ಸೌದಿ ಅರೇಬಿಯಾ: ದಮ್ಮಾಮ್ ಝೋನಲ್ ಅಧೀನದಲ್ಲಿರುವ ಅಲ್ ಅಹ್ಸಾ. ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ವತಿಯಿಂದ ಅದ್ದೂರಿಯಾಗಿ ‘ಈದ್ ಮೀಟ್’ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಮೌಲಾನ ಅಬ್ದುಲ್ ಮಜೀದ್ ಸಖಾಫಿ ವಹಿಸಿ ‘ಈದ್ ಸಂದೇಶ’ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮತೀಯ ಗಲಭೆಯಿಂದ ನಲುಗಿದ ದ.ಕ.ಜಿಲ್ಲೆಗೆ ಶಾಂತಿಯ ಸಂದೇಶವಾಗಿ
“ಧ್ವೇಷ ಅಳಿಯಲಿ
ಪ್ರೀತಿ ಮೂಡಲಿ”
“ದ್ವೇಷ ಅಳಿಸೋಣ
ದೇಶ ಕಟ್ಟೋಣ”
“ಕೋಮು ದ್ವೇಷ
ನಾಡಿಗೆ ನಾಶ”
“ಭೀತಿಯಿಂದ ಉನ್ಮಾದ
ಶಾಂತಿಯಿಂದ ಆನಂದ” ಎಂಬಿತ್ಯಾದಿ ಶಾಂತಿ, ಸೌಹಾರ್ದ, ಸಹಬಾಳ್ವೆಯ ಕುರಿತಾದ
ಭಿತ್ತಿ ಪತ್ರ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ
ಅಬ್ದುರ್ರಹ್ಮಾನ್ ಕೈರಂಗಳ, ಫಾರೂಖ್ ಸಅದಿ ಮಾಡಾವು ಅವರ ತಾಯಿ ಹಾಗೂ
ಇತ್ತೀಚೆಗೆ ಗೂಂಡಾಗಳಿಂದ ಹತ್ಯೆಯಾದ ಅಬ್ದುಲ್ ರಹೀಮ್ ಕೊಳ್ತಮಜಲ್ ಹೆಸರಲ್ಲಿ ತಹ್ಲೀಲ್ ಹೇಳಿ ಸಮರ್ಪಿಸಲಾಯಿತು.
ಕಾರ್ಯಕ್ರಮವನ್ನು ಸೆಕ್ಟರ್ ಪ್ರ.ಕಾರ್ಯದರ್ಶಿ ಆಸೀಫ್ ಕಾಟಿಪಳ್ಳ ಸ್ವಾಗತಿಸಿ ಇಸ್ಹಾಕ್ ಫಜೀರ್ ಧನ್ಯವಾದಗೈದರು.