janadhvani

Kannada Online News Paper

‘ಈದುಲ್ ಫಿತ್ರ್’ ಖುತ್ಬಾ ವೇಳೆ ಇಮಾಮ್ ಕುಸಿದು ಬಿದ್ದು ಮೃತ್ಯು

ಪಾಲಕ್ಕಾಡ್, ಕೇರಳ : ಪಾಲಕ್ಕಾಡ್‌ನ ಚೆರ್ಪುಳಶ್ಶೇರಿ ಬಳಿಯ ಅಟ್ಟಾಶ್ಶೇರಿ ಮಸೀದಿ ತಆವುನ್‌ನ ಇಮಾಮ್ ಅಬ್ದುಲ್ ಶುಕೂರ್ ಖಾಸಿಮಿ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಈದ್ ನಮಾಜ್ ನಂತರ ಖುತ್ಬಾ ನಡೆಸುತ್ತಿದ್ದಾಗ ಕುಸಿದು ಬಿದ್ದು ನಿಧನರಾಗಿದ್ದಾರೆ. ಇವರು ಮೂಲತಃ ಇಡುಕ್ಕಿ ಜಿಲ್ಲೆಯ ತೊಡುಪುಝ ನಿವಾಸಿಯಾಗಿದ್ದಾರೆ.