janadhvani

Kannada Online News Paper

ಅರಫಾ ಮೈದಾನದ ಹಸಿರೀಕರಣ: 20 ಸಾವಿರ ಮರಗಳನ್ನು ನೆಟ್ಟ ಸೌದಿ ಸರಕಾರ

ಭವಿಷ್ಯದಲ್ಲಿ ಅರಫಾತ್‌ಗೆ ಆಗಮಿಸುವ ಯಾತ್ರಿಕರಿಗೆ ತಂಪು ಮತ್ತು ನೆರಳು ನೀಡುವ ಉದ್ದೇಶದಿಂದ ಈ ಹಸಿರೀಕರಣವನ್ನು ಜಾರಿಗೆ ತರಲಾಗುತ್ತಿದೆ.

ಮಕ್ಕಾ: ಪವಿತ್ರ ಹಜ್ ಕರ್ಮಕ್ಕೆ ಮುಂಚಿತವಾಗಿ ಅರಫಾ ಬೆಟ್ಟದ ತಪ್ಪಲಿನಲ್ಲಿ ಸಾವಿರಾರು ನೆರಳು ನೀಡುವ ಮರಗಳನ್ನು ನೆಡಲಾಯಿತು. ಸೌದಿ ಅರೇಬಿಯಾದ ಗ್ರೀನ್ ಇನಿಷೇಟಿವ್ ಯೋಜನೆಯ ಭಾಗವಾಗಿ ನೆರಳು ನೀಡುವ ಮರಗಳನ್ನು ನೆಡಲಾಯಿತು. ಕಿದಾನಾ ಕಂಪನಿಯು ಯಾತ್ರಿಕರು ಸೇರುವ ಅರಫಾದಲ್ಲಿ 290,000 ಚದರ ಮೀಟರ್ ಪ್ರದೇಶದಲ್ಲಿ 20,000 ಮರಗಳನ್ನು ನೆಟ್ಟಿದೆ.

ಭವಿಷ್ಯದಲ್ಲಿ ಅರಫಾತ್‌ಗೆ ಆಗಮಿಸುವ ಯಾತ್ರಿಕರಿಗೆ ತಂಪು ಮತ್ತು ನೆರಳು ನೀಡುವ ಉದ್ದೇಶದಿಂದ ಈ ಹಸಿರೀಕರಣವನ್ನು ಜಾರಿಗೆ ತರಲಾಗುತ್ತಿದೆ.

ಅರಫಾ ಖುತುಬಾ (ಪ್ರವಚನ) ನಡೆಯುವ ಐತಿಹಾಸಿಕ ನಮೀರಾ ಮಸೀದಿಯ ಸುತ್ತಲೂ ಈ ಮರಗಳನ್ನು ಮುಖ್ಯವಾಗಿ ನೆಡಲಾಗಿದೆ.ಮಸ್ಜಿದ್ ನ ಪೂರ್ವ ಅಂಗಳವೊಂದರಲ್ಲಿಯೇ 2000 ಮರಗಳನ್ನು ನೆಡಲಾಗಿದೆ.