janadhvani

Kannada Online News Paper

ಪ್ರವಾದಿ ﷺِ ರ ಅಪ್ರತಿಮ ವ್ಯಕ್ತಿತ್ವವನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ- ಹುಸೈನ್ ಮುಈನಿ

ಮಂಗಳೂರಿನಲ್ಲಿ ನಡೆದ ಇಲಲ್ ಹಬೀಬ್ ಮೀಲಾದ್ ರ‌್ಯಾಲಿಯ ಸಂದೇಶ ಭಾಷಣದಲ್ಲಿ ಮಾತನಾಡಿದರು.

ಮಂಗಳೂರು.ಸೆ.01: ಪೈಗಂಬರ್ ﷺ ಅವರ ಇತಿಹಾಸ ನಿಖರತೆ, ಪ್ರಾಮಾಣಿಕತೆ, ಮಾದರಿ ವ್ಯಕ್ತಿತ್ವವು ಅಪ್ರತಿಮವಾಗಿದೆ,ಅದನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಬಹು.ಹುಸೈನ್ ಮುಈನಿ ಮಾರ್ನಾಡ್ ಹೇಳಿದರು.

ಅವರು, ವಿಶ್ವ ಪ್ರವಾದಿ ಪೈಗಂಬರ್ (ﷺ) ಅವರ 1500 ನೇ ಜನ್ಮ ದಿನಾಚರಣೆಯ ಅಂಗವಾಗಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ದ.ಕ. ವೆಸ್ಟ್ ಜಿಲ್ಲಾ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಇಂದು ಮಂಗಳೂರಿನಲ್ಲಿ ನಡೆದ ಇಲಲ್ ಹಬೀಬ್ ಮೀಲಾದ್ ರ‌್ಯಾಲಿಯ ಸಂದೇಶ ಭಾಷಣದಲ್ಲಿ ಮಾತನಾಡಿದರು.

ಕೆ ಎಮ್ ಜೆ ರಾಜ್ಯ ನಾಯಕ ಜಿ ಎಮ್ ಕಾಮಿಲ್ ಸಖಾಫಿ ಎಸ್ ಎಮ್ ಎ ಜಿಲ್ಲಾಧ್ಯಕ್ಷ ಅಹ್ಮದ್ ಬಶೀರ್ ಪಂಜಿಮೊಗರು,ಎಸ್ ಜೆ ಎಮ್ ಜಿಲ್ಲಾಧ್ಯಕ್ಷ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ,ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ರವರು ಸ್ವಾಗತ ಸಮಿತಿ ಚೆಯರ್ಮೇನ್ ಅಹ್ಮದ್ ಬಶೀರ್ ಹಾಜಿ ಕುಂಬ್ರ, ಕೆ ಎಮ್ ಜೆ ಜಿಲ್ಲಾಧ್ಯಕ್ಷ ಹನೀಫ್ ಹಾಜಿ ಬಜ್ಪೆ , ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ರವೂಫ್ ಹಿಮಮಿ ಕಾಟಿಪಳ್ಳ, ನಿರ್ವಹಣಾ ಸಮಿತಿ ಜನರಲ್ ಕನ್ವೀನರ್ ಅಝ್ಮಲ್ ಕಾವೂರು, ಉಪಾಧ್ಯಕ್ಷ ಸಿನಾನ್ ಸಖಾಫಿ ಅಜಿಲಮೊಗರು ಮುಂತಾದ ಜಿಲ್ಲಾ ನಾಯಕರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಬಾವುಟಗುಡ್ಡೆಯಿಂದ ಟೌನ್ ಹಾಲ್ ವರೆಗಿನ ಬೃಹತ್ ಮೀಲಾದ್ ರ‌್ಯಾಲಿಗೆ ಚಾಲನೆ ನೀಡಿದರು.

ದ. ಕ ಜಿಲ್ಲೆಯ ಮಂಗಳೂರು, ಸುರತ್ಕಲ್, ಮೂಡಬಿದ್ರೆ, ಬಂಟ್ವಾಳ, ದೇರಳಕಟ್ಟೆ, ಝೋನ್, ಡಿವಿಷನ್ ವ್ಯಾಪ್ತಿಗಳಿಂದ ವಿವಿಧ ದಫ್ ,ಸ್ಕೌಟ್ ತಂಡಗಳು ಭಾಗವಹಿಸಿದ್ದರು.

ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ ಹಮೀದ್ ಬಜ್ಪೆ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಮ್ ಸಅದಿ ಖತರ್, ಜಿಲ್ಲಾ ನಾಯಕರಾದ ಬದ್ರುದ್ದೀನ್ ಹಾಜಿ ಬಜ್ಪೆ, ಬಿಎಚ್ ಇಸ್ಮಾಯಿಲ್ ಕೆ.ಸಿ.ರೋಡ್,ಇಸ್ಮಾಯಿಲ್ ಕಿನ್ಯ, ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ , ಜಿಲ್ಲಾ ನಾಯಕರಾದ ಬದ್ರುದ್ದೀನ್ ಅಝ್ಹರಿ, ಹಾಫಿಝ್ ಯಾಕೂಬ್ ಸಅದಿ, ನವಾಝ್ ಸಖಾಫಿ, ರಝಾಖ್ ಹಾಜಿ ಭಾರತ್, ತೌಸೀಫ್ ಸಅದಿ, ಎಸ್ ಎಸ್ ಎಫ್ ಜಿಲ್ಲಾ ಪ್ರ. ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ, ಉಪಾಧ್ಯಕ್ಷ ಸಿನಾನ್ ಸಖಾಫಿ ಅಜಿಲಮೊಗರು, ಕೋಶಾಧಿಕಾರಿ ಖಲೀಲ್ ಅಬ್ಬೆಟ್ಟು, ಕಾರ್ಯದರ್ಶಿಗಳಾದ ಶಾಕಿರ್ ಎಂಎಸ್ಸಿ ಬಜ್ಪೆ, ನೌಸೀಫ್ ಪಂಜಿಮೊಗರು, ನೌಶಾದ್ ಮದನಿ ಮುಡಿಪು, ನೌಫಲ್ ಅಹ್ಸನಿ, ಮುಸ್ತಫ ತೋಕರಬೆಟ್ಟು ಮುಂತಾದವರು ಉಪಸ್ಥಿತರಿದ್ದರು.