ಮಂಗಳೂರು:.ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ಎಸ್.ವೈ.ಎಸ್ ಸಂಘಟನೆಯು ರಾಜ್ಯಾದಂತ ಕಳೆದ ಹಲವಾರು ವರ್ಷಗಳಿಂದ ಕಾರ್ಯಕರ್ತರನ್ನು ಸಾಂತ್ವನ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು,ಇದರ ಭಾಗವಾಗಿ ರಾಜ್ಯಾದ್ಯಂತ ಜಿಲ್ಲಾ ಹಾಗೂ ಝೋನ್ ಸಾಂತ್ವನ ಕೇಂದ್ರಗಳನ್ನು ಆರಂಬಿಸಲಿದ್ದು, ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಸಾಂತ್ವನ ಕೇಂದ್ರದ ಉದ್ಘಾಟನೆಯು ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಅಡ್ಯಾರ್ ನಲ್ಲಿ ನಡೆಯಿತು.

ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರುರವರು ಸಾಂತ್ವನ ಕೇಂದ್ರವನ್ನು ಉದ್ಘಾಟಿಸಿದರು. ಜಿಲ್ಲಾ ಸಾಂತ್ವನ ಇಸಾಬ ಮುಖ್ಯಸ್ತ ಹಾಫಿಳ್ ಯಾಕೂಬ್ ಸಅದಿ ನಾವೂರು ದಿಕ್ಸೂಚಿ ಭಾಷಣ ಮಾಡಿದರು.
ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಕೋಶಾಧಿಕಾರಿ ಮನ್ಸೂರ್ ಅಲಿ ಕೋಟಗದ್ದೆ,ರಾಜ್ಯ ಉಪಾಧ್ಯಕ್ಷ ಖಲೀಲ್ ಮಾಲಿಕಿ ಬೋಳಂತೂರು ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧಿಕಾರಿ ರಝಾಕ್ ಭಾರತ್, ಉಪಾಧ್ಯಕ್ಷರಾದ ಬದ್ರುದ್ದೀನ್ ಅಝ್ಹರಿ ಕೈಕಂಬ ,,ನವಾಝ್ ಸಖಾಫಿ ಅಡ್ಯಾರ್ ಪದವು,ಜಿಲ್ಲಾ ಕಾರ್ಯದರ್ಶಿ ಮುತ್ತಲಿಬ್ ವೇಣೂರು,ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, , ಜಿಲ್ಲಾ ನಾಯಕರಾದ ಇಬ್ರಾಹಿಂ ಸಖಾಫಿ ಸೆರ್ಕಳ, ಹಕೀಂ ಪೂಮಣ್ಣು,ಉಸ್ಮಾನ್ ಝುಹ್ರಿ ಕಿನ್ಯ,ಶರೀಫ್ ಮುಡಿಪು,ಜಬ್ಬಾರ್ ಕಣ್ಣೂರು,ಉಮರ್ ಮದನಿ ಬೋಳಿಯಾರ್ ,ಖಾಸಿಂ ಲತೀಪ್ ಮಂಜನಾಡಿ,ಝೋನ್ ನಾಯಕರಾದ ಹಮೀದ್ ನಾಟೆಕಲ್,ಇಕ್ಬಾಲ್ ಹಾಜಿ ಮಧ್ಯನಡ್ಕ,ಮುಬೀನ್ ಮಲಾರ್,ಯಾಕೂಬ್ ಅಡ್ಯಾರ್ ಪದವು ಮೊದಲಾದ ರಾಜ್ಯ,ಜಿಲ್ಲಾ ಹಾಗೂ ಝೋನ್ ನಾಯಕರು ಉಪಸ್ಥಿತರಿದ್ದರು
ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು,ಜಿಲ್ಲಾ ಇಸಾಬ ಸಾಂತ್ವನ ಕಾರ್ಯದರ್ಶಿ ಫಾರೂಕ್ ಶೇಡಿಗುರಿ ವಂದಿಸಿದರು.






