ವಿಟ್ಲ: ಅಕ್ಟೋಬರ್ 18,19,20 ರಂದು ನಡೆಯುವ ಜಿಲ್ಲೆಯ ಪ್ರಸಿದ್ಧ ವಿದ್ಯಾಸಂಸ್ಥೆ ದಾರುಲ್ ಅಶ್ ಅರಿಯ್ಯ ಸ್ಥಾಪಕ ಸೂಫಿವರ್ಯ ಮರ್ಹೂಂ ಸುರಿಬೈಲ್ ಉಸ್ತಾದರ 24ನೇ ಆಂಡ್ ನೇರ್ಚೆ ಯಶಸ್ವಿ ಗೊಳಿಸುವಂತೆ ಎಸ್ ಜೆ ಎಂ ದ.ಕ.ಸೌತ್ ಜಿಲ್ಲಾ ಸಮಿತಿ ಕರೆ ನೀಡಿದೆ.
ಇತ್ತೀಚೆಗೆ ಕುಡ್ತಮುಗೇರು ಬದ್ರುಲ್ ಹುದಾ ಸೆಕೆಂಡರಿ ಮದ್ರಸದಲ್ಲಿ ಜಿಲ್ಲಾಧ್ಯಕ್ಷ ಯಅಖೂಬ್ ಲತೀಫಿಯವರ ಅಧ್ಯಕ್ಷತೆಯಲ್ಲಿ ಸೇರಿದ ಕಾರ್ಯಕಾರಿಣಿ ಸಭೆಯಲ್ಲಿ
ಅಶ್ ಅರಿಯ್ಯ ಮೆನೇಜರ್ ಮುಹಮ್ಮದ್ ಅಲಿ ಸಖಾಫಿ ಸಂದೇಶ ನೀಡಿದರು.
ಕಾರ್ಯದರ್ಶಿ ಸಿದ್ದೀಖ್ ಸಅದಿ ಸ್ವಾಗತಿಸಿದರು..
ಕೋಶಾಧಿಕಾರಿ ಅಕ್ಬರ್ ಅಲಿ ಮದನಿ ಸೇರಿದಂತೆ ಜಿಲ್ಲಾ ನಾಯಕರು ಭಾಗವಹಿಸಿದ್ದರು.ರಝ್ಝಾಖ್ ಸಖಾಫಿ ಕೊಳಕೆ ಧನ್ಯವಾದ ಸಲ್ಲಿಸಿದರು







