janadhvani

Kannada Online News Paper

ವಿಮಾನ ನಿಲ್ದಾಣದಲ್ಲಿ ವಸ್ತುಗಳು ಮರೆತು ಬಿಟ್ಟರೆ ಹೇಗೆ ಪಡೆಯಬುದು?

ಬೆಂಗಳೂರು, ಜು.23- ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಬಿಐಎಎಲ್)ನ ಕಳೆದದು ಸಿಕ್ಕಿದೆ (ಲಾಸ್ಟ್ ಅಂಡ್‍ಫೌಂಡ್) ವಿಭಾಗ 2017-18ರ ಆರ್ಥಿಕ ವರ್ಷದಲ್ಲಿ 20,413 ವಸ್ತುಗಳನ್ನು ಸ್ವೀಕರಿಸಿವೆ. ಇವುಗಳನ್ನು ಪ್ರಯಾಣಿಕರು ವಿಮಾನ ನಿಲ್ದಾಣದ ಹಲವಾರು ಪ್ರದೇಶಗಳಲ್ಲಿ ಮರೆತು ಬಿಟ್ಟು ಹೋಗಿದ್ದರು ಅಥವಾ ಅವು ನಿಷೇಧಿತ ವಸ್ತುಗಳಾಗಿದ್ದು ಸಿಐಎಸ್‍ಎಫ್‍ಗೆ ಒಪ್ಪಿಸಲಾಗಿತ್ತು.  ಇವುಗಳಲ್ಲಿ ಒಟ್ಟಾರೆಯಾಗಿ 5,686 ವಸ್ತುಗಳನ್ನು ಅಧಿಕೃತ ಮಾಲೀಕರಿಗೆ ಹಿಂದಿರುಗಿಸಲಾಗಿದ್ದು, ಬಹುತೇಕ ಕೆಟ್ಟುಹೋಗುವ ವಸ್ತುಗಳನ್ನು ಒಳಗೊಂಡ 7,153 ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ. 90 ದಿನಗಳ ಅವಧಿಯವರೆಗೆ ಯಾರೂ ಹಕ್ಕುಸ್ಥಾಪನೆ ಮಾಡದೆ ಉಳಿದ ವಸ್ತುಗಳನ್ನು ದಾನಕ್ಕಾಗಿ ಅಥವಾ ಬಿಎಲ್‍ಆರ್ ವಿಮಾನ ನಿಲ್ದಾಣ ಆವರಣದ ಸಿಬ್ಬಂದಿಗೆ ಹರಾಜಿನಲ್ಲಿ ನೀಡಲಾಗುತ್ತದೆ.

ಎಲ್‍ಅಂಡ್ ಎಫ್ ವಿಭಾಗ ಸ್ವೀಕರಿಸುವ ವಸ್ತುಗಳ ವೈವಿಧ್ಯತೆ ಕಂಡು ನಮಗೆ ಅಚ್ಚರಿಯಾಗುತ್ತದೆ. ಪ್ರಯಾಣಿಕರ ಸಂಚಾರ ಹೆಚ್ಚುತ್ತಿದ್ದು ಅದಕ್ಕೆ ತಕ್ಕಂತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಹೋದ ವಸ್ತುಗಳ ಸಂಖ್ಯೆಯು ಹೆಚ್ಚುತ್ತಿದೆ. ಈ ರೀತಿಯ ವಸ್ತುಗಳನ್ನು ನಿಭಾಯಿಸುವುದಕ್ಕಾಗಿ ಬಿಐಎಎಲ್ ಅವುಗಳನ್ನು ಸುರಕ್ಷಿತವಾಗಿಡುವ ಖಾತ್ರಿ ಮಾಡಿಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಹೊಂದಿದೆ. ಇದರಿಂದ ಆಯಾ ವಸ್ತುಗಳ ಮಾಲೀಕರು ನಮ್ಮನ್ನು ಸಂಪರ್ಕಿಸಿದಾಗ ಆ ವಸ್ತುಗಳು ಉತ್ತಮ ಸ್ಥಿತಿಯಲ್ಲಿ ಇರುತ್ತವೆ ಎಂದು ಬಿಐಎಎಲ್‍ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಾವೆದ್ ಮಲಿಕ್ ಅವರು ತಿಳಿಸಿದ್ದಾರೆ.

ಈ ಕಳೆದುಹೋಗಿದ್ದು ನಂತರ ಸಿಕ್ಕಿರುವ ವಸ್ತುಗಳನ್ನು ನಿಭಾಯಿಸಲು ಪ್ರತ್ಯೇಕ ಬದ್ಧತೆಯ ತಂಡವನ್ನು ನಾವು ಹೊಂದಿದ್ದೇವೆ. ಕಳೆದದ್ದು ಸಿಕ್ಕಿದೆ ವಿಭಾಗ ಸ್ವೀಕರಿಸುವ ಯಾವುದೇ ವಸ್ತುವನ್ನು ಸುರಕ್ಷಿತವಾಗಿಡುತ್ತದೆ ಎಂಬ ಖಾತ್ರಿಯನ್ನು ತನ್ನ ಪ್ರಯಾಣಿಕರಿಗೆ ನೀಡಲು ಸಂಸ್ಥೆ ಬಯಸುತ್ತದೆ.
ತಮ್ಮ ವಸ್ತುಗಳನ್ನು ಮಾಲೀಕರು ಹುಡುಕಲು ಸಹಾಯ ಮಾಡುವ ಖಾತ್ರಿ ಮಾಡಿಕೊಳ್ಳಲು ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದ ವಸ್ತುಗಳ ಎಲ್ಲಾ ವಿವರಗಳನ್ನು ಬೆಂಗಳೂರು ವಿಮಾನ ನಿಲ್ದಾಣದ ವೆಬ್‍ಸೈಟ್‍ಗೆ ನಿಗದಿತವಾಗಿ ಲಾಸ್ಟ್ ಅಂಡ್ ಫೌಂಡ್ ವಿಭಾಗದಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ.

ಜತೆಗೆ ಅವುಗಳನ್ನು ಸರಿಯಾದ ಮಾಲೀಕರು ವಾಪಸ್ ಪಡೆಯಲು ಕೈಗೊಳ್ಳಬೇಕಾದ ಕ್ರಮವನ್ನು ನೀಡಲಾಗುತ್ತದೆ. ಲಭ್ಯವಿರುವ ಮಾಲೀಕರ ವಿವರಗಳ ಮೂಲಕ ಅವರನ್ನು ಸಂಪರ್ಕಿಸಲಾಗುತ್ತದೆಯಲ್ಲದೆ ಅವರ ವಸ್ತುಗಳನ್ನು ಹಿಂದಿರುಗಿಸಲಾಗುತ್ತದೆ ಎಂದು ಮಲಿಕ್ ಹೇಳಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯಲು ವಾರದ 24 ಗಂಟೆಗಳ ಸಹಾಯವಾಣಿ ಸಂಖ್ಯೆ 080-6678 2257(ಭಾರತದ ನಿವಾಸಿಗಳಿಗೆ) ಮತ್ತು +9180 66782257)/ ಕರೆ ಮಾಡಿ. ಅಥವಾ  lostandfound@bialairport.com ಗೆ ಮೈಲ್ ಮಾಡಿ. ಹೆಚ್ಚಿನ ಮಾಹಿತಿಗೆ www.bengaluruairport.com ರಲ್ಲಿ ಸಂದರ್ಶಿಸಿ.

error: Content is protected !! Not allowed copy content from janadhvani.com