ಕೆಸಿಎಫ್ ಬಹರೈನ್ ನೋರ್ತ್ ಝೋನ್ ವತಿಯಿಂದ ಫೆಬ್ರವರಿ ತಿಂಗಳ 13 ರಂದು ರಾಷ್ಟ್ರೀಯ ಸಮಿತಿಯ ಆದೇಶ ಪ್ರಕಾರ ಕೆಸಿಎಫ್ ಡೇ – 2026 ಕಾರ್ಯಕ್ರಮವನ್ನು ಸಾರ್ ವಿಲ್ಲದಲ್ಲಿ ಆಚರಿಸಲು ತೀರ್ಮಾನಿಸಲಾಯಿತು. ಝೋನ್ ಅಧ್ಯಕ್ಷರಾದ ಅಹ್ಮದ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಚೇರ್ಮಾನ್ ನಿಯಾಝ್ ಕುರ್ನಾಡು, ವೈಸ್ ಚೇರ್ಮಾನ್ ಹಾರಿಸ್ ಒಕ್ಕೆತ್ತೂರ್, ಕನ್ವೀನರ್ ಹನೀಫ್ ಮುಸ್ಲಿಯಾರ್, ಫೈನಾನ್ಸ್ ಕಂಟ್ರೋಲರ್ ನೌಫಲ್ ವಿಟ್ಲ ಇವರನ್ನು ನೇಮಕ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಪ್ರತಿಭೋತ್ಸವ, ಆಧ್ಯಾತ್ಮಿಕ ಮಜ್ಲಿಸ್, ಸಂಘಟನಾ ತರಬೇತಿ, ಆಟೋಟ ಸ್ಪರ್ಧೆ, ಬುರ್ದಾ ಮಜ್ಲಿಸ್, ಸಮಾರೋಪ ಸಮಾರಂಭ ಮುಂತಾದ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು. ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆ ಕೆಸಿಎಫ್’ನ ಜನ್ಮ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಬೇಕೆಂದು ಸಾಂದರ್ಭಿಕವಾಗಿ ಮಾತನಾಡಿದ ಚೇರ್ಮಾನ್ ನಿಯಾಝ್ ಕುರ್ನಾಡುರವರು ಪ್ರತಿಯೋರ್ವ ಕಾರ್ಯಕರ್ತರು ಸರ್ವ ವಿಧ ಸಹಾಯ ಸಹಕಾರದೊಂದಿಗೆ ಕೈಜೋಡಿಸಬೇಕೆಂದು ಕರೆಯಿತ್ತರು. ಝೋನ್ ಕಾರ್ಯದರ್ಶಿ ವೇಣೂರು ಉಸ್ತಾದರು ಸ್ವಾಗತಿಸಿ, ಗುದೈಬಿಯಾ ಸೆಕ್ಟರ್ ಕಾರ್ಯದರ್ಶಿ ಮಜೀದ್ ಪೈಂಬಚ್ಚಾಲ್ ಧನ್ಯವಾದ ಸಮರ್ಪಿಸಿದರು.


