janadhvani

Kannada Online News Paper

ರಿಯಾಳುಲ್ ಮದೀನ ವಿದ್ಯಾರ್ಥಿ ಸಂಘಟನೆಗೆ ಹೊಸ ನಾಯಕತ್ವ

ಮಂಗಳೂರು: ಅಲ್ ಮದೀನಾ ರಿಸಾಲ ಅಕಾಡೆಮಿ ಮಂಜನಾಡಿ, ನರಿಂಗಾನ ಇದರ ವಿದ್ಯಾರ್ಥಿ ಸಂಘಟನೆ ‘ರಿಯಾಳುಲ್ ಮದೀನ’ ಇದರ ವಾರ್ಷಿಕ ಮಹಾಸಭೆ ಪ್ರಾಂಶುಪಾಲ ರಾದ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ರವರ ಅಧ್ಯಕ್ಷತೆಯಲ್ಲಿ ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ರಿಸಾಲ ಅಕಾಡೆಮಿ ಮುದರ್ರಿಸ್ ಇರ್ಷಾದ್ ಸಖಾಫಿ ರೆಂಜಲಾಡಿ ಸಭೆಯನ್ನು ಉದ್ಘಾಟಿಸಿದರು. 2025-26 ನೇ ಸಾಲಿನ ಪದಾಧಿಕಾರಿಗಳ ನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಸುರಿಬೈಲ್,ಪ್ರ.ಕಾರ್ಯದರ್ಶಿ ಮುಈನುದ್ದೀನ್ ಶಮ್ಮಾಸ್ ಕಾಜೂರು,ಕೊಶಾಧಿಕಾರಿಯಾಗಿ ಮುಹಮ್ಮದ್ ಅಕ್ಸಾಮ್ ಬೈರಿಕಟ್ಟೆ ಆಯ್ಕೆಯಾದವರು.
ಉಪಾಧ್ಯಕ್ಷರು: ಅಬೂ ಇಸ್ಹಾಕ್ ಅಹ್ಮದ್ ತಲಕ್ಕಿ
ಕಾರ್ಯದರ್ಶಿಗಳು: ಲಿಟ್ರೇಚರ್ :ಮುಹಮ್ಮದ್ ರಾಝಿಂ ವಾಮದಪದವು
ಮ್ಯಾಗಝಿನ್: ಉಸೈದ್ ನವ್ವಾಲ್ ಬೆಳ್ಳಾರೆ
ಲೈಬ್ರರಿ: ಅಬ್ದುಲ್ ಬಾಸಿತ್ ಸುಲ್ತಾನ್ ಪರಪ್ಪು

ಪದಾಧಿಕಾರಿಗಳಾಗಿ : ಮುಹಮ್ಮದ್ ಸಮೀಹ್ ತಿಬ್ಲೆಲೆಪದವು,ಜುನೈದ್ ಕೊಂಡಂಗೇರಿ,ಮುಹಮ್ಮದ್ ಫಾಯಿಝ್ ಬಕ್ರವಳ್ಳಿ ಆಯ್ಕೆಯಾದರು.
ನೂತನ ಪ್ರ.ಕಾರ್ಯದರ್ಶಿ ಮುಈನುದ್ದೀನ್ ಶಮ್ಮಾಸ್ ಕಾಜೂರು ವಂದಿಸಿದರು.