ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಹಲವು ಯೋಜನೆಗಳನ್ನು ತಯಾರಿಸಿ ಮುನ್ನಡೆಯುತ್ತಿರುವ ಅಲ್ ಸಲಾಮ್ ಖಿದ್ಮತ್ ಬಳಗ ಧರ್ಮಸ್ಥಳದ ಡಾ ವೀರೇಂದ್ರ ಹೆಗ್ಡೆಯನ್ನು ಭೇಟಿಯಾಗಿ ಅವರು ನಡೆಸುವ ಮದ್ಯ ವರ್ಜನ ಶಿಬಿರದ ಬಗ್ಗೆ ಮಾಹಿತಿ ಪಡೆದುಕೊಂಡರು.
ಜೂನ್ 8ರಂದು ಮಾದಕ ಮುಕ್ತ ಅಭಿಯಾನದ ರೂವಾರಿ ಇಕ್ಬಾಲ್ ಬಾಳಿಲ, ಮೌಲಾನ ಶೈಖ್ ಮುಹಮ್ಮದ್ ಇರ್ಫಾನಿ, ಸೇರಿದಂತೆ ಹಲವು ಮುಖಂಡರು ದರ್ಮಸ್ಥಳಕ್ಕೆ ಬೇಟಿ ನೀಡಿ ಮಾಹಿತಿಯನ್ನು ಕಲೆ ಹಾಕಿದರು.
ಡಾ ವಿರೇಂದ್ರ ಹೆಗ್ಡೆಯವರು ತನ್ನ ಅನುಭವಗಳ ಜೊತೆಗೆ ಮದ್ಯಪಾನ ಚಟದಿಂದ ಮುಕ್ತಿಗೊಳಿಸಲು ನಡೆಸಿದ ಯೋಜನೆಗಳನ್ನು ಸಂಪೂರ್ಣವಾಗಿ ವಿವರಿಸಿದರು. ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಅಲ್ ಸಲಾಮ ಮುಂದಿಟ್ಟ ಯೋಜನೆಗಳನ್ನು ಈ ಸಂದರ್ಭದಲ್ಲಿ ಮುಂದಿಡಲಾಯಿತು.