ಮಾಜಿ ಸಚಿವ ,ಸಮಾಜದ ಹಿರಿಯ ರಾಜಕೀಯ ಮುತ್ಸದ್ದಿ ,ಬಿ.ಎ ಮೊಹಿದಿನ್ ನಿಧನಕ್ಕೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಮೊಹಿದಿನ್ ರವರು ಸಮಾಜದ ಪ್ರಭಾವಿ ಮುಖಂಡರಾಗಿದ್ದರು.ಸಚಿವರಾಗಿ ಹಾಗೂ ಶಾಸಕರಾಗಿ ಅವರು ಜನ ಸಮುದಾಯಕ್ಕೆ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆ ರಾಜ್ಯ ರಾಜಕಾರಣದಲ್ಲಿ ಅಚ್ಚಳಿಯದೆ ಉಳಿದಿದೆ.ಕುಟುಂಬಕ್ಕೆ ಅವರ ನಿಧನದ ದುಖಃ ಭರಿಸಲು ಅಲ್ಲಾಹನು ಸಹನೆಯನ್ನು ನೀಡಲಿ,ಅವರಿಗೆ ಮಗ್ಫಿರತ್ತನ್ನು ಕರುಣಿಸಲಿ ಎಂದು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ಸಂತಾಪ ಸೂಚಿಸಿ,ಹೇಳಿದ್ದಾರೆ.