ಮರಿಕ್ಕಳ ಜುಮಾ ಮಸ್ಜಿದ್ ಅಧೀನದಲ್ಲಿ ನಡೆಯುತ್ತಿರುವ ತಾಜುಲ್ ಫುಖಹಾಅ್ ದರ್ಸ್ ನ ಉದ್ಘಾಟನಾ ಕಾರ್ಯಕ್ರಮವು ಮರಿಕ್ಕಳ ಜಮಾಅತ್ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಜಮಾಅತ್ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ ಅಧ್ಯಕ್ಷತೆ ವಹಿಸಿದ್ದರು. ಮರಿಕ್ಕಳ ಜುಮಾ ಮಸ್ಜಿದ್ ಮಾಜಿ ಮುದರ್ರಿಸ್ ಅಬ್ಬಾಸ್ ಸಖಾಫಿ ಅಲ್ ಹಿಕಮಿ ಕೊಟ್ಟಮುಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೂತನ ಮುದರ್ರಿಸ್ ಇರ್ಫಾನ್ ಸಖಾಫಿ ಅಲ್ ಹಿಕಮಿ ವೇಣೂರು, ಬಿಕೆ.ಅಬ್ದುರ್ರಹ್ಮಾನ್ ಮದನಿ ಮೂಳೂರು,ಯೂಸುಫ್ ಸಖಾಫಿ ಬನಾರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ,ಮುರ್ಷಿದ್ ಹಾಶಿಮಿ ಸಜಿಪ,ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ,ಮುಅಲ್ಲಿಂ ರಾದ ಜಬ್ಬಾರ್ ಸಅದಿ,ಶಫೀಕ್ ಸಖಾಫಿ,ಇಸ್ಮಾಯಿಲ್ ಪಾಳಿಲ್,ಫಾರೂಕ್ ಮದನಿ ಕಾರ್ಯದರ್ಶಿ ಅಝರ್ ಅಗಲ್ತಬೆಟ್ಟು,ಅಬ್ಬಾಸ್ ನಿಡ್ಮಾಡ್,ಮಾಜಿ ಅಧ್ಯಕ್ಷ ಅಬ್ಬಾಸ್ ಕೊಡಂಚಿಲ್ ,ಮೊದಲಾದವರು ಭಾಗವಹಿಸಿದ್ದರು.
ಮರಿಕ್ಕಳ ಜಮಾಅತ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿದರು.ಉಪಾಧ್ಯಕ್ಷ ಹನೀಫ್ ಶೈನ್ ದನ್ಯವಾದಗೈದರು.







