janadhvani

Kannada Online News Paper

ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ

ಅಂಜುಮಾನ್ ಸಿರಾಜುಲ್ ಇಸ್ಲಾಂ ಮದರಸ ಮುಕ್ಕ SBS ಸಮಿತಿಯ 2025 – 26 ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮುಹಮ್ಮದ್ ಫಾಝ್, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಹುಸೈನ್ ವಾಸೀಲ್, ಕೋಶಾಧಿಕಾರಿಯಾಗಿ ಶಮ್ಮಾಸ್, ಉಪಾಧ್ಯಕ್ಷರಾಗಿ ಮುಸ್ತಫಾ ಹಾಗೂ ಸುಹಾನ್, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಹಾಗೂ ಹಫೀಜ್ ರವರನ್ನು ಬಹುಮತದಿಂದ ಆರಿಸಲಾಯಿತು.

ಜೂನ್ 1 ರಂದು ತೆರವಾಗಿದ್ದ ಅಧ್ಯಕ್ಷ ಹಾಗೂ ಕಾರ್ಯದರ್ಶಿ, ಕೋಶಾಧಿಕಾರಿ ಆಯ್ಕೆಗಾಗಿ ವಿದ್ಯಾರ್ಥಿಗಳಿಂದ ಚುನಾವಣೆ ನಡೆದಿದ್ದು. ಬಹುತೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. SBS ಮುದಬ್ಬಿರಾಗಿ ಮದ್ರಸ ಅಧ್ಯಾಪಕರಾದ ಖಾದರ್ ಸಅದಿ ಉಸ್ತಾದರನ್ನು ಆಯ್ಕೆಮಾಡಲಾಯಿತು.

ಮಸೀದಿ ಖತೀಬಾರದ ಮನ್ಸೂರು ಮದನಿ, ಪ್ರಧಾನ ಅಧ್ಯಾಪಕರಾದ ಕಲಂದರ್ ಫಾಲಿಲಿ ಹಾಗೂ ಮೌಲಾನಾ ಅಸದುಲ್ಲಾಹ್ ಮಿಸ್ಬಾಹಿ, ಅಬ್ದುಲ್ ಖಾದರ್ ಸಅದಿ, ಶೌಕತ್ ಸುಲ್ತಾನಿ, ಲತೀಫ್ ಮುಸ್ಲಿಯಾರ್, ಅಬೂಬಕರ್ ಮುಸ್ಲಿಯಾರ್, ಜಮಾ-ಅತ್ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝ್ಝಾಕ್, ಕಾರ್ಯದರ್ಶಿ MC ಉಮರುಲ್ ಫಾರೂಕ್ ಉಪಸ್ಥಿತರಿದ್ದರು.

ಮದ್ರಸದ ಉನ್ನತಿಗೆ ಬೇಕಾದ ಎಲ್ಲಾ ಪ್ರಯತ್ನವು ಸದಾ ಸಮಯ ನಮ್ಮ ಕಡೆಯಿಂದ ಇರಲಿದೆ ಎಂಬ ಆಡಳಿತ ಕಮಿಟಿಯ ಪದಾಧಿಕಾರಿಗಳ ಮಾತು ನಮ್ಮ ಮದ್ರಸದ ಎಲ್ಲಾ ಉಸ್ತಾದರಿಗೂ ಮಕ್ಕಳಿಗೂ ಸಂತೋಷ ತಂದಿದೆ. ಊರಿನಲ್ಲಿ ಕಾರ್ಯಾಚರಿಸುವ ನುಸ್ರತುಲ್ ಮಸಾಕೀನ್, ಸೂಪರ್ ಸ್ಪೋರ್ಟ್ಸ್, NRI ಮುಂತಾದ ಎಲ್ಲಾ ಸಂಘಟನೆಗಳು ಮದ್ರಸ ಮಕ್ಕಳ ಶಿಕ್ಷಣ ,ವಿದ್ಯಾಭ್ಯಾಸ, ವಸ್ತ್ರ, ಕಿತಾಬ್ ಮುಂತಾದ ಎಲ್ಲಾ ವಿಷಯಗಳಿಗೂ ಸಹಕರಿಸಿ ಮಕ್ಕಳ ಉನ್ನತಿಗೆ ಬೇಕಾಗಿ ಕಾರ್ಯಾಚರಿಸುತ್ತಿರುವುದು ಸಂತೋಷದಾಯಕ.