ಮದೀನಾ: ಈ ವರ್ಷದ ಹಜ್ ಸಿದ್ಧತೆ ಪೂರ್ಣಗೊಂಡಿದೆ. ಶನಿವಾರ ವಿದೇಶದಿಂದ ಬರುವ ಹಜ್ ಯಾತ್ರಿಕರು ಸೌದಿಗೆ ತಲುಪಿದ್ದಾರೆ.ಭಾರತ, ಪಾಕಿಸ್ತಾನ ಮುಂತಾದೆಡೆಗಳಿಂದ ಬರುವ ಯಾತ್ರಾರ್ಥಿಗಳು ಮದೀನಾದ ಪ್ರಿನ್ಸ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರ ವಿಮಾನ ನಿಲ್ದಾಣದ ಮೂಲಕ ತಲುಪಲಿದ್ದು, ಬಾಂಗ್ಲಾದೇಶ ದ ಯಾತ್ರಿಕರು ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ.
ದೆಹಲಿಯಿಂದ ಸೌದಿ ಏರ್ಲೈನ್ಸ್ ವಿಮಾನದ ಮೂಲಕ ಭಾರತದ ಯಾತ್ರಾರ್ಥಿಗಳ ಮೊದಲ ಗುಂಪಿನ 410 ಯಾತ್ರಿಕರು ಮದೀನಾ ತಲುಪಿದ್ದಾರೆ.ಇನ್ನು 209 ವಿಮಾನ ಹಾರಾಟಗಳಲ್ಲಿ 61,400 ಯಾತ್ರಿಕರು ಜಿದ್ದಾದಲ್ಲೂ, 234 ಹಾರಾಟಗಳ ಮೂಲಕ 67,302 ಯಾತ್ರಿಕರು ಮದೀನಾಗೂ ತಲುಪಲಿದ್ದಾರೆ.
ಸೌದಿ ನಾಗರಿಕ ವಿಮಾನಯಾನ ಜನರಲ್ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಹಕೀಮ್ ಅಲ್ ತಮೀಮಿ, ಯಾತ್ರಿಗಳನ್ನು ಸ್ವೀಕರಿಸಲು ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡಿರುವುದಾಗಿ ತಿಳಿಸಿದ್ದಾರೆ.ಯಾತ್ರಾರ್ಥಿಗಳ ಸುರಕ್ಷತೆ ಮತ್ತು ತಪಾಸಣೆಗಳನ್ನು ಸೀಮಿತ ಸಮಯದಲ್ಲಿ ಪೂರ್ಣಗೊಳಿಸುವ ಸೌಕರ್ಯಗಳನ್ನು ಈ ಬಾರಿ ಸಜ್ಜುಗೊಳಿಸಲಾಗಿದೆ.
ಈ ವರ್ಷ, ಇತರ ರಾಷ್ಟ್ರಗಳಿಂದ ಎಮಿಗ್ರೇಷನ್ ಪೂರ್ಣಗೊಳಿಸಿ ಬರುವ ಯಾತ್ರಿಗಳು ಸುಲಭವಾಗಿ ಪ್ರವೇಶ ಪಡೆಯುವ ವಿಶೇಷ ಕಾರ್ಯವಿಧಾನವನ್ನು ಮಾಡಲಾಗಿದೆ. ಈ ವರ್ಷ ವಿಶ್ವದ ವಿವಿಧ ಭಾಗಗಳಿಂದ ಆರು ಸಾವಿರದ ಎಪ್ಪತ್ತೆರಡು ವಿಮಾನಗಳಲ್ಲಿ ಹಜ್ ಯಾತ್ರಾರ್ಥಿಗಳು ಆಗಮಿಸಿ ಹಜ್ ನಿರ್ವಹಿಸಲಿದ್ದಾರೆ.
ಜಿದ್ದಾದಲ್ಲಿ ಕಿಂಗ್ ಅಬ್ದುಲ್ ಅಝೀಝ್ ಅಂತರರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ 3,383 ವಿಮಾನಗಳು ಮತ್ತು ಎರಡು ಸಾವಿರ ಆರು ನೂರ ಒಂಬತ್ತು ವಿಮಾನಗಳು ಮದೀನಾದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಬಂದಿಳಿಯಲಿದೆ.
ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಅಹ್ಮದ್ ಜಾವೆದ್ ಸಹ ಈ ವರ್ಷದ ಹಜ್ ಸಿದ್ಧತೆಗಳ ಕುರಿತು ಸೌದಿಯ ಹಜ್ ಮಂತ್ರಿ ಮುಹಮ್ಮದ್ ಸಾಲಿಹ್ ಬಿನ್ ತಾಹೀರ್ ಬಿನ್ ಥಾನಿ ಅವರೊಂದಿಗೆ ಜಿದ್ದಾದಲ್ಲಿ ಮಾತುಕತೆ ನಡೆಸಿದರು.ಜಿದ್ದಾದ ಕಾನ್ಸುಲ್ ಜನರಲ್ ಮುಹಮ್ಮದ್ ನೂರ್ ರಹ್ಮಾನ್ ಶೇಖ್, ಉಪ ಸಿ.ಜಿ, ಹಜ್ ಕೌನ್ಸಿಲರ್ ಮುಹಮ್ಮದ್ ಶಾಹಿದ್ ಅಲಂ ಮುಂತಾದವರು ಗುಂಪಿನಲ್ಲಿದ್ದರು.
ಈ ವರ್ಷ, ಹಜ್ ಯಾತ್ರಾರ್ಥಿಗಳಿಗೆ ಹೆಚ್ಚಿನ ಸೌಲಭ್ಯಗಳು ಜಿದ್ದಾ ವಿಮಾನ ನಿಲ್ದಾಣದಲ್ಲಿ ಲಭ್ಯವಿದೆ. ಇವುಗಳಲ್ಲಿ ಇಪ್ಪತ್ತಾರು ವಿಮಾನಗಳು ಒಂದೇ ಸಮಯ ಲ್ಯಾಂಡ್ ಮಾಡುವ ಸೌಲಭ್ಯವಿದ್ದು, 136 ಚೆಕ್ಕಿಂಗ್ ಕೌಂಟರ್ ಮತ್ತು 192 ಎಮಿಗ್ರೇಷನ್ ಕೌಂಟರ್ಗಳ ಸೌಲಭ್ಯಗಳನ್ನು ಅಳವಡಿಸಲಾಗಿದೆ.
Mash.allha