಿ ಬರುವ ಸಂದರ್ಭದಲ್ಲಿ, ಒಂದು ನಯಾ ಪೈಸೆಯ ಕರ್ಚಿಲ್ಲದೆ ಡಾಕ್ಟರ್ ಗಳಿಂದಲೂ ಗುಣವಾಗದಂತಹ ದೊಡ್ಡ ದೊಡ್ಡ ರೋಗಗಳು, ಬಹುಮಾನ್ಯ ತಂಙಳ್ ರವರ ನೇತೃತ್ವದ ಸ್ವಲಾತ್ ಮಜ್ಲಿಸ್ ನಿಂದ ಗುಣವಾದಾಗ, ಇದರಿಂದ ಸಂತುಷ್ಟಗೊಳ್ಳುವ ರೋಗಿಗಳು, ಆ ಸ್ವಲಾತ್ ಮಜ್ಲಿಸ್ ಗೆ ಸಂತೃಪ್ತಿಯಿಂದ ಕಾಣಿಕೆಯನ್ನು ಕೊಡುತ್ತಾರೆ. ಇದು ಅನಾಥ ಮಕ್ಕಳ ಸಂರಕ್ಷಣೆಗೂ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ, ಧಾರ್ಮಿಕ ವಿದ್ಯಾಭ್ಯಾಸ ನಿರ್ವಹಣೆ ಸೇರಿದಂತೆ ಹತ್ತು ಹಲವಾರು ಕಾರುಣ್ಯ ಸೇವನೆಗಳಿಗೆ ಬಳಕೆಯಾಗುತ್ತದೆ. ಇದನ್ನೆಲ್ಲಾ ನೋಡಿಕೊಳ್ಳಲು ಸ್ಥಳೀಯವಾಗಿ ಅಲ್ಲೊಂದು ಕಮಿಟಿ ಕೂಡಾ ಇರುತ್ತದೆ. ಅವರ ಮುಖಾಂತರವೇ ಅದರ ನಿರ್ವಹಣೆ ನಡೆಯುತ್ತದೆ. ಅದೇರೀತಿ, ಬಹುಮಾನ್ಯ ತಂಙಳ್ ರವರು ಎಲ್ಲಿ ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ಕೊಟ್ಟರೂ, ಅಲ್ಲಿ ಸತ್ಯ ವಿಶ್ವಾಸಿಗಳಿಂದ ಬರುವ ಹದಿಯಾ ಆಯಾ ಸಂಸ್ಥೆಯ/ಕಮಿಟಿಯ ಕೈ ಸೇರುತ್ತದೆಯೇ ಹೊರತು, ಯಾರೋ ಮತ್ಸರವಾದಿಗಳು ಆರೋಪಿಸಿದಂತೆ, ಅದು ತಂಙಳ್ ರವರ ಕೈ ಸೇರುವುದಿಲ್ಲ. ಅಥವಾ ಅದನ್ನು ತಂಙಳ್ ರವರು ತಮ್ಮ ಉಪಯೋಗಕ್ಕೆ ಬಳಸುವುದೂ ಇಲ್ಲ. ಇಂತಹ ಅರೋಪಗಳು ನಿರಾಧಾರ.

ಲಕ್ಷ ಬೆಲೆಬಾಳುವ ಮನೆ ಕಟ್ಟಿಸಲು ತಂಙಳ್ ರವರ ಬಳಿ ಇಷ್ಟೊಂದು ಹಣ ಎಲ್ಲಿಂದ ಎಂದು ತಲೆ ಕೆಡಿಸಿಕೊಳ್ಳಬೇಡಿ.

ತಂಙಳ್ ರವರು ದರ್ಸ್ ನಡೆಸುವ ಮೊಹಲ್ಲಾದಲ್ಲಿ ತಂಙಳ್ ರವರಿಗೆ ಸಂಬಲ ಎಂಬುದಿದೆ. ಅದರೊಂದಿಗೆ, ತಂಙಳ್ ರವರು ಇನ್ನಿತರ ಧಾರ್ಮಿಕ ಕಾರ್ಯಗಳಿಗೆ ನೇತೃತ್ವ ಕೊಡಲು, ವಾಲ್ ಹೇಳಲು ಹೋದಾಗ, ಸಾಧಾರಣ ವಾಲ್ ಹೇಳುವ ಉಸ್ತಾದ್ ಗಳಿಗೆ ಹಣ ಕೊಟ್ಟಂತೆ, ತಂಙಳ್ ರವರಿಗೂ ಹಣ ಕೊಡುತ್ತಾರೆ.
ಅದೂ ಅಲ್ಲದೆ, ಸಿಕ್ಕ ಸಿಕ್ಕ ಡಾಕ್ಟರ್/ಆಸ್ಪತ್ರೆಗಳನ್ನೆಲ್ಲಾ ಅಳೆದು, ಲಕ್ಷ ಲಕ್ಷ ಹಣ ಕರ್ಚುಮಾಡಿ ಗುಣವಾಗದ ರೋಗವೊಂದು, ತಂಙಳ್ ರವರು ನೇತೃತ್ವ ಕೊಡುವ ಸ್ವಲಾತ್ ಮಜ್ಲಿಸ್ ಕಾರಣದಿಂದ, ತಂಙಳ್ ರವರ ದುಆ ಬರ್ಕತ್ ನಿಂದ ನಯಾ ಪೈಸೆ ಖರ್ಚಿಲ್ಲದೆ ಗುಣವಾದಾಗ, ಸಂತೃಪ್ತಿಯಿಂದ ಬಹುಮಾನ್ಯ ತಂಙಳ್ ರವರಿಗೆ ಹದಿಯಾ ಕೊಡುವವರೂ ಸಾಕಷ್ಟು ಮಂದಿ ಇದ್ದಾರೆ. ಇಂತಹ ವಿಶ್ಬಾಸಿಗಳಿಂದ ತಮ್ಮ ಸ್ವಂತಕ್ಕೆ ದೊರಕುವ ಹದಿಯಾಗಳಿಂದ ಒಂದಂಶ ತಮ್ಮ ಕುಟುಂಬ ನಿರ್ವಹಣೆಗೆ ತಂಙಳ್ ರವರು ಬಳಸಿದರೂ, ಅದರ ಬಹುಪಾಲೂ ಈ ಸಮುದಾಯಕ್ಕಾಗಿಯೇ ವ್ಯಯಿಸುತ್ತಾರೆ.

ತುರ್ಕಳಿಕೆ ದುರಂತ ಮತ್ತು ತಂಙಳ್..!

“ಲೋಕದಲ್ಲಿ ಆಗುವ ಘಟನೆಗಳನ್ನು ಮೊದಲೇ ತಿಳಿಯುವ ತಂಙಳ್ ರಿಗೆ ಕರಾಮತ್ ನಿಂದ ಕಂಪೌಂಡ್ ಬೀಳಲಿದೆ ಎಂಬ ವಿಷಯವು ತಿಳಿಯಲಿಲ್ಲವೇ, ಮತ್ತು, ತಮ್ಮ ಕರಾಮತ್ ನಿಂದ ಹಲವಾರು ಬಡವರು ಸಾವಿಗೀಡಾಗುವುದನ್ನು ತಪ್ಪಿಸಲಾಗಲಿಲ್ಲವೇ” ಎಂದು ಮೂರ್ಖನೊಬ್ಬ ಪ್ರಶ್ನಿಸಿದ್ದಾನೆ.

ಲೋಕದಲ್ಲಿ ಆಗುವ ಘಟನೆಗಳು ಮೊದಲೇ ತಂಙಳ್ ರವರಿಗೆ ತಿಳಿಯುತ್ತದೆ ಎಂದು ಯಾರೂ ಹೇಳಿಲ್ಲ.
ಅದೇರೀತಿ, ತುರ್ಕಳಿಕೆಯಲ್ಲಿ ನಡೆದ ಕಂಪೌಡ್ ದುರಂತವನ್ನು ಸ್ವಲಾತ್ ಮಜ್ಲಿಸ್ ನ ಕರಾಮತ್ ನಿಂದ ತಂಙಳ್ ರವರಿಗೆ ಯಾಕೆ ತಡೆಯಲು ಸಾದ್ಯವಾಗಿಲ್ಲ ಎಂದು ಪ್ರಶ್ನಿಸುವಾಗ,
ಸರ್ವ ಶಕ್ತನಾದ ಅಲ್ಲಾಹು, ತನ್ನ ಪವಿತ್ರ ಸ್ಥಳವಾದ ಮಿನಾದಲ್ಲಿ ನಡೆದ ಬೆಂಕಿ ದುರಂತ ಸೇರಿದಂತೆ ವಿಶ್ವದ ನಾನಾ ಕಡೆ ಅಲ್ಲಾಹನ ಭವನದ ಮೇಲೆ ಶತ್ರುಗಳಿಂದ ಆಗುತ್ತಿರುವ ದಾಳಿ ಮತ್ತು ವಿಷೇಶತ ಬೈತುಲ್ ಮುಖದ್ದಸ್ ಮೇಲೆ ನಡೆಯುತ್ತಿರುವ ದಾಳಿಗಳನ್ನೂ ಯಾಕೆ ತಡೆಯಲಿಲ್ಲ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ.
ಅಂದರೆ, ಇಂತಹ ಪ್ರಶ್ನೆಗಳೇ ಅಪ್ರಸ್ತುತ. ಇಂತಹ ಚಿಂತನೆ ಮೂರ್ಖತನ ಮಾತ್ರವಲ್ಲ, ಧರ್ಮ ಬಾಹಿರ ಕೂಡಾ

ಅಲ್ಲಾಹನು ಸರ್ವ ಶಕ್ತನು ಎಂದು ಹೇಳುವಾಗ, ಎಲ್ಲವನ್ನೂ ಮನುಷ್ಯರಿಗೆ ಅನುಕೂಲಕರವಾಗುವ ರೀತಿಯಲ್ಲೇ ನಡೆಸಬೇಕೆಂದಿಲ್ಲ.
ಎಲ್ಲಾ ರೋಗವನ್ನು ಗುಣ ಪಡಿಸುವವನು ಅಲ್ಲಾಹು ಎಂದು ಹೇಳುವಾಗ, ರೋಗಿಗಳೆಲ್ಲರ ರೋಗವನ್ನು ಅಲ್ಲಾಹು ಗುಣ ಪಡಿಸಲೇಬೇಕು ಎಂದೂ ಇಲ್ಲ.
ಅದೇರೀತಿ, ತಂಙಳ್ ರವರ ನೇತೃತ್ವದ ಸ್ವಲಾತ್ ಮಜ್ಲಿಸ್ ಗೆ ಕರಾಮತ್ ಇದೆ ಎಂದು ಹೇಳುವಾಗ, ಅಲ್ಲಿ ಬರುವ ನೂರು ಶೇಕಡ ಜನರ ರೋಗವೂ ಗುಣವಾಗಬೇಕೆಂದೋ, ಅಥವಾ ಅಲ್ಲಿ ನಡೆಯುವ ಅಪಘಾತಗಳು ತಡೆಯಬೇಕೆಂದೋ ಅರ್ಥವಲ್ಲ.

ಎಂತೆಂತಹ ರೋಗಗಳನ್ನು ಗುಣ ಪಡಿಸಿದ, ದೇಶ ವಿದೇಶಗಳಲ್ಲಿ ಹೆಸರುವಾಸಿಯಾದ ಡಾಕ್ಟರ್ ಮತ್ತು ಆಸ್ಪತ್ರೆಗಳಲ್ಲಿ ಕೂಡಾ ದಿನನಿತ್ಯ ಹತ್ತಾರು ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುತ್ತಾರೆ. ಇದನ್ನು ಯಾರೂ ಆ ಡಾಕ್ಟರ್ ನ ವೈಫಲ್ಯವೆಂದೋ, ಆಸ್ಪತ್ರೆಯ ವೈಫಲ್ಯವೆಂದೋ ವಾದಿಸುವುದಿಲ್ಲ.

ಇದೇರೀತಿ, ತಂಙಳ್ ಬಗ್ಗೆಯೂ, ತಂಙಳ್ ನೇತೃತ್ವದ ಸ್ವಲಾತ್ ಮಜ್ಲಿಸ್ ಬಗ್ಗೆಯೂ ಅರ್ಥೈಸಿದರೆ, ಫಿತ್ನಾವಾದಿಗಳ ಸಂಶಯ ಪರಿಹಾರವಾಗಬಹುದು.

ತಮ್ಮ ಮನೆ, ಅಂತಸ್ಥು, ಕಾರು, ವರಮಾನ ಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲೆಂದೇ ದುಡಿಯುವವರು ಮತ್ತು ಅದಕ್ಕಾಗಿಯೇ ಜೀವಿಸುವವರು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ.ಅಂತಹವರ ಮಧ್ಯೆ, ತಮ್ಮ ಆರೋಗ್ಯವನ್ನೆಲ್ಲಾ ಅನಾಥರ, ನಿರ್ಗತಿಕರ, ಬಡವರ, ಅಸಹಾಯಕರ, ರೋಗಿಗಳ ಏಳಿಗೆಗಾಗಿಯೇ ವ್ಯಯಿಸುವ ಉಲಮಾಗಳು/ತಂಙಳ್ ಗಳು ಒಂದು ಉತ್ತಮ ಮನೆ, ಕಾರು ಕೊಂಡರಂತೂ ಕೆಲವರಿಗೆ ಇನ್ನಿಲ್ಲದ ಅಸೂಯೆ. ಇಂತಹವರ ಭಾವನೆಯಲ್ಲಿ ಉಸ್ತಾದರುಗಳು, ತಂಙಳ್ ಗಳು ಬಡತನದಲ್ಲಿ ದಾರಿದ್ರ್ಯತೆಯಿಂದಲೇ ಜೀವಿಸುತ್ತಿರಬೇಕು. ಇಂತಹ ಕೆಟ್ಟ ಚಿಂತಕರ ಶರ್ರ್ ನಿಂದ ಅಲ್ಲಾಹು ಸತ್ಯ ವಿಶ್ವಾಸಿಗಳನ್ನು ರಕ್ಷಿಸಲಿ,

ಅಲ್ಲಾಹನೇ, ನಮ್ಮೆಲ್ಲರನ್ನು, ಪ್ರವಾದಿ ﷺ ರ ಕುಟುಂಬವನ್ನು ಪ್ರತೀಸುವ ಮತ್ತು ಗೌರವಿಸುವ ಸತ್ಯವಿಶ್ವಾಸಿಗಳ ಸಾಲಿನಲ್ಲಿ ಸೇರಿಸು, ಈಮಾನ್ ನೊಂದಿಗೆ ಮರಣ ಹೊಂದುವ ಸೌಭಾಗ್ಯ ವನ್ನು ನಮಗೆಲ್ಲರಿಗೂ ಕರುಣಿಸು, ಆಮೀನ್.

ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.

error: Content is protected !! Not allowed copy content from janadhvani.com