ಕುವೈಟ್ ಸಿಟಿ: ವಿಮಾನ ಯಾತ್ರೆ ಕೈಗೊಳ್ಳುವ ಪ್ರಯಾಣಿಕರು ಇತರ ಪ್ರಯಾಣಿಕರ ಹ್ಯಾಂಡ್ ಬ್ಯಾಗ್ ಅಥವಾ ಲಗೇಜ್ ಗಳನ್ನು ಸ್ವೀಕರಿಸದಂತೆ ಕುವೈತ್ ಕಸ್ಟಮ್ಸ್ ಡೈರೆಕ್ಟರ್ ಜನರಲ್ ಎಚ್ಚರಿಕೆ ನೀಡಿದ್ದಾರೆ.
ಕಸ್ಟಮ್ಸ್ ಡೈರೆಕ್ಟರ್ ಜನರಲ್ ವಾಲೀದ್ ಅಲ್ ನಾಸರ್ ಅವರು ಮಾತನಾಡಿ, ಕುವೈತ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರಯಾಣಿಕರು ಇತರರ ಕೈಚೀಲಗಳನ್ನು ಪಡೆದಿದ್ದಲ್ಲಿ, ಅದರೊಳಗೆ ನಿಷೇಧಿತ ಸರಕುಗಳು ಕಂಡುಬಂದಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದಿದ್ದಾರೆ.ಸ್ವಲ್ಪ ಸಮಯದ ಮಟ್ಟಿಗೆ ವಿಮಾನ ನಿಲ್ದಾಣದಲ್ಲಿ ಇತರರು ಹಸ್ತಾಂತರಿಸಿರುವ ವಸ್ತುಗಳನ್ನು ಸ್ವೀಕರಿಸುವುದು ಅಪಘಾತವನ್ನು ತಂದೊಡ್ಡಬಹುದು ಎಂದು ಅವರು ಹೇಳಿದರು.
ಮಾದಕ ವಸ್ತುಗಳಂತಹ ನಿಷೇಧಿತ ಸರಕುಗಳನ್ನು ಸಾಗಿಸಲು ಮುಗ್ದ ಪ್ರಯಾಣಿಕರನ್ನು ದುರುಪಯೋಗ ಪಡಿಸುವ ಮಾಫಿಯಾ ಗುಂಪುಗಳಿವೆ ಎಂದು ಅಲ್ ನಾಸರ್ ಎಚ್ಚರಿಸಿದ್ದಾರೆ.ಗ್ಯಾಂಗ್‌ನ ಬಲೆಗೆ ಸಿಲುಕಿಕೊಂಡರೆ ಪ್ರಯಾಣಿಕ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಅಪಾಯವಿದೆ.
ಅದೇ ರೀತಿ 10,000 ಡಾಲರ್ ವರೆಗಿನ ಸಮಾನ ಕರೆನ್ಸಿ ಹೊಂದಿರುವ ಪ್ರಯಾಣಿಕರು ಕಸ್ಟಮ್ಸ್ ತಪಾಸಣೆ ವೇಳೆಯಲ್ಲಿ ಮಾಹಿತಿ ನೀಡಬೇಕು,ಇಲ್ಲದಿದ್ದಲ್ಲಿ ನೀವು ಹಿಡಿಯಲ್ಪಟ್ಟರೆ, ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.45 ಮಹಿಳಾ ಅಧಿಕಾರಿಗಳು ಸೇರಿದಂತೆ 190 ಸೇವಾದಾರರು, ಕಸ್ಟಮ್ ಕರ್ತವ್ಯಕ್ಕಾಗಿ ಲಭ್ಯವಿರುತ್ತಾರೆ ಎಂದು ಕಸ್ಟಮ್ಸ್ ಡೈರೆಕ್ಟರ್ ತಿಳಿಸಿದ್ದಾರೆ.