ಮಕ್ಕಾ: KCF ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ಹಜ್ಜ್ ಸ್ವಯಂ ಸೇವಕರ ಪೂರ್ವ ತಯಾರಿ ತಝ್ಕಿಯತ್ ಶಿಬಿರ ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ಕುದೈ ಏಷ್ಯನ್ ಹಾಲ್ ನಲ್ಲಿ ಜರಗಿತು.ಉಮ್ಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ರವರು HVC ಕಾರ್ಯಕರ್ತರು ಪವಿತ್ರ ಮಕ್ಕಾ ಮಣ್ಣಿಗೆ ಅಲ್ಲಾಹನ ಅತಿಥಿಗಳಾಗಿ ಬರುವ ಹಾಜಿಗಳಿಗೆ ನೀಡುವ ಸೇವೆಯ ಮಹತ್ವ ಹಾಗೂ ಸಂಘಟಣಾ ನಿಯಮ ಪಾಲನೆ, ನಾಯಕರ ಅದೇಶ ಪಾಲನೆ, HVC ಸಮವಸ್ತ್ರದ ಸೂಕ್ಷ್ಮತೆಯ ಗೌರವ, ಹಾಜಿಗಳೊಂದಿಗೆ ತಾಳ್ಮೆ ಸ್ವಭಾವ ಉತ್ತಮ ಸ್ನೇಹ ಭಾಂದವ್ಯ ಹಾಗೂ ಸದಾ ಹಸನ್ಮುಖಿಯರಾಗಿ ಕಾರ್ಯಚರಿಸುವುದು ಈಗೇ ಹತ್ತು ಹಲವಾರು ವಿಷಯಗಳ ಬಗ್ಗೆ ಕಾರ್ಯಕರ್ತರ ಮನ ಕರಗುವ ರೀತಿಯಲ್ಲಿ ವಿವರಣೆ ನೀಡಿದರು.KCF ಮಕ್ಕತ್ತುಲ್ ಮುಕರ್ರಮಃ ಸಾಂತ್ವನ ವಿಭಾಗ ಅಧ್ಯಕ್ಷರು ಮೂಸಾ ಹಾಜಿ ಕಿನ್ಯ ತಮ್ಮ ಅನುಭವಗಳನ್ನು ಕಾರ್ಯಕರ್ತರಿಗೆ ಹಂಚಿದರು.
KCF ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ಶಿಕ್ಷಣ ವಿಭಾಗ ಅಧ್ಯಕ್ಷರು ಉಸ್ಮಾನ್ ಸಅದಿ ನೆಲ್ಯಾಡಿ ಮಾತಾನಾಡಿ ಶುಭ ಹಾರೈಸಿದರು.
ಈ ಸಂದರ್ಭ ಹರಂ ಶರೀಫ್ ನಲ್ಲಿ 40 ದಿವಸಗಳ ಕಾಲ ನಡೆಯುವ ಎಚ್. ವಿ. ಸಿ ಸೇವೆಗಳಿಗೆ ಕ್ಯಾಪ್ಟನ್ ಗಳಾಗಿ ಮೂಸಾ ಹಾಜಿ ಕಿನ್ಯ ಹಾಗೂ ಹನೀಫ್ ಸಖಾಫಿ ಬೊಳ್ಮಾರ್
ಮತ್ತು ಎಚ್. ವಿ. ಸಿ ಮೀಡಿಯಾ ಕನ್ವಿನರಾಗಿ ಕಲಂದರ್ ಶಾಫಿ ಅಸೈಗೋಳಿಯವರನ್ನು ಆಯ್ಕೆಮಾಡಲಾಯಿತು
ಕಾರ್ಯಕ್ರಮವನ್ನು KCF ಮಕ್ಕತುಲ್ ಮುಕರ್ರಮಃ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾಗೂ HVC ಸೆಕ್ಟರ್ ಕೋರ್ಡಿನೆಟರ್ ಇಕ್ಬಾಲ್ ಕಕ್ಕಿಂಜೆ ಸ್ವಾಗತಿಸಿ, ಸೆಕ್ಟರ್ ಅಡ್ಮಿನ್ ವಿಭಾಗ ಕಾರ್ಯದರ್ಶಿ ಕಲಂದರ್ ಶಾಫೀ ಅಸೈಗೋಳಿ ಕೃತಜ್ಞತೆ ಸಲ್ಲಿಸಿದರು.