ಕೆಸಿಎಫ್ ಉಮ್ಮುಲ್ ಸೆಕ್ಟರ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ಅಬೂಬಕರ್ ಪೆರುವಾಯಿ ಅವರ ಅಧ್ಯಕ್ಷತೆಯಲ್ಲಿ ಗುದೖಬಿಯಾ ಕೆಸಿಎಫ್ ಸೆಂಟರಿನಲ್ಲಿ ಯಶಸ್ವಿಯಾಗಿ ನಡೆಯಿತು. ಐಸಿಎಫ್ ನಾಯಕರಾದ ಹಾಫಿಳ್ ಅಝ್ಹರ್ ತಂಙಳ್’ರವರು ಮೌಲಿದ್ ಮಜ್ಲಿಸಿಗೆ ನೇತೃತ್ವ ವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾವು ದಿನ ನಿತ್ಯ ಖುರ್ಆನ್ ಪಾರಾಯಣ ಮಾಡಬೇಕು. ಅದು ನಮಗೆ ನಾಳೆ ಪರಲೋಕದಲ್ಲಿ ಶಫಾಅತ್ ಮಾಡುತ್ತದೆ. ಅದನ್ನು ಪಾರಾಯಣ ಮಾಡದವರನ್ನು ಅದು ಶಪಿಸುತ್ತದೆ. ಅವರು ಪರಾಜಿತರು. ಅಲ್ಲಾಹು ಅವರಿಗೆ ಕರುಣೆಯ ನೋಟವನ್ನು ಬೀರಲಾರನು. ಎಂದು ತಂಙಳ್ ರವರು ಒತ್ತಿ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ರಾಷ್ಟ್ರೀಯ ಸಮಿತಿ ಎಕ್ಸಿಕ್ಯೂಟಿವ್ ಸದಸ್ಯರಾದ ಅಬೂಬಕರ್ ಮದನಿ ಉಸ್ತಾದರು ಪ್ರಪಂಚದಲ್ಲಿ ಎಲ್ಲರೂ ತಿಳಿಯಲ್ಪಡುವ ಒಂದೇ ಒಂದು ನೇತಾರರಾಗಿದ್ದಾರೆ ಪ್ರವಾದಿ ﷺ ರು. ಪೂರ್ವ ವೇದ ಗ್ರಂಥಗಳಲ್ಲಿ ತಿಳಿಸಲ್ಪಟ್ಟ ಪ್ರವಾದಿ ಎಂದು ಪರಿಶುದ್ಧ ಖುರ್ಆನಿನಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ಪ್ರವಾದಿ ﷺ ರವರ ಆಗಮನಕ್ಕಿಂತ 900 ವರ್ಷಗಳ ಮುಂಚೆಯೇ ಪ್ರವಾದಿ ﷺ ರಿಗೆ ಮನೆ ನಿರ್ಮಿಸಲ್ಪಟ್ಟು ಪ್ರವಾದಿಯೊಂದಿಗೆ ವಿಶ್ವಾಸ ತಾಳಿ ಮರಣ ಹೊಂದಿದ ತುಬ್ಬಹ್ ರಾಜರ ಘಟನೆಯನ್ನು ಸಂಕ್ಷಪ್ತವಾಗಿ ವಿವರಿಸಿದರು. ಪ್ರವಾದಿ ﷺ ರ ಬದುಕಿನ ಅಧ್ಯಾಯ ವಿಶಾಲವಾದುದು. ಸ್ವಹಾಬಿವರ್ಯರು ಎಲ್ಲಕ್ಕಿಂತಲೂ ಅತಿಯಾಗಿ, ತನ್ನ ಸ್ವಂತ ಶರೀರಕ್ಕಿಂತಲೂ ಮಿಗಿಲಾಗಿ ಪ್ರೀತಿಸಿದ ಅವರ ಪ್ರವಾದಿ ಪ್ರೇಮ ಗಾಢವಾಗಿತ್ತು ಎಂದು ಮದನಿ ಉಸ್ತಾದರು ಹೇಳಿದರು.
ನೋರ್ತ್ ಝೋನ್ ಅಧ್ಯಕ್ಷರಾದ ಅಹ್ಮದ್ ಉಸ್ತಾದ್ ಶುಭ ಹಾರೖಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜಾವೆದ್ ಪಾಷ ಅವರನ್ನು ಉಮ್ಮುಲ್ ಹಸ್ಸಂ ಸೆಕ್ಟರ್ ಕಾರ್ಯಕರ್ತರು ಶಾಲು ಹೊದಿಸಿ ಸನ್ಮಾನಿಸಿದರು. ಉತ್ತರ ಕರ್ನಾಟಕದ ಇಹ್ಸಾನಿನ ಕಾರ್ಯ ಚಟುವಟಿಕೆಗಳ ವೀಡಿಯೋ ಪ್ರದರ್ಶನ ಸಭೀಕರ ಗಮನ ಸೆಳೆಯಿತು. ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಕಾರ್ಯಕ್ರಮ ನಿರೂಪಿಸಿದರು. ಅಬೂಬಕರ್ ಪೆರುವಾಯಿ ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಕೆಸಿಎಫ್ ರಾಷ್ಟ್ರೀಯ, ಝೋನಲ್, ಸೆಕ್ಟರ್, ಯುನಿಟ್ ಗಳ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.








