ಅಬುಧಾಬಿ: ಅಬುಧಾಬಿಯಲ್ಲಿ ವಾಸಸ್ಥಳ ಕಾನೂನನ್ನು ತೀವ್ರ ಗೊಳಿಸಲಾಗಿದ್ದು, ಕಾನೂನಿನ ಉಲ್ಲಂಘನೆಗಾರರ ವಿರುದ್ಧ ಕಾನೂನು ಕ್ರಮ ಜಾರಿಗೆ ತರಲಾಗಿದೆ. ಈ ವರ್ಷ, 98 ಮನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು ದಂಡ ವಿಧಿಸಲಾಗಿದೆ. ಕಳೆದ ವರ್ಷ, 434 ಮನೆಯವರು ತಮ್ಮ ಅನುಮತಿಗಿಂತ ಹೆಚ್ಚು ಜನರನ್ನು ವಾಸಿಸಲು ಅನುಮತಿಸಿದ್ದು, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗಿದೆ.
2016 ರಲ್ಲಿ, ವಸತಿ ಸಮುಚ್ಚಯಗಳಲ್ಲಿ ಹೆಚ್ಚಿನ ಜನರನ್ನು ಅನುಮತಿಸಿದ್ದಕ್ಕಾಗಿ 297 ಕ್ಕೂ ಹೆಚ್ಚಿನ ಜನರಿಗೆ ದಂಡ ವಿಧಿಸಲಾಯಿತು. ಅಬುಧಾಬಿ ಪುರಸಭೆಯು, ಕಠಿಣವಾಗಿ ಕಾನೂನನ್ನು ರೂಪಿಸಿದ್ದರೂ ಕಾನೂನಿನ ಉಲ್ಲಂಘನೆ ಮುಂದುವರಿಯುತ್ತಿದೆ. ಬ್ಯಾಚುಲರ್ ನಿವಾಸಗಳಲ್ಲಿ ಗರಿಷ್ಠ ಮೂವರಿಗಿಂತ ಹೆಚ್ಚು ವಾಸಿಸದಂತೆ ಪುರಸಭೆಯು ಕಠಿಣ ಸೂಚನೆಯನ್ನು ನೀಡಿದೆ. ಅತ್ಯಂತ ಕೆಟ್ಟ ವಾತಾವರಣದಲ್ಲಿ ಜನರನ್ನು ವಾಸಿಸಲು ಅನುಮತಿಸಿದ ಕಟ್ಟಡದ ಮಾಲೀಕರ ವಿರುದ್ಧ ಅಬುಧಾಬಿ ಪುರಸಭೆಯು 2 ಲಕ್ಷ ರೂ. ದಂಡ ವಿಧಿಸಿದೆ.
ಕಟ್ಟಡಗಳಲ್ಲಿನ ಕೊಠಡಿಗಳನ್ನು ವಿಂಗಡಿಸಿ ಬ್ಯಾಚುಲರ್ ಮತ್ತು ಕುಟುಂಬಗಳಿಗೆ ವಾಸಿಸುವಂತೆ ಮಾಡಿದ ಮತ್ತು ಕಾನೂನು ಉಲ್ಲಂಘಿಸಿದವರ ವಿರುದ್ದ 10,000 ದಿಂದ 1 ಲಕ್ಷ ದಿರ್ಹಂ ವರೆಗೆ ದಂಡ ವಿಧಿಸಿವೆ. ಕಾನೂನಿನ ಉಲ್ಲಂಘನೆಯನ್ನು ಪುನರಾವರ್ತಿಸುವವರಿಗೆ, ದಂಡನೆಯು 1 ಲಕ್ಷ ದಿಂದ ಎರಡು ಲಕ್ಷ ಮೀರದ ದಂಡವನ್ನು ವಿಧಿಸಲಾಗುತ್ತದೆ. ಗಂಭೀರ ಕಾನೂನು ಉಲ್ಲಂಘಕರಿಗೆ ಜೈಲು ಶಿಕ್ಷೆ ಕೂಡಾ ವಿಧಿಸಲಾಗುತ್ತದೆ.