janadhvani

Kannada Online News Paper

ಇಲ್ಲಿ ನೀವು ಸೇಫ್: ಸತತ ಹತ್ತನೇ ಬಾರಿಗೂ ವಿಶ್ವದ ಸುರಕ್ಷಿತ ನಗರಗಳ ಪೈಕಿ ಅಬುಧಾಬಿಗೆ ಅಗ್ರಸ್ಥಾನ

400 ನಗರಗಳ ಪೈಕಿ ಭಾರತದ ಮಂಗಳೂರು 51 ನೇ ಸ್ಥಾನವನ್ನು ಪಡೆದುಕೊಂಡಿದ್ದು, ಭಾರತದಲ್ಲಿ ಅಗ್ರಸ್ಥಾನದಲ್ಲಿದೆ.

ಅಬುಧಾಬಿ: 2026 ಕ್ಕೆ ಪ್ರವೇಶಿಸುತ್ತಿದ್ದಂತೆ, ಯುಎಇ ರಾಜಧಾನಿ ಅಬುಧಾಬಿ ಮತ್ತೊಮ್ಮೆ ವಿಶ್ವದ ಸುರಕ್ಷಿತ ನಗರವಾಗಿ ಹೊರ ಹೊಮ್ಮಿದೆ. ಜಾಗತಿಕ ಅಂಕಿಅಂಶಗಳ ವೇದಿಕೆ ‘ನಂಬಿಯೊ’ ಬಿಡುಗಡೆ ಮಾಡಿದ ಜಾಗತಿಕ ಸುರಕ್ಷಿತ ನಗರಗಳ ಸೂಚ್ಯಂಕದಲ್ಲಿ ಅಬುಧಾಬಿ 2017 ರಿಂದ ಸತತ ಹತ್ತನೇ ಬಾರಿಗೆ ಅಗ್ರಸ್ಥಾನದಲ್ಲಿದೆ. 150 ದೇಶಗಳ 400 ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 89.0 ಅಂಕಗಳನ್ನು ಕಾಯ್ದುಕೊಳ್ಳುವ ಮೂಲಕ ಈ ಸಾಧನೆಯನ್ನು ಸಾಧಿಸಿದೆ.

ಪಟ್ಟಿಯಲ್ಲಿರುವ ಮೊದಲ ಆರು ನಗರಗಳಲ್ಲಿ ಐದು ಯುಎಇಯಿಂದ ಬಂದಿವೆ. ಮೊದಲ ಹತ್ತರಲ್ಲಿ, ಕತಾರ್ ರಾಜಧಾನಿ ದೋಹಾ ನಾಲ್ಕನೇ ಸ್ಥಾನ ಮತ್ತು ಒಮಾನ್‌ನ ಮಸ್ಕತ್ ಎಂಟನೇ ಸ್ಥಾನ ಪಡೆದುಕೊಂಡಿವೆ. ರಾತ್ರಿಯಲ್ಲಿ ಒಂಟಿಯಾಗಿ ನಡೆಯುವಾಗ ಸುರಕ್ಷತೆ, ಹಗಲಿನಲ್ಲಿ ಒಂಟಿಯಾಗಿ ನಡೆಯುವಾಗ ಸುರಕ್ಷತೆ, ಕಡಿಮೆ ಅಪರಾಧ ದರಗಳು, ಉತ್ತಮ ಗುಣಮಟ್ಟದ ಜೀವನ ಮತ್ತು ಭದ್ರತಾ ವ್ಯವಸ್ಥೆಗಳ ಆಧಾರದ ಮೇಲೆ ನಂಬಿಯೊ ನಗರಗಳನ್ನು ಶ್ರೇಣೀಕರಿಸಿದೆ.

400 ನಗರಗಳ ಪೈಕಿ ಭಾರತದ ಮಂಗಳೂರು 51 ನೇ ಸ್ಥಾನವನ್ನು ಪಡೆದುಕೊಂಡಿದ್ದು, ಭಾರತದಲ್ಲಿ ಅಗ್ರಸ್ಥಾನದಲ್ಲಿದೆ.

89 ರಾಷ್ಟ್ರಗಳ ಪೈಕಿ ಯುಎಇ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಖತರ್ ಮತ್ತು ಮೂರನೇ ಸ್ಥಾನದಲ್ಲಿ ತೈವಾನ್. ಹನ್ನೊಂದನೇ ಸ್ಥಾನದಲ್ಲಿ ಸೌದಿ ಅರೇಬಿಯಾ ಹಾಗೂ ಭಾರತ 53 ನೇ ಸ್ಥಾನದಲ್ಲಿದೆ. ಪಾಕಿಸ್ತಾನ ಭಾರತಕ್ಕಿಂತ ಹೆಚ್ಚಿನ ಸುರಕ್ಷಿತ ರಾಷ್ಟ್ರವಾಗಿದೆ ಇದು 47 ನೇ ಸ್ಥಾನದಲ್ಲಿದೆ.

ರಾಷ್ಟ್ರಗಳ ಪಟ್ಟಿ

ನಗರಗಳ ಪಟ್ಟಿ