ಉಡುಪಿ : ಬದ್ರಿಯಾ ಜುಮ್ಮಾ ಮಸೀದಿ, ಸಂತೋಷ್ ನಗರ , ಅಂಬಾಗಿಲು ಇದರ ಜಮಾಅತ್ ಕಮಿಟಿಯ ಮಹಾಸಭೆಯು ಇತ್ತೀಚೆಗೆ ಮಸೀದಿ ಕಛೇರಿಯಲ್ಲಿ ನಡೆಸಲಾಯಿತು. ಜಮಾಅತ್ ಕಮಿಟಿ ಅಧ್ಯಕ್ಷರಾದ ಹಬೀಬ್ ಅಲಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಖತೀಬರಾದ ಅಲ್ ಹಾಜ್ ಹನೀಫ್ ಮದನಿ ಇವರು ದುವಾಗೈದರು. ಕಾರ್ಯದರ್ಶಿ ಪೈಝಲ್, ವಾರ್ಷಿಕ ಹಾಗೂ ಲೆಕ್ಕಪತ್ರ ವರದಿ ಮಂಡಿಸಿದರು.
2025-2026 ರ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಯು.ಜೆ ಮುಹಮ್ಮದ್ ಹನೀಫ್ ಹಾಜಿ, ಉಪಾಧ್ಯಕ್ಷರಾಗಿ ಹಬೀಬ್ ಅಲಿ,
ಕಾರ್ಯದರ್ಶಿಯಾಗಿ ಹಸನ್ಅಬ್ದುಲ್ಲಾ,
ಜೊತೆ ಕಾರ್ಯದರ್ಶಿಯಾಗಿ ನಾಸಿರ್ ಹುಸೇನ್,
ಕೋಶಾಧಿಕಾರಿಯಾಗಿ ಎಮ್ ಎಮ್ ಇಕ್ಬಾಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್ ಎ ಫೈಝಲ್ , ಯು.ಜೆ ಇಬ್ರಾಹಿಂ
ಆರಿಫ್ ಮಣಿಪಾಲ , ಅಕ್ಬರ್ ಅಲಿ,
ಎಮ್ ಎಮ್ ಆಸೀಫ್,
ಎಸ್ ಕೆ ಆರಿಫ್ ಇವರನ್ನು ಆಯ್ಕೆ ಮಾಡಲಾಯಿತು. ಹಸನ್ ಅಬ್ದುಲ್ಲಾ ಧನ್ಯವಾದಗೈದರು.







