janadhvani

Kannada Online News Paper

ಅಡ್ಕರೆಪಡ್ಪು: ಪೊಲೀಸರೊಂದಿಗೆ ಮದ್ರಸ ಮಕ್ಕಳ ಚರ್ಚಾಕೂಟ

ದೇರಳಕಟ್ಟೆ: ಮುಹ್ಯಿದ್ದೀನ್ ಜುಮಾ ಮಸೀದಿ ಹಾಗೂ ರಹ್ಮಾನಿಯ ಮದ್ರಸ ಅಡ್ಕರೆಪಡ್ಪು ಬೆಳ್ಮ ಇದರ ವತಿಯಿಂದ ಪ್ರವಾದಿ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ ಪೊಲೀಸರ ಜತೆ ಮದ್ರಸ ಮಕ್ಕಳ ವಿಶೇಷ ಚರ್ಚಾ ಕೂಟ ಕೋಣಾಜೆ ಠಾಣಾ ಸಬ್ ಇನ್ಸ್ಪೆಕ್ಟರ್ ನಾಗರಾಜ ಎಸ್. ರವರ ನೇತೃತ್ವದಲ್ಲಿ ನಡೆಯಿತು.

ಗಾಂಜಾ, ಆಫೀಮು, ಅಮಲು ಪದಾರ್ಥ, ಹದಿಹರೆಯ ಬಾಲಕ ಬಾಲಕಿಯರ ವಾಹನ ಚಾಲನೆ, ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ಅನೇಕ ವಿಷಯಗಳ ಕುರಿತು ಮಾಹಿತಿ ನೀಡಿದರು. ಕೊಣಾಜೆ ಠಾಣಾ ಪೊಲೀಸ್ ಸಿಬ್ಬಂದಿ ಶರಣಪ್ಟ, ಜಮಾಅತ್ ಖತೀಬ್ ಮುಹಮ್ಮದ್ ಹಿಕಮಿ, ಮುಖ್ಯ ಅಧ್ಯಾಪಕರಾದ ಹನೀಫ್ ಸಅದಿ, ಅಧ್ಯಾಪಕರಾದ ಕೆ. ಎಚ್. ಇಸ್ಮಾಈಲ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮದನಿ, ಜಮಾಅತ್ ಅಧ್ಯಕ್ಷ ಜಾಫರ್, ಕಾರ್ಯದರ್ಶಿ ಮುಸ್ತಫ, ಕೋಶಾಧಿಕಾರಿ ಮುಹಮ್ಮದ್, ಉಸ್ತುವಾರಿ ಎ.ಬಿ. ಹುಸೈನ್, ಉಪಾಧ್ಯಕ್ಷರುಗಳಾದ ಅಬ್ದುಲ್ ಖಾದರ್, ಹೈದರ್, ಜತೆ ಕಾರ್ಯದರ್ಶಿಗಳಾದ ಅಬೂಬಕರ್, ಅಬ್ದುರ್ರವೂಫ್, ಅಬ್ದುಲ್ ಸಲಾಂ ಕಮಿಟಿ ಸದಸ್ಯರಾದ ಆದಂ ಮುಸ್ಲಿಯಾರ್, ಮುಹಮ್ಮದ್, ಅಬ್ಬಾಸ್ ಬಾಕಿಮಾರ್, ಮಸೀದಿ ನಿರ್ಮಾಣ ಸಮಿತಿ ಅಧ್ಯಕ್ಷ ಸಿದ್ದೀಕ್, ಉಪಾಧ್ಯಕ್ಷ ಅಬ್ದುರ್ರಹೀಮ್, ವೈಸ್ ಕನ್ವೀನರ್ ನಿಯಾಝ್ ಮುಂತಾದವರು ಉಪಸ್ಥಿತರಿದ್ದರು.

ಇದರ ಭಾಗವಾಗಿ ನಡೆದ ಹಲವಾರು ವಿಶೇಷ ಕಾರ್ಯಕ್ರಮಗಳಾದ ಆರೋಗ್ಯ ಮತ್ತು ಆಹಾರ ತರಗತಿ, ಹಳೇ ವಿದ್ಯಾರ್ಥಿ ಸಂಗಮ, ಹಿರಿಯರ ಜತೆ ಸ್ನೇಹ ಸಂಗಮ, ಮದ್ರಸ ಮಕ್ಕಳ ಮೀಲಾದ್ ಸಂಗಮ, F A. Box ಉದ್ಘಾಟನೆ, ಕೈ ಬರಹ ಮಾಸಿಕ ಬಿಡುಗಡೆ ಮುಂತಾದ ಕಾರ್ಯಕ್ರಮಗಳು ನಡೆಯಿತು. ಅಧ್ಯಾಪಕ ಮುಹಮ್ಮದ್ ಮುಸ್ತಫ ಸಅದಿ ಹರೇಕಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.