ದುಬೈ : ಪ್ರಸಕ್ತ ಸಾಲಿನಲ್ಲಿ ಪವಿತ್ರವಾದ ಹಜ್ಜ್ ಯಾತ್ರೆಗೆಯ್ಯುತ್ತಿರುವ ಇಬ್ರಾಹಿಂ ಹಾಜಿ ಕಿನ್ಯ, ಅಬ್ದುಲ್ ರಝ್ಝಾಕ್ ಕಾಂತಡ್ಕ, DKSC UAE ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯೂಸುಫ್ ಆರ್ಲಪದವು, ಬಶೀರ್ ಪಡುಬಿದ್ರೆ, ಸಿದ್ದೀಖ್ ಉಳ್ಳಾಲ, ಮಜೀದ್ ಮಂಜನಾಡಿ ರವರಿಗೆ KCF ದುಬೈ ನೋರ್ತ್ ಝೋನ್ ವತಿಯಿಂದ ಹಜ್ಜ್ ಯಾತ್ರೆಗೆ ಬೀಳ್ಕೊಟ್ಟು ಮೆಮೆಂಟೊ ನೀಡಿ ಸನ್ಮಾನಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ ವಹಿಸಿದರು.ಉದ್ಘಾಟನೆ ಯನ್ನು KCF ಅಂತಾರಾಷ್ಟ್ರೀಯ ಸಮಿತಿ ಸಂಘಟನೆ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಉಸ್ತಾದ್ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಜ್ಜ್ ಎನ್ನುವುದು ತ್ಯಾಗ, ಶುದ್ಧತೆ,ಸಹನೆ ಮತ್ತು ಸಮರ್ಪಣೆಯ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ KCF ನೇತಾರರಾದ ಇಬ್ರಾಹಿಂ ಮದನಿ ಉಸ್ತಾದ್ ಹಾಗೂ ಮೂಸಾ ಹಾಜಿ ಬಸರ, ಅಬ್ದುಲ್ ಹಮೀದ್ ಸಖಾಫಿ ಬೆಳ್ಳಾರೆ,ಶುಕೂರ್ ಮನಿಲ,ಅಬ್ದುಲ್ ರಹೀಮ್ ಕೋಡಿ , ಅಬ್ದುಲ್ ಖಾದರ್ ಸಾಲೆತ್ತೂರ್, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಿಯಾಝ್ ಬಸರ, , ರಹೀಮ್ ಉಪ್ಪಳ, ಶಾಫಿ ಉಪ್ಪಳ, ಅಶ್ರಫ್ ಮದನಿ ನೆಕ್ಕಿಲ್,ಹಂಝ ಸಖಾಫಿ ಕೊಟ್ಟಮುಡಿ, ಅಬ್ದುಲ್ಲ ಸಖಾಫಿ ಕೊಟ್ಟಮುಡಿ ಹಾಗೂ ಸೆಕ್ಟರ್ ಝೋನ್ ನೇತಾರರು ಉಪಸ್ಥಿತರಿದ್ದರು. KCF ದುಬೈ ನೋರ್ತ್ ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪಾತೂರ್ ಸ್ವಾಗತಿಸಿ ಹಬೀಬ್ ಸಜಿಪ ವಂದಿಸಿದರು..