janadhvani

Kannada Online News Paper

ಅಬುಧಾಬಿ: ಕೆಸಿಎಫ್ ಗ್ರ್ಯಾಂಡ್ ಮೀಲಾದ್ ಗೆ ಕ್ಷಣಗಣನೆ- ದೇವರ್ಶೋಲ ಉಸ್ತಾದ್ ಮುಖ್ಯ ಭಾಷಣ

ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಅಬುಧಾಬಿ ಝೋನ್ ಸಮಿತಿ ವತಿಯಿಂದ ಪ್ರವಾದಿ ಮುಹಮ್ಮದ್ ಸ 1500 ನೇ ಜನ್ಮ ದಿನದ ಸಂಭ್ರಮಾಚರಣೆಯ ಸಲುವಾಗಿ ನಡೆಯಲಿರುವ ಬೃಹತ್ ಮೀಲಾದ್ ಸಮಾವೇಶ, ಸೆಪ್ಟೆಂಬರ್ 6 ರಂದು ಮಗ್ರಿಬ್ ನಮಾಝಿನ ಬಳಿಕ ಅಬುಧಾಬಿ ನಗರದ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಸಭಾ ಭವನದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಖ್ಯಾತ ವಾಗ್ಮಿ, ಡಾ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರ್ಶೋಲ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ.
ಮೌಲಿದ್, ಬುರ್ದಾ ಮಜ್ಲಿಸ್ ಹಾಗೂ ನಹತೆ ಶರೀಫ್ ಕಾರ್ಯಕ್ರಮಗಳು ನಡೆಯಲಿದ್ದು ಪ್ರವಾದಿ ಪ್ರೇಮಿಗಳ ಸ್ವಾಗತಕ್ಕಾಗಿ ಕೆಸಿಎಫ್ ಅಬುಧಾಬಿ ಸ್ವಯಂ ಸೇವಕ ತಂಡಗಳು ಆಹೋರಾತ್ರಿ ದುಡಿಯುತ್ತಿದೆ.
ಈ ಕುರಿತು ವಿವರಿಸಲು ಅಬುಧಾಬಿ ಕೆಸಿಎಫ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಝೋನ್ ಸಮಿತಿ ಅಧ್ಯಕ್ಷ ಕಬೀರ್ ಬಾಯಂಬಾಡಿ, ಕಾರ್ಯದರ್ಶಿ ಉಮರ್ ಈಶ್ವರ ಮಂಗಿಲ, ಸ್ವಾಗತ ಸಮಿತಿಯ ಚಿಯರ್ಮಾನ್ ಮುಹಮ್ಮ ಅಲಿ ಹಾಜಿ ಬ್ರೈಟ್, ಖಜಾಂಜಿ ಹಮೀದ್
ಭಾಗವಹಿಸಿ, ಸರ್ವ ಪ್ರವಾದಿ ಪ್ರೇಮಿಗಳು ಕಾರ್ಯಕಾಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕರೆ ನೀಡಿದರು.