ಅಕ್ಟೋಬರ್ 13, 2025 ಸೋಮವಾರ ಡಿಕೆಯಸ್ಸಿಗೆ 30 ವರ್ಷ ಸಂಪೂರ್ಣ ಗೊಂಡು 31 ನೇ ವರ್ಷಕ್ಕೆ ಪಾದಾರ್ಪಣೆ ಗೈಯ್ಯುತ್ತಿರುವ ಈ ಶುಭ ಸಂದರ್ಭ ಅಲ್ ಖೋಬರ್ ನಲ್ಲಿ ಸಂಸ್ಥಾಪನಾ ದಿನ ಆಚರಿಸಲಾಯಿತು.
ಡಿಕೆಯಸ್ಸಿ ಅಲ್ ಖೋಬರ್ ಘಟಕದ ಅಧ್ಯಕ್ಷ ಇರ್ಶಾದ್ ಅಬ್ದುರ್ರಹ್ಮಾನ್ ರವರ ಘನ
ಅಧ್ಯಕ್ಷತೆಯಲ್ಲಿ ಇಸ್ಮಾಯೀಲ್ ಕಾಟಿಪಳ್ಳ ದುಆ ಗೈದರು. 1995 ರಿಂದ 2025 ರ ವರೆಗೆ ಡಿಕೆಯಸ್ಸಿಗಾಗಿ ದುಡಿದು ಮಡಿದ ಸದಸ್ಯರಿಗೆ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಡಿಕೆಯಸ್ಸಿ ಕೇಂದ್ರ ಸಮಿತಿ ಕಾರ್ಯದರ್ಶಿ ಇಸ್ಮಾಯೀಲ್ ಪಡ್ಡಂದಡ್ಕ ಸ್ವಾಗತಿಸಿದರು.
ಸಭೆಯಲ್ಲಿ ಘಟಕದ ಪ್ರಧಾನ ಕಾರ್ಯದರ್ಶಿ ಶಾಫಿ ಶುಐಬ್ ಮಂಗಳೂರು, ದಮ್ಮಾಂ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ, ಅಲ್ ಖೋಬರ್ ಘಟಕದ ಮಾಜಿ ಅಧ್ಯಕ್ಷ ಅಶ್ರಫ್ ಚಿಕ್ಕ ಮಗಳೂರು, ಸದಸ್ಯರಾದ ಅಬ್ದುಲ್ ಹಮೀದ್ ಸುಳ್ಯ, ಯೂಸುಫ್ ಸುಳ್ಯ ಹಾಗೂ ಅಬ್ದುಲ್ ಹಮೀದ್ ರಿಯಾದ್ ಹಾಜರಿದ್ದರು.
ಡಿಕೆಯಸ್ಸಿ ಕೇಂದ್ರ ಸಮಿತಿ ಮೀಡಿಯಾ ವಿಂಗ್ ಮುಖ್ಯಸ್ಥ ಇಸ್ಮಾಯೀಲ್ ಕಾಟಿಪಳ್ಳ ಸ್ವವಿರಚಿತ 30 ವರ್ಷದ ಲಘು ಲೇಖನವನ್ನು ಮಂಡಿಸಿದರು.
13, ಅಕ್ಟೋಬರ್ 1995 ರ ಶುಭ ಗಳಿಗೆಯಂದು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಯಸ್ಸಿ) ಮಂಗಳೂರು, ಸೌದಿ ಅರೇಬಿಯಾದ ಅಲ್ ಖೋಬರ್ ನಲ್ಲಿ ಜನ್ಮ ತಾಳಿತು.
ಮೂರು ದಶಕಗಳ ಸುದೀರ್ಘ ಕಾಲ ಸಮಾಜದ ಸಮುದಾಯದ ಧಾರ್ಮಿಕ, ಲೌಕಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಡಿಕೆಯಸ್ಸಿಯ ಪಾತ್ರ ಹಿರಿದು.
ಡಿಕೆಯಸ್ಸಿ ಅಧೀನದಲ್ಲಿ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಮೂಳೂರು ಎಂಬಲ್ಲಿ ಮರ್ಕಝ್ ತಅಲೀಮಿಲ್ ಇಹ್ಸಾನ್ ವಿದ್ಯಾಲಯ ಕಾರ್ಯಾಚರಿಸುತ್ತಿದೆ. ಬಡ, ನಿರ್ಗತಿಕ ಮಕ್ಕಳಿಗೆ ಪ್ಲೇ ಸ್ಕೂಲಿನಿಂದ ಡಿಗ್ರಿ ತನಕ ಉಚಿತ ಶಿಕ್ಷಣ ನೀಡುವ ಮೂಲಕ ಹಾಗೂ ಧಾರ್ಮಿಕ ಶಿಕ್ಷಣ, ಹಿಫ್ಳುಲ್ ಖುರ್ ಆನ್ ನ್ನು ವಿದ್ಯಾರ್ಜನೆ ನೀಡುವ ಮೂಲಕ ಮುನ್ನುಡಿಯುತ್ತಿದೆ. ಡಿಕೆಯಸ್ಸಿ ವಿಷನ್ 30 ಮೂಲಕ ಹೊಸ ಯೋಜನೆಗೆ ಮುಂದಾಗಿದೆ.






