janadhvani

Kannada Online News Paper

SJU ಉಜಿರೆ ಝೋನ್ ಸಮಿತಿ ವತಿಯಿಂದ ಉಳುಹಿಯ್ಯತ್ ತರಗತಿ

ಬೆಳ್ತಂಗಡಿ : SJU ಉಜಿರೆ ಝೋನ್ ವತಿಯಿಂದ 2025 ಜೂನ್ 3 ರಂದು ಕಿಲ್ಲೂರು ಮದರಸ ಹಾಲ್ ನಲ್ಲಿ ಉಳುಹಿಯ್ಯತ್ ತರಗತಿ ನಡೆಸಲಾಯಿತು. ಸುನ್ನೀ ಜಂಇಯ್ಯತುಲ್ ಉಲಮಾ SJU ದ.ಕ ಜಿಲ್ಲಾಧ್ಯಕ್ಷರಾದ ಬಹು. ಟಿ.ಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ತರಗತಿ ನಡೆಸಿ ಕೊಟ್ಟರು.

ಉಜಿರೆ ಝೋನ್ ಅಧ್ಯಕ್ಷರಾದ ಬಹು. ಅಬ್ದುರ್ರಹ್ಮಾನ್ ಬಾಖವಿ ಕಕ್ಕಿಂಜೆ ಉಸ್ತಾದರು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಸಿರಾಜುದ್ದೀನ್ ಸಖಾಫಿ ಪೀಚಲಾರು ಸ್ವಾಗತಿಸಿ, ಝೋನ್ ಪ್ರಧಾನ ಕಾರ್ಯದರ್ಶಿ ಶರೀಫ್ ಸಖಾಫಿ ಬೆದ್ರಬೆಟ್ಟು ವಂದಿಸಿದರು.

ವೇದಿಕೆಯಲ್ಲಿ SJU ಕರ್ನಾಟಕ ರಾಜ್ಯ ಸಮಿತಿ ನಾಯಕರು ಉಮರ್ ಸಖಾಫಿ ಕಾಜೂರು, ಕಿಲ್ಲೂರು ಮಸ್ಜಿದ್ ಅಧ್ಯಕ್ಷರು ಅಝೀಝ್ ಝುಹ್ರಿ , ಕಿಲ್ಲೂರು ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಹಾಗೂ ಮಿತ್ತ ಬಾಗಿಲು ಗ್ರಾಮ ಪಂಚಾಯಿತಿ ಸದಸ್ಯರಾದ ಸಾಹುಲ್ ಹಮೀದ್ , ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆ ಮನೆ ಸಹಿತ ಮತ್ತಿತರರು ಹಾಜರಿದ್ದರು.