janadhvani

Kannada Online News Paper

ಮುಸ್ಲಿಂ ಜಮಾಅತ್ ಉಕ್ಕುಡ ಸರ್ಕಲ್: ಬಡ ಕುಟುಂಬಕ್ಕೊಂದು ಮನೆ ನಿರ್ಮಾಣಕ್ಕೆ ಶಿಲಾನ್ಯಾಸ

ವಿಟ್ಲ: ಕಾನತಡ್ಕ ನಿವಾಸಿಯಾಗಿರುವ ಬಡ ಕುಟುಂಬದ ಯಜಮಾನ ಯೂಸುಫ್ ರವರು ಹಿಂದೆ ವಿಟ್ಲದ ಹೋಟೆಲ್ ಒಂದರಲ್ಲಿ ದುಡಿಯುತ್ತಿದ್ದು ಇದೀಗ ಮಾರಕ ರೋಗಕ್ಕೆ ತುತ್ತಾಗಿ ಜೀವನ ನಿರ್ವಹಣೆಗೂ ಕಷ್ಟಪಡುತ್ತಿರುವ ಅವರಿಗೆ ಬಿಕ್ಷೆಯೇ ಮಾರ್ಗವಾಗಿತ್ತು.

ಇದೀಗ ಅವರಿಗೆ ಮಾಸಿಕ ಧನ ಸಹಾಯ ಹಾಗೂ ‘ಸಾಂತ್ವನದ ಬೀಡು’ ಎನ್ನುವ ಮನೆ ಕರ್ನಾಟಕ ಮುಸ್ಲಿಂ ಜಮಾಅತ್ ಉಕ್ಕುಡ ಸರ್ಕಲ್ ಸಮಿತಿ ನಿರ್ಮಿಸಿ ಕೊಡುತ್ತಿದ್ದು ಪ್ರಮುಖ ವಿದ್ವಾಂಸ ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ ಉಸ್ತಾದರು ಶಿಲಾನ್ಯಾಸಗೈದು ದುಆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಹಮ್ಮುದ್ದೂಲ್ ಫೈಝಿ ವಾಲೆಮಂಡವು, ಹಾಫಿಲ್ ಅಹಮದ್ ಶರೀಫ್ ಸಖಾಫಿ ಉಕ್ಕುಡ , ಅಬ್ದುಲ್ ರಜಾಕ್ ನಹೀಮಿ ಕಾನತಡ್ಕ, ಹಮೀದ್ ಹಾಜಿ ಕೊಡುಂಗೈ, ಹಮೀದ್ ಹಾಜಿ ದರ್ಕಾಸ್, ಅಬ್ದುಲ್ ರಹೀಮ್ ಸಖಾಫಿ ವಿಟ್ಲ, ಉಮರ್ ಮುಸ್ಲಿಯಾರ್ ಅಳಿಕೆ ಅಬ್ದುಲ್ ಖಾದರ್ ಹಾಜಿ ದರ್ಕಾಸ್ ಯೂನುಸ್ ಕಾನತಡ್ಕ ಅಬೂಬಕ್ಕರ್ ಟೆಲಿಫೋನ್ ,ರಹೀಂ ಹಾಜಿ ಬೈರಿಕಟ್ಟೆ, ಉಮರ್ ಬಾಕಿಮಾರು ವಿಟ್ಲ,ಶಾಕಿರ್ ಅಳಕೆಮಜಲ್, ಅಬ್ದುಲ್ ರಹಮಾನ್ ಶರಫಿ, ಇಕ್ಬಾಲ್ ಉಕ್ಕುಡ , ರಝಾಕ್ ಬೈರಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.