janadhvani

Kannada Online News Paper

ಹಜ್ ಪರವಾನಗಿ ರಹಿತ ಮಕ್ಕಾಕ್ಕೆ ಕರೆದೊಯ್ಯಲು ಯತ್ನ – ಭಾರತೀಯ ಚಾಲಕ ಸಹಿತ 23 ಮಂದಿ ಬಂಧನ

ಪರವಾನಗಿ ಇಲ್ಲದೆ ಮಕ್ಕಾಗೆ ಜನರನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುವ ಉಲ್ಲಂಘಕರಿಗೆ ಜೈಲು ಶಿಕ್ಷೆ, ಒಂದು ಲಕ್ಷ ರಿಯಾಲ್‌ಗಳ ದಂಡ, ಗಡೀಪಾರು ಮತ್ತು ಸೌದಿ ಅರೇಬಿಯಾಕ್ಕೆ 10 ವರ್ಷಗಳ ಪ್ರವೇಶ ನಿಷೇಧ ವಿಧಿಸಲಾಗುತ್ತದೆ.

ರಿಯಾದ್: ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ 22 ವಲಸಿಗರನ್ನು ಸ್ವಂತ ವಾಹನದಲ್ಲಿ ಹಜ್ ಯಾತ್ರೆಯ ಪರವಾನಗಿ ಇಲ್ಲದೆ ಮಕ್ಕಾಗೆ ಕರೆದೊಯ್ಯಲು ಯತ್ನಿಸಿದ ಭಾರತೀಯ ವ್ಯಕ್ತಿಯನ್ನು ಹಜ್ ಭದ್ರತಾ ಪಡೆಗಳು ಬಂಧಿಸಿವೆ. ಆತನೊಂದಿಗೆ 22 ಮಂದಿಯನ್ನು ಬಂಧಿಸಲಾಗಿದೆ. ವಿವಿಧ ದೇಶಗಳ ವಲಸಿಗರನ್ನು ತನ್ನ ಮಿನಿಬಸ್‌ನಲ್ಲಿ ಮಕ್ಕಾಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ವೇಳೆ ಮಕ್ಕಾ ಗಡಿ ದ್ವಾರದಲ್ಲಿ ಬಂಧಿಸಲಾಯಿತು. ಇವರಲ್ಲಿ ಯಾವೊಬ್ಬರಿಗೂ ಹಜ್ ನಿರ್ವಹಿಸುವ ಪರವಾನಗಿ ಇರಲಿಲ್ಲ.

ಪರವಾನಗಿ ಇಲ್ಲದೆ ಮಕ್ಕಾಗೆ ಜನರನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುವ ಉಲ್ಲಂಘಕರಿಗೆ ಜೈಲು ಶಿಕ್ಷೆ, ಒಂದು ಲಕ್ಷ ರಿಯಾಲ್‌ಗಳ ದಂಡ, ಗಡೀಪಾರು ಮತ್ತು ಸೌದಿ ಅರೇಬಿಯಾಕ್ಕೆ 10 ವರ್ಷಗಳ ಪ್ರವೇಶ ನಿಷೇಧ ವಿಧಿಸಲಾಗುತ್ತದೆ. ಪ್ರಯಾಣಕ್ಕೆ ಬಳಸುವ ವಾಹನಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಪರವಾನಗಿ ಇಲ್ಲದೆ ಹಜ್ ನಿರ್ವಹಿಸಲು ಯತ್ನಿಸಿದರೆ 20,000 ರಿಯಾಲ್ ದಂಡ. ಮುಂದಿನ 10 ವರ್ಷಗಳ ಕಾಲ ಹಜ್ ಮತ್ತು ಉಮ್ರಾ ಯಾತ್ರೆ ನಿಷೇಧಿಸಲಾಗುವುದು.