janadhvani

Kannada Online News Paper

ಮೇ.28: ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ನಾಯಕರಿಗೆ ಸಾಂಘಿಕ ಕ್ಯಾಂಪ್

ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಸಮಿತಿ ನಾಯಕರಿಗೂ ಈಸ್ಟ್ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ, ಉಪ್ಪಿನಂಗಡಿ, ಕಡಬ, ಪುತ್ತೂರು, ವಿಟ್ಲ, ಸುಳ್ಯ ಝೋನ್ ನ ಕಾರ್ಯಕಾರಿ ಸಮಿತಿಯ ನಾಯಕರಿಗೆ ‘ಟೀಮ್ ಟಾಕ್’ ಎಂಬ ನಾಯಕತ್ವ ಶಿಬಿರವು ಮೇ 28 ಬುಧವಾರ ದಂದು ಅಲ್ ಮದೀನತುಲ್ ಮುನವ್ವರ ಮೂಡಡ್ಕ ಸಂಸ್ಥೆಯಲ್ಲಿ ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಲ್ಜಹ್ ಉಜಿರೆ ಸ್ಥಾಪಕರಾದ ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್ ರವರು ಆಧ್ಯಾತ್ಮಿಕ ನಾಯಕತ್ವ ವಹಿಸಲಿದ್ದಾರೆ. ಮೂಡಡ್ಕ ಸಂಸ್ಥೆಯ ಅಧ್ಯಕ್ಷ ಅಸ್ಸಯ್ಯದ್ ಇಸ್ಮಾಯಿಲ್ ಹಾದಿ ತಂಙಳ್ ಉಜಿರೆ ಮುನ್ನುಡಿ ಭಾಷಣ ಮಾಡಲಿದ್ದಾರೆ. ಖ್ಯಾತ ವಾಗ್ಮಿ ಸಂಘಟಕ, ಚಿಂತಕ ರಾಜ್ಯ ನಾಯಕ ಡಾ. ಅಬ್ದುಲ್ ರಶೀದ್ ಸಖಾಫಿ ಝೈನಿ ಅಲ್ ಕಾಮಿಲ್ ರವರು ನಾಯಕತ್ವ ಎಂಬ ವಿಷಯದಲ್ಲಿ ಚರ್ಚೆ ಮಂಡಿಸಲಿದ್ದಾರೆ .

ಜಿಲ್ಲೆಯ ಎಸ್ ವೈಎಸ್ ನ ನೂರೈವತ್ತು ನಾಯಕರು ಭಾಗವಹಿಸಲಿರುವ ಪ್ರಸ್ತುತ ಕ್ಯಾಂಪ್ ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ನೂತನ ಸಾರಥ್ಯದಲ್ಲಿ ನಡೆಯುವ ಪ್ರಥಮ ಕಾರ್ಯಕ್ರಮವಾಗಿದೆ. ಎಂದು ಎಸ್ ವೈ ಎಸ್ ದ.ಕ ಜಲ್ಲಾ ಈಸ್ಟ್ ಐಟಿ ಮೀಡಿಯಾ ಟೀಮ್ ಪ್ರಕಟನೆಯಲ್ಲಿ ತಿಳಿಸಿದೆ.