ದಮ್ಮಾಂ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ದಮ್ಮಾಂ ವಲಯದ ಅಧೀನಕ್ಕೊಳಪಟ್ಟ ದಮ್ಮಾಂ ಘಟಕದ ವತಿಯಿಂದ ಇತ್ತೀಚೆಗೆ (ಮಾರ್ಚ್ 5, 2026 ಗುರುವಾರ) ದಮ್ಮಾಂನಲ್ಲಿ ಅದ್ಧೂರಿ ಇಫ್ತಾರ್ ಮೀಟ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯಾಂಶಗಳು:
ಕಾರ್ಯಕ್ರಮವು ಇಸ್ಮಾಯೀಲ್ ಕಾಟಿಪಳ್ಳ (ಮಾಧ್ಯಮ ಮುಖ್ಯಸ್ಥರು, DKSC) ರವರ ಪವಿತ್ರ ಕುರ್ಆನ್ ಪಠಣದೊಂದಿಗೆ ಆರಂಭವಾಯಿತು. ಉಸ್ತಾದ್ ಮುಹಮ್ಮದ್ ಬಶೀರ್ ಸಖಾಫಿ ಮಸ್ದರ್ ಪ್ರಾರ್ಥನೆ ನೆರವೇರಿಸಿದರು. ದಮ್ಮಾಂ ಘಟಕದ ಅಧ್ಯಕ್ಷರಾದ ಜಮಾಲ್ ಸ್ವಾಲಿಹ್ ಕಣ್ಣಂಗಾರ್ ಸಭಾಧ್ಯಕ್ಷತೆ ವಹಿಸಿದ್ದರು.

ಬದ್ರ್ ಸಂದೇಶ: ಉಸ್ತಾದ್ ಅಬ್ದುಲ್ ಮಜೀದ್ ಹುದವಿಯವರು ಬದ್ರ್ ದಿನದ ಮಹತ್ವ ಹಾಗೂ ರಮಳಾನ್ನ ಪಾವಿತ್ರ್ಯತೆಯ ಕುರಿತು ಮುಖ್ಯ ಪ್ರಭಾಷಣ ಮಾಡಿದರು.

ಯೋಜನೆಗಳ ವಿವರಣೆ:
DKSC ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ ಸ್ವಾಗತಿಸಿ, ಸಂಸ್ಥೆಯ ಮುಂದಿನ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ವಿವರಿಸಿದರು:
- ಸ್ಥಳ ಖರೀದಿ: ಮುಡಿಪು ಪ್ರದೇಶದಲ್ಲಿ DKSCಯ ನೂತನ ಯೋಜನೆಗಾಗಿ ಭೂಮಿ ಖರೀದಿ.
- ಉಸ್ರತುಲ್ ಇಹ್ಸಾನ್: ಮರ್ಕಝ್ನ ದೈನಂದಿನ ನಿರ್ವಹಣೆಗಾಗಿ ಜಾರಿಗೆ ತಂದಿರುವ ಮಾಸಿಕ ದೇಣಿಗೆ ಪದ್ಧತಿಯ ಬಗ್ಗೆ ಜಾಗೃತಿ.
- ರಮಳಾನ್ ಅಭಿಯಾನ: ಪವಿತ್ರ ಮಾಸದಲ್ಲಿ ಸಂಘಟನೆಯನ್ನು ಬಲಪಡಿಸುವ ಮತ್ತು ಜನಸೇವೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.


ಅತಿಥಿ ಅಭ್ಯಾಗತರು:
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ:
- ದಾವೂದ್ ಕಜಮಾರ್ (ಹಣಕಾಸು ಕಾರ್ಯದರ್ಶಿ, DKSC ಕೇಂದ್ರ ಸಮಿತಿ)
- ಸಿನಾನ್ ಹುದವಿ
- ಅಬ್ದುಲ್ ಹಮೀದ್ ಕಾಪು (ಮಾಜಿ ಅಧ್ಯಕ್ಷರು, ದಮ್ಮಾಂ ವಲಯ)
- ಮುಹಮ್ಮದ್ ರೋಯಲ್ ಮುಕ್ವೆ (ಮಾಜಿ ಪ್ರಧಾನ ಕಾರ್ಯದರ್ಶಿ)
- ಮುಸ್ಥಫ ಮೈನಾ (ಅಧ್ಯಕ್ಷರು, ಜುಬೈಲ್ ಘಟಕ)
- ಅಶ್ರಫ್ ಚಿಕ್ಕಮಗಳೂರು (ಅಧ್ಯಕ್ಷರು, ಮದದ್ ವಿಂಗ್) ಪಾಲ್ಗೊಂಡಿದ್ದರು.
ಸಿದ್ದೀಖ್ ಕೊಂಚಾರ್, ಸಯ್ಯದ್ ಬಾವ ಬಜ್ಪೆ, ಮುಹ್ಯಿದ್ದೀನ್ ಬಾವ ಮಂಜೇಶ್ವರ, ಅಬ್ದುಲ್ ಅಝೀಝ್ ಮೂಡುತೋಟ, ಉಮರಬ್ಬ ಮರವೂರು ಹಾಗೂ ಪದಾಧಿಕಾರಿಗಳಾದ ಅಲ್ತಾಫ್ ಚೊಕ್ಕಬೆಟ್ಟು, ಜುರೈಜ್ ಮೂಡುತೋಟ, ಅಶ್ರಫ್ ಉಜಿರೆ, ಇಮ್ತಿಯಾಝ್ ಕೂಳೂರು ಮತ್ತು ಶಾಕಿರ್ ಬೊಳ್ಳಾಯಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.
ಅಲ್ ಖೋಬರ್, ದಮ್ಮಾಂ ಮತ್ತು ಜುಬೈಲ್ ಘಟಕದ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ದಮ್ಮಾಂ ಘಟಕದ ಪ್ರಧಾನ ಕಾರ್ಯದರ್ಶಿ ಶೌಕತ್ ಅಲೀ ತೀರ್ಥಹಳ್ಳಿ ವಂದಿಸಿದರು.







Masha Allah.
Nice programme.
All the Best Wishes
By
ISMAIL KATIPALLA