ಮಾಣಿ : ಯಾವುದೇ ಒಳ್ಳೆಯ ಕಾರ್ಯವನ್ನು ಆರಂಭಿಸುವಾಗ ನಮ್ಮ ನಿಯ್ಯತ್ತು ಒಳ್ಳೆಯದಾಗಿರಬೇಕು. ನಿಯ್ಯತ್ತು ಒಳ್ಳೆಯದಾದರೆ ನಮ್ಮ ಮನೆ, ನಾಡು, ಸಂಘಟನೆಯು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರು ಹೇಳಿದರು. ಅವರು ದಿನಾಂಕ 01.06.2025ರಂದು ದಾರುಲ್ ಇರ್ಶಾದ್ ಕಟ್ಟಡದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ನ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಅಧ್ಯಕ್ಷರಾದ ಯೂಸುಫ್ ಹಾಜಿ ಸೂರಿಕುಮೇರ್ ರವರು ವಹಿಸಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ದಅವಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಸಖಾಫಿ ಪಾಡಿರವರು ಪ್ರಾಸ್ತಾವಿಕ ಮಾತನ್ನಾಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಉಪಾಧ್ಯಕ್ಷರಾದ ಮುಹಮ್ಮದ್ ಕುಂಞಿ ಜೋಗಿಬೆಟ್ಟುರವರು ಶುಭ ಹಾರೈಸಿದರು.
ಉಳುಹಿಯ್ಯತ್ ತರಗತಿ : ಈ ಸಂಧರ್ಭದಲ್ಲಿ ಪವಿತ್ರ ದುಲ್ ಹಜ್ಜ್ ತಿಂಗಳ ವಿಶೇಷ ಕರ್ಮವಾದ ಉಳುಹಿಯ್ಯತ್ ಬಗ್ಗೆ ಅಲ್ ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಕುದುಂಬ್ಲಾಡಿ ಇದರ ಸಾರಥಿ ಮೌಲಾನಾ ಅಬ್ದುರ್ರಝ್ಝಾಕ್ ಮದನಿ ಕಾಮಿಲ್ ಸಖಾಫಿ ಉಸ್ತಾದರು ಸಮಗ್ರ ತರಗತಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಜಿಲ್ಲಾ ಇಸಾಬ ಕಾರ್ಯದರ್ಶಿ ಹಾಗೂ ಸರ್ಕಲ್ ಉಸ್ತುವಾರಿ ಇಕ್ಬಾಲ್ ಬಪ್ಪಳಿಗೆ, ಜಿಲ್ಲಾ ನಾಯಕರಾದ ಕೆ. ಬಿ. ಕಾಸಿಂ ಹಾಜಿ ಪರ್ಲೋಟ್ಟು, ಉಸ್ಮಾನ್ ಹಾಜಿ ಸೆರ್ಕಳ, ರಾಜ್ಯ ಕಛೇರಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಮದನಿ ಕಲ್ಲಡ್ಕ, ಎಸ್‌ವೈಎಸ್ ಜಿಲ್ಲಾ ನಾಯಕರಾದ ಹೈದರ್ ಸಖಾಫಿ ಬುಡೋಳಿ, ದಾರುಲ್ ಇರ್ಶಾದ್ ಅಧ್ಯಾಪಕರಾದ ನಝೀರ್ ಅಮ್ಜದಿ, ಮುಹಮ್ಮದ್ ಕಮಾಲ್ ಮದೀನಿ, ಸರ್ಕಲ್ ನಾಯಕರಾದ ದಾವೂದ್ ಕಲ್ಲಡ್ಕ, ಝಕರಿಯಾ ಮುಸ್ಲಿಯಾರ್ ಕಲ್ಲಡ್ಕ, ಹಂಝ ಸೂರಿಕುಮೇರ್, ಯೂಸುಫ್ ಪಾಟ್ರಕೋಡಿ, ಅಬ್ದುಲ್ ಕಾಸಿಂ ಪಾಟ್ರಕೋಡಿ, ಮುಹಮ್ಮದ್ ಹಬೀಬ್ ಶೇರಾ, ಇಸ್ಮಾಯಿಲ್ ಹಾಜಿ ಬುಡೋಳಿ, ಇಬ್ರಾಹಿಂ ಮದನಿ ಶೇರಾ, ಅಬ್ದುಲ್ ಖಾದರ್ ಹಾಜಿ ಶೇರಾ, ಅಬ್ದುಲ್ ಖಾದರ್ ಮಿತ್ತೂರು, ಸೆಲೀಂ ಮಾಣಿ, ಸಾಬಿತ್ ಪಾಟ್ರಕೋಡಿ, ಸಾಜಿದ್ ಪಾಟ್ರಕೋಡಿ, ಕೆಸಿಎಫ್ ನಾಯಕರಾದ ಮುಹಮ್ಮದ್ ಹಾರಿಸ್ ಸೂರಿಕುಮೇರ್ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ನೆಲ್ಲಿ ಧನ್ಯವಾದಗೈದರು.
ವರದಿ: ಸಲೀಂ ಮಾಣಿ