ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನದ ತುಖ್ಬ ಘಟಕದ 31ನೇ ವಾರ್ಷಿಕ ಮಹಾಸಭೆ 23, ಜನವರಿ 2026 ಶುಕ್ರವಾರ ಜುಮ್ಅ ನಮಾಝಿನ ಬಳಿಕ ತುಖ್ಬಾದಲ್ಲಿ ಡಿಕೆಯಸ್ಸಿ ತುಖ್ಬ ಘಟಕದ ಅಧ್ಯಕ್ಷ ಜನಾಬ್ ಅಬೂಬಕ್ಕರ್ ಹಂಡೇಲ್ ಮುಹಮ್ಮದ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿತು.
ಖಾರಿಅ್ ಇಸ್ಮಾಯೀಲ್ ಕಾಟಿಪಳ್ಳ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.
ಮುನವ್ವರ್ ಹಿದಾಯತ್ ಉಪ್ಪಿನಂಗಡಿ ಖಿರಾಅತ್ ಪಠಿಸಿದರು.


ಸಭೆಗೆ ಆಗಮಿಸಿದ ಸರ್ವ ಸದಸ್ಯರ ನ್ನು ಸಂವಹಣಾ ಕಾರ್ಯದರ್ಶಿ ಅಶ್ರಫ್ ಬಾವ ಅತ್ರಾಡಿ ಅಚ್ಚುಕಟ್ಟಾಗಿ ಸ್ವಾಗತಿಸಿದರು.
ಡಿಕೆಯಸ್ಸಿ ತುಖ್ಬ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲೀಂ ಉಪ್ಪಿನಂಗಡಿ ವಾರ್ಷಿಕ ವರದಿ ವಾಚಿಸಿದರು ಹಾಗೂ ಹಣಕಾಸು ಕಾರ್ಯದರ್ಶಿ ಜೆಪ್ಪು ಮುಹಮ್ಮದ್ ಹನೀಫ್ ಪ್ರವರ್ತನಾ ವರದಿ ಮಂಡಿಸಿ ಸಭೆಯ ಅಂಗೀಕಾರ ಪಡೆಯಲಾಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಡಿಕೆಯಸ್ಸಿ ಕೇಂದ್ರ ಸಮಿತಿ ಉಪಾಧ್ಯಕ್ಷ ಜನಾಬ್ ಅಬ್ದುಲ್ ಅಝೀಝ್ ಮೂಳೂರುರವರು ಡಿಕೆಯಸ್ಸಿ 31 ವರ್ಷಗಳಿಂದ ಸಮುದಾಯಕ್ಕೆ ಮಾಡಿದ ಸೇವೆಯನ್ನು ವಿವರಿಸಿ ಮುಂದಕ್ಕೆ ಅದರ ಅಭಿವೃಧ್ಧಿಗಾಗಿ ಶ್ರಮಿಸಿರಿ ಎಂದು ನುಡಿದು ಸೂರತುಲ್ ಅಹ್ ಝಾಬ್ ನ 53 ನೇ ಆಯತ್ ಪ್ರವಾದಿ ಮುಹಮ್ಮದ್ (ಸ) ಮೇಲೆ ಹೇಳುವ ಸ್ವಲಾತ್ ಹಾಗೂ ಸಲಾಮಿನ ಬಗ್ಗೆ ಹೇಳಿ ಉದ್ಘಾಟಿಸಿದರು.



ಪ್ರಸಕ್ತ ಸಾಲಿನಲ್ಲಿ ತುಖ್ಬ ಘಟಕದ ಅಭಿವೃಧ್ಧಿಗೋಸ್ಕರ ನಿಸ್ವಾರ್ಥ ಸೇವೆಗೈದ ಮೂವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ತುಖ್ಬ ಘಟಕದ ಡೆವಲಪ್ ಮೆಂಟ್ ಚೆಯರ್ಮ್ಯಾನ್ ಜನಾಬ್ ಅಬ್ದುಲ್ ಅಝೀಝ್ ಮೂಳೂರು, ಉಪಾಧ್ಯಕ್ಷ ಜ! ಅಬೂಬಕ್ಕರ್ ಬಜಗೋಳಿ, ಸಂವಹಣಾ ಕಾರ್ಯದರ್ಶಿ ಜ! ಅಶ್ರಫ್ ಬಾವ ಆತ್ರಾಡಿ ರವರ ಕಾರ್ಯವೈಖರಿ ಯನ್ನು ಜ! ಹನೀಫ್ ಜೆಪ್ಪುರವರು ಶ್ಲಾಘಿಸಿದರು.
ಪ್ರಸಕ್ತ ವರ್ಷ ಉತ್ತಮ ಸೇವೆಗೈದ ಸದಸ್ಯರನ್ನು ಹೃದಯಾಂತರಾಳದ ಹೃತ್ಪೂರ್ವಕ ಶುಭಾಶಯ ವಿನಿಮಯ ಮಾಡುತ್ತಾ ಮುಂಬರುವ ವರ್ಷ ಗಳಲ್ಲಿ ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಅತ್ಯಮೂಲ್ಯ ಸಹಾಯ, ಸೇವೆ, ಪ್ರೋತ್ಸಾಹ ಡಿಕೆಯಸ್ಸಿಯೊಂದಿಗೆ ನಿರಂತರವಾಗಿರಲಿ ಎಂದು ಸಭಾಧ್ಯಕ್ಷ ಜ! ಅಬೂಬಕ್ಕರ್ ಹಂಡೇಲ್ ಮಾತನಾಡಿದರು.
ದಮ್ಮಾಂ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ಚುನಾವಣಾಧಿಕಾರಿಯಾಗಿ 32 ನೇ ವರ್ಷಕ್ಕೆ 2026-27 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಿದರು.
ಗೌರವಾಧ್ಯಕ್ಷ:
ಡಾಕ್ಟರ್ ಮುಹಮ್ಮದ್ ಶರೀಫ್ ಮೂಳೂರು
ಅಧ್ಯಕ್ಷ:ಜೆಪ್ಪು ಮುಹಮ್ಮದ್ ಹನೀಫ್
ಪ್ರಧಾನ ಕಾರ್ಯದರ್ಶಿ:ನೌಫಲ್ ಉಚ್ಚಿಲ
ಹಣಕಾಸು ಕಾರ್ಯದರ್ಶಿ:ರಾಝಿಖ್ ಕೂರ್ನಡ್ಕ, ಪುತ್ತೂರು
ಡೆವಲಪ್ಮೆಂಟ್ ಚೆಯರ್ಮ್ಯಾನ್:ಅಬೂಬಕ್ಕರ್ ಬಜಗೋಳಿ
ಸಂವಹಣಾ ಕಾರ್ಯದರ್ಶಿ:ಅಶ್ರಫ್ ಬಾವ ಆತ್ರಾಡಿ
ಉಪಾಧ್ಯಕ್ಷರು:ಅಬೂಬಕ್ಕರ್ ಹಂಡೇಲು, ಅಬ್ದುರ್ರಹ್ಮಾನ್ ಮೂಳೂರು
ಕಾರ್ಯದರ್ಶಿ:ಮುಹಮ್ಮದ್ ಶರೀಫ್ ಉಚ್ಚಿಲ,
ಅಸೀಬ್ ರಹ್ಮಾನ್ ಉಚ್ಚಿಲ
ಮುಖ್ಯ ಸಲಹೆಗಾರರು:ಅಬ್ದುಲ್ ಅಝೀಝ್ ಮೂಳೂರು
ಸಲಹೆಗಾರರು:ಸಲೀಂ ಉಪ್ಪಿನಂಗಡಿ, ಸಂಶೀರ್ ಉಚ್ಚಿಲ
ಆರ್ಗನೈಝರ್:ಅಬ್ದುಲ್ಲತೀಫ್ ಕಿನ್ನಿಗೋಳಿ
ಕಾರ್ಯಕಾರಿ ಸಮಿತಿ ಸದಸ್ಯರು:
ಅಬ್ದುಲ್ ಹಮೀದ್ ಉಚ್ಚಿಲ
ರಿಯಾಝ್ ಮಣಿಪುರ
ಅಸ್ಲಂ ಶಿರ್ವ
ಬಾವಾಕ ಕಣ್ಣಂಗಾರ್
ಶಂಸುದ್ದೀನ್ ಮೂಳೂರು
ಶಾಕಿರ್ ಉಚ್ಚಿಲ
ಫಯಾಝ್ ಪಡುಬಿದ್ರಿ
ಅಬೂಬಕ್ಕರ್ ದೇರಳಕಟ್ಟೆ
ಶರೀಫ್ ಉಚ್ಚಿಲ
ಉಸ್ಮಾನ್ ಬೆಳ್ತಂಗಡಿ
ಡಿಕೆಯಸ್ಸಿ ಅಲ್ ಖೋಬರ್ ಘಟಕದ ನೂತನ ಅಧ್ಯಕ್ಷ ಉಸ್ಮಾನ್ ಹೊಸಂಗಡಿ, ಫ್ಯಾಮಿಲಿ ಮುಲಾಖಾತ್ ಪ್ರಧಾನ ಕಾರ್ಯದರ್ಶಿ ಶಾಫಿ ಶುಐಬ್ ಸಭೆಯಲ್ಲಿ ಉಪಸ್ಥಿತರಿದ್ದರು. ದಮ್ಮಾಂ ವಲಯ ಸಂವಹಣಾ ಕಾರ್ಯದರ್ಶಿ ಜಮಾಲ್ ಸ್ವಾಲಿಹ್ ಕಣ್ಣಂಗಾರ್,ಮದದ್ ವಿಂಗ್ ಅಧ್ಯಕ್ಷ ಅಶ್ರಫ್ ಚಿಕ್ಕ ಮಗಳೂರು, ದಮ್ಮಾಂ ಘಟಕ ಹಣಕಾಸು ಕಾರ್ಯದರ್ಶಿ ಅಬೂಬಕ್ಕರ್ ಅಜಿಲಮೊಗರು, ಸದಸ್ಯ ಉಮರಬ್ಬ ಮರವೂರು ಸಂದರ್ಭೋಚಿತವಾಗಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಜ! ಜೆಪ್ಪು ಮುಹಮ್ಮದ್ ಹನೀಫ್ ರವರು ಡಿಕೆಯಸ್ಸಿಗಾಗಿ ನಿಸ್ವಾರ್ಥ ಸೇವೆಗೈಯ್ಯುತ್ತೇವೆಂದು ಪ್ರತಿಜ್ಞೆಯನ್ನು ಸದಸ್ಯರೆಲ್ಲರ ಮೂಲಕ ಪ್ರತಿಜ್ಞಾ ವಿಧಿ ಭೋಧಿಸಿದರು.

ಕಾರ್ಯಕ್ರಮ ನಿರೂಪಿಸಿದ ಡಿಕೆಯಸ್ಸಿ ಕೇಂದ್ರ ಸಮಿತಿ ಮೀಡಿಯ ವಿಂಗ್ ಮುಖ್ಯಸ್ಥ ಇಸ್ಮಾಯೀಲ್ ಕಾಟಿಪಳ್ಳರವರು ಧನ್ಯವಾದ ಮಾಡಿದ ಶುಭ
ಸಂದರ್ಭ ಡಿಕೆಯಸ್ಸಿ ತುಖ್ಬ ಘಟಕಕ್ಕಾಗಿ ದುಡಿದ ಮೂರು ಮಂದಿ ಮಹಾನ್ ಸದಸ್ಯರನ್ನು ನೆನಪಿಸಿದರು.
ಡಿಕೆಯಸ್ಸಿ ಗಾಗಿ ಮರ್ಕಝ್
ತಅಲೀಮಿಲ್ ಇಹ್ಸಾನ್ ಗಾಗಿ ಜಾಗ ನೀಡಿದ ಹಾಜಿ ಮುಹ್ಯಿದ್ದಿನಬ್ಬ ಮೂಳೂರು, 18 ವರ್ಷಗಳ ಸುದೀರ್ಘ ಕಾಲ ತುಖ್ಬ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯಾಚರಿಸಿದ ಹಾಜಿ ಮುಹಮ್ಮದ್ ತ್ವಾಹಿರ್ ಕುಂದಾಪುರ ಹಾಗೂ ಪ್ರತೀ ಮಾಸಿಕ ಸಭೆ ಮತ್ತು ಆಹಾರದ ವ್ಯವಸ್ಥೆಯನ್ನು ಒದಗಿಸಿಕೊಟ್ಟ ನಮ್ಮನ್ನಗಲಿದ ಮರ್ಹೂಂ ಹುಸೈನಬ್ಬ ಮೂಳೂರು ರವರನ್ನು ನೆನಪಿಸಿ ದುಆ ಮಾಡಲಾಯಿತು.
13, ಮಾರ್ಚ್ 2026 ಶುಕ್ರವಾರ ಡಿಕೆಯಸ್ಸಿ ತುಖ್ಬ ಘಟಕದ ರಮಳಾನ್ ಇಫ್ತಾರ್ ಕೂಟ ನಡೆಸುವುದೆಂದು ತೀರ್ಮಾನಿಸಲಾಯಿತು.
ದಮ್ಮಾಂ ವಲಯಕ್ಕೆ ಸದಸ್ಯರುಗಳ ಹೆಸರು:
ಅಬ್ದುಲ್ ಅಝೀಝ್ ಮೂಳೂರು
ಜೆಪ್ಪು ಮುಹಮ್ಮದ್ ಹನೀಫ್
ಅಬೂಬಕ್ಕರ್ ಹಂಡೇಲ್
ಅಬ್ದುಲ್ ಸಲೀಂ ಉಪ್ಪಿನಂಗಡಿ
ಅಶ್ರಫ್ ಬಾವ ಆತ್ರಾಡಿ
ಅಬೂಬಕ್ಕರ್ ಬಜಗೋಳಿ


