ಉಡುಪಿ : ಎಸ್. ವೈ.ಎಸ್ ರಾಜ್ಯ ಸಮಿತಿಯು ಜುಲೈ 14 ರಂದು ಹಮ್ಮಿಕೊಂಡಿರುವ ಸೌಹಾರ್ದ ಸಂಚಾರ ಕಾರ್ಯಕ್ರಮದ ಯಶಸ್ವಿಗಾಗಿ ಉಡುಪಿ ವಲಯದ ಸ್ವಾಗತ ಸಮಿತಿಯನ್ನು ಇತ್ತೀಚೆಗೆ ಸುನ್ನೀ ಕಛೇರಿ , ಅಂಬಾಗಿಲುವಿನಲ್ಲಿ ರಚಿಸಲಾಯಿತು.
SYS ಉಡುಪಿ ಝೋನ್ ಅಧ್ಯಕ್ಷರಾದ ರಶೀದ್ ರಝ್ವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು, ಸಯ್ಯಿದ್ ಜುನೈದ್ ಅರ್ರಿಫಾಈ ತಂಙಳ್, ಉಡುಪಿ ದುವಾಗೈದರು. ಕಾರ್ಯದರ್ಶಿ ತೌಫೀಕ್ ಸಂತೋಷ್ ನಗರ ಸ್ವಾಗತಿಸಿದರು. SYS ರಾಜ್ಯ ಕೋಶಾಧಿಕಾರಿ ಮನ್ಸೂರ್ ಅಲೀ ಕೋಟೆಗದ್ದೆ ಉದ್ಘಾಟನೆ ಮಾಡಿದರು. SYS ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೊಂಟುಗೊಳಿ ಹಾಗೂ ರಾಜ್ಯ ಕಾರ್ಯದರ್ಶಿ ಅಡ್ವಕೇಟ್ ಹಂಝತ್ ಉಡುಪಿ ಇವರು ಸಂಚಾರ ಕಾರ್ಯಕ್ರಮದ ಬಗ್ಗೆ ಮುಖ್ಯ ಮಾಹಿತಿ ನೀಡಿದರು.
ಸಭೆಯಲ್ಲಿ KMJ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುಬುಹಾನ್ ಹೊನ್ನಾಳ, ಹನೀಪ್ ಹಾಜಿ ಅಂಬಾಗಿಲು, ಮತ್ತು ವಿವಿದ ಸುನ್ನೀ ಸಂಘ ಕುಟುಂಬದ ನಾಯಕರು ಉಪಸ್ಥಿತಿ ಇದ್ದರು. ಜಿಲ್ಲಾ ನಾಯಕರಾದ ರಝಾಕ್ ರಝ್ವಿ ಅಂಬಾಗಿಲು ಧನ್ಯವಾದಗೈದರು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷರು: ಅಸಯ್ಯದ್ ಜುನೈದ್ ಅರ್ರಿಫಾಯೀ ತಂಗಳ್, ಅಧ್ಯಕ್ಷರು : ಹನೀಫ್ ಹಾಜಿ ಅಂಬಾಗಿಲು, ಉಪಾಧ್ಯಕ್ಷರು: ಜುನೈದ್ ಹೂಡೆ, ಸುಭಾನ್ ಹೊನ್ನಾಳ , ರಶೀದ್ ರಝ್ವಿ ಕಟಪಾಡಿ, ಸೈಯದ್ ಫರೀದ್ ಸಾಹೇಬ್, ರಫೀಕ್ ದೊಡ್ಡಣಗುಡ್ಡೆ, ಅಡ್ವಕೇಟ್ ಹಬೀಬ್ ಅಲಿ, ಮಜೀದ್ ಕಟಪಾಡಿ, ಪ್ರಧಾನ ಕಾರ್ಯದರ್ಶಿ : ಇಮ್ತಿಯಾಜ್ ಹೊನ್ನಾಳ, ಕಾರ್ಯದರ್ಶಿಗಳಾಗಿ : ಇಮ್ತಿಯಾಜ್ ಸಂತೋಷ್ ನಗರ, ಸಿದ್ದಿಕ್ ಸಂತೋಷ್ ನಗರ, ಇಸ್ಮಾಯಿಲ್ ಉಸ್ತಾದ್, ಶಂಶುದ್ದೀನ್ ರಂಗನಕೆರೆ,ನಜೀರ್ ಸಾಸ್ತಾನ , ಆಸಿಫ್ ಸರಕಾರಿಗುಡ್ಡೆ , ಇಮ್ರಾನ್ ದೊಡ್ಡನಗುಡ್ಡೆ,ರಜಾಕ್ ಸಾಸ್ತಾನ, ಕೋಶಾಧಿಕಾರಿ : ರಜಾಕ್ ಮದದಿ ಅಂಬಾಗಿಲು, ಉಪ ಕೋಶಾಧಿಕಾರಿ: ಶಾಬುದ್ದೀನ್ ಮೂಡುಬೆಳ್ಳೆ, ಕೋ ಆರ್ಡಿನೇಟರ್ : ತೌಫಿಕ್ ಅಂಬಾಗಿಲು , ಮೀಡಿಯಾ ಕೋ ಆರ್ಡಿನೇಟರ್ : ರಹೀಮ್ ಸಾಸ್ತಾನ, ಆಶಿಕ್ ಸರಕಾರಿಗುಡ್ಡೆ, ನಾಸೀರ್ ಭದ್ರಗಿರಿ, ಅಬ್ದುಲ್ ರೆಹಮಾನ್ ಉಸ್ತಾದ್ ಆಯ್ಕೆ ಮಾಡಲಾಯಿತು.