janadhvani

Kannada Online News Paper

ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ

ಕಡಬ : ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ಚಂದನ ಸಾಹಿತ್ಯ ವೇದಿಕೆ ಸುಳ್ಯ ವತಿಯಿಂದ 2024 ನೇ ಸಾಲಿನ ಚಂದನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯ 20ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಆಗಸ್ಟ್ 03 ರಂದು ಸುಳ್ಯ ದಲ್ಲಿ ನಡೆದಿದ್ದು, ಸಾಹಿತ್ಯ ಕೃಷಿಗಾಗಿ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಇವರು ಕಡಬ ತಾಲೂಕಿನ ಹೊಸಂಗಡಿ ಬಸದಿ ನೂಜಿಬಾಳ್ತಿಲದ ಧರಣೇoದ್ರ ಇಂದ್ರ ಮತ್ತು ಮಂಜುಳಾರವರ ಸುಪುತ್ರರಾಗಿರುತ್ತಾರೆ.