janadhvani

Kannada Online News Paper

SJM ಮಂಗಳೂರು ಡಿವಿಶನ್ ಸಮಿತಿಗೆ ರಫೀಖ್ ಮದನಿ ಕೆಸಿ ರೋಡ್ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಸಾರಥ್ಯ

ಇತ್ತೀಚೆಗೆ ಮಂಗಳೂರು SJM ಕೇಂದ್ರ ಸಮಿತಿ ಕಛೇರಿಯಲ್ಲಿ ಮಂಗಳೂರು ಡಿವಿಶನ್ ಸಮಿತಿಯ ಮಹಾಸಭೆಯು SJM ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಜಪ್ಪುರವರ ಅಧ್ಯಕ್ಷತೆಯಲ್ಲಿ ನಡೆಯಿತು. 25/28 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ರಫೀಖ್ ಮದನಿ, ಕೆಸಿರೋಡ್, ಪ್ರಧಾನ ಕಾರ್ಯದರ್ಶಿ ಯಾಗಿ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ, ಕೋಶಾಧಿಕಾರಿ ಯಾಗಿ ಅಬ್ದುಲ್ಲ ಮದನಿ ಮಳ್‌ಹರ್ ನಗರ್, ಪರೀಕ್ಷೆ ಮತ್ತು ಕ್ಷೇಮ ನಿಧಿ ಅಧ್ಯಕ್ಷರಾಗಿ ಇರ್ಶಾದ್ ಮದನಿ ಚಲ್ಲಿಯಡ್ಕ, ಕಾರ್ಯದರ್ಶಿ ಯಾಗಿ ಇಬ್ರಾಹಿಂ ಸಖಾಫಿ ಹಿಮಮಿ, ಅಜ್ಜಿನಡ್ಕ, ಮಿಷನರಿ ಮತ್ತು ಟ್ರೈನಿಂಗ್ ಅಧ್ಯಕ್ಷರಾಗಿ ಶರೀಫ್ ಸಖಾಫಿ, ಮಸ್ನವಿ ಪಲ್ನೀರ್, ಕಾರ್ಯದರ್ಶಿ ಯಾಗಿ ಹಬೀಬ್ ಸಖಾಫಿ, ಚಲ್ಲಿಯಡ್ಕ, ಮ್ಯಾಗಝೀನ್ ಅಧ್ಯಕ್ಷರಾಗಿ ಸಿನಾನ್ ಸಖಾಫಿ ಶುಭಾಶ್ ನಗರ, ಕಾರ್ಯದರ್ಶಿ ಯಾಗಿ ಮುಹಮ್ಮದ್ ರಫೀಖ್ ಸ‌ಅದಿ, 4 ಬ್ಲಾಕ್ ಕಾಟಿಪಳ್ಳ, ಪೆನ್ಸನ್ ವಿಭಾಗದ ಅಧ್ಯಕ್ಷರಾಗಿ ಜಾಫರ್ ಮದನಿ ಚಲ್ಲಿಯಡ್ಕ, ಕಾರ್ಯದರ್ಶಿ ಯಾಗಿ ಶಫೀಖ್ ಹಿಕಮಿ, ಕೈಕಂಬ ಹಾಗೂ ವರ್ಕಿಂಗ್ ಸದಸ್ಯರಾಗಿ ಪಿ ಎಂ ಮುಹಮ್ಮದ್ ಮದನಿ ಪೂಡಲ್,ನೌರೀನ್ ಸಖಾಫಿ, ಮಿಸ್ಬಾಹ್,ಫೈಝಲ್ ಸ‌ಅದಿ ಮಳ್ಹರ್ ನಗರ್,ಸಿದ್ದೀಖ್ ಸ‌ಅದಿ ಪಾಂಡೇಶ್ವರ, ಇಬ್ರಾಹಿಂ ಸ‌ಅದಿ, ಮಳ್ಹರ್ ನಗರ್, ತಸ್ರೀಫ್ ಸಖಾಫಿ, ಕಾಟಿಪಳ್ಳ, ಇಕ್ಬಾಲ್ ಹನೀಫಿ,ಅಲ್ ಮಫಾಝ್ ಮೂಡುಬಿದಿರೆ ಆಯ್ಕೆ ಮಾಡಲಾಯಿತು.