ತುಮಕೂರು ಜ.14:ರಾಜ್ಯದಾದ್ಯಂತ ಸಂಘಟನೆಯ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಎಸ್ಸೆಸ್ಸೆಫ್ ರಾಜ್ಯ ನಾಯಕರ ಉತ್ತರ ಕರ್ನಾಟಕ ಪ್ರವಾಸಕ್ಕೆ ಮೊದಲನೇ ದಿನ ತುಮಕೂರಿನಲ್ಲಿ ಚಾಲನೆ ನೀಡಲಾಯಿತು.ರಾಜ್ಯಾದ್ಯಕ್ಷ ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ಅಸ್ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಮದನಿ ಸಭೆಯನ್ನು ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಹಾಫಿಲ್ ಸುಫ್ಯಾನ್ ಸಖಾಫಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ನಗರ, ಆರಿಫ್ ರಝಾ ತುಮಕೂರು, ಶರೀಫ್ ಬೆಂಗಳೂರು, ಹಸೈನಾರ್ ಆನೆಮಹಲ್, ಮುಸ್ತಫಾ ನಯೀಮಿ ಹಾವೇರಿ, ಅಬ್ದುರ್ರಹ್ಮಾನ್ ಸುಳ್ಯ ಉಪಸ್ಥಿತರಿದ್ದರು.
ಬಳಿಕ ಚಿತ್ರದುರ್ಗ ಜಿಲ್ಲಾ ನಾಯಕರ ಸಭೆ ನಗರದ ಬಡೇ ಮಕಾನ್ ಮದ್ರಸಾ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು, ಬಳ್ಳಾರಿ ಜಿಲ್ಲಾ ಭೇಟಿ ಪ್ರಯುಕ್ತ ಹೊಸಪೇಟೆ ಗೌಸೇ ರಝಾ ಮಸೀದಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು.ಕೊಪ್ಪಳ ಜಿಲ್ಲೆ ನಾಯಕರ ಭೇಟಿ ಗಂಗಾವತಿ ಜಾಮಿಯಾ ಮಸ್ಜಿದ್ ಸಭಾಂಗಣದಲ್ಲಿ ಹಾಗೂ ಬಾಗಲಕೋಟೆ ಜಿಲ್ಲೆಯ ಇಲಕ್ಕಲ್ ಮುರ್ತಝಾ ಖಾದ್ರಿ ದರ್ಗಾ ವಠಾರದಲ್ಲಿ ಜಿಲ್ಲಾ ನಾಯಕರೊಂದಿಗೆ ಸಮಾಲೋಚನೆ ಮಾಡುವುದರೊಂದಿಗೆ ಮೊದಲ ದಿನದ ಪ್ರವಾಸ ಯಶಸ್ವಿಯಾಗಿ ಸಮಾಪ್ತಿಗೊಂಡಿತು.
ತಳಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠ ಗೊಳಿಸಲು ಬೇಕಾದ ವಿವಿಧ ಕಾರ್ಯಯೋಜನೆಗಳು ಹಾಗೂ ಮೆಂಬರ್ ಶಿಪ್ ಅಭಿಯಾನದ ಬಗ್ಗೆ ಸಮಗ್ರ ಚರ್ಚೆಗಳನ್ನು ನಡೆಸಲಾಯಿತು.
ಎರಡನೇ ದಿನವಾದ ಇಂದು ಬಿಜಾಪುರ, ಗುಲ್ಬರ್ಗ, ಯಾದಗಿರಿ, ರಾಯಚೂರು ಜಿಲ್ಲೆಗಳ ಭೇಟಿ ನಡೆಯಲಿದೆ.ರಾಜ್ಯಾಧ್ಯಕ್ಷ ಮೌಲಾನಾ ಇಸ್ಮಾಯಿಲ್ ಸಖಾಫಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರವಾಸದಲ್ಲಿ ರಾಜ್ಯ ಉಪಾಧ್ಯಕ್ಷ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್, ಕಾರ್ಯದರ್ಶಿ ಗಳಾದ ಹಾಫಿಲ್ ಸುಫ್ಯಾನ್ ಸಖಾಫಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಶಿವಮೊಗ್ಗ, ಹಸೈನಾರ್ ಆನೆಮಹಲ್ , ಮುಸ್ತಫಾ ನಈಮಿ ಹಾವೇರಿ, ಅಬ್ದುರ್ರಹ್ಮಾನ್ ಸುಳ್ಯ ಯಾತ್ರೆಯಲ್ಲಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮುಫ್ತಿ ರೋಶನ್ ಝಮೀರ್ ಹೊಸಪೇಟೆ, ಮೌಲಾನಾ ಆದಂ ಹಝ್ರತ್ ಚಿತ್ರದುರ್ಗ, ರಫೀಖ್ ಸಖಾಫಿ ಬಳ್ಳಾರಿ, ಅಬ್ದುಲ್ ಖಾದರ್ ಸಖಾಫಿ, ಆರಿಫ್ ರಝಾ ತುಮಕೂರು, ಜನಾಬ್ ಯೂನುಸ್ ಸಾಹೇಬ್ ಇಲಕ್ಕಲ್, ಮೌಲಾನಾ ಗುಲಾಂ ಹುಸೈನ್ ರಝ್ವಿ ಬೂದುಗುಂಪ, ಮೌಲಾನಾ ನಝೀರ್ ಅಹ್ಮದ್ ಬಿ.ನರ್ಸಾಪುರ, ಇಸ್ಹಾಖ್ ಸಖಾಫಿ ಕುಡತಿನಿ, ನೂರುದ್ದೀನ್ ರಝ್ವಿ ಗಂಗಾವತಿ, ಮಹಬೂಬ್ ಬಸಾಪಟ್ಟಣ, ಜನಾಬ್ ಅಬ್ದುಲ್ ರಶೀದ್ ಹೊಸಪೇಟೆ, ಇಸ್ಹಾಖ್ ಸಖಾಫಿ ಕುಡತಿನಿ, ಹಾಫಿಝ್ ಸಲೀಂ ಗಂಗಾವತಿ, ಮೌಲಾನಾ ಖ್ವಾಜಾ ರಝಾ ತಾವರಗೆರೆ; ಹಾಫಿಝ್ ಹುಸೈನ್ ಕಂಪ್ಲಿ, ಜನಾಬ್ ಹುಸೈನ್ ಸಾಬ್ ಕುಡತಿನಿ, ಮಹಬೂಬ್ ಸಿದ್ಧಾಪುರ ಉಪಸ್ಥಿತರಿದ್ದರು.
ಮಾಶಾಅಲ್ಲ ಎಸ್ ಎಸ್ ಎಫ್ ದೊಣೆ ಸಾಗಲಿ