janadhvani

Kannada Online News Paper

ರೂಹಾನಿ ಇಜ್ತಿಮಾ: ಖುದ್ದೂಸ್ ಸಾಹೆಬ್ ಈದ್ಗಾಹ್ ನಲ್ಲಿ ಗ್ರ್ಯಾಂಡ್ ಇಫ್ತಾರ್ ಸಂಗಮ

ಇಫ್ತಾರ್‌ಗಾಗಿ ವಿವಿಧ ಮದರಸಾಗಳಿಂದ ಸಿಹಿತಿಂಡಿಗಳ ಸಂಗ್ರಹವು ಇಫ್ತಾರನ್ನು ಹೆಚ್ಚು ಜನಪ್ರಿಯಗೊಳಿಸಿತು.

ಬೆಂಗಳೂರು: ಸುನ್ನಿ ‌ಸಂಘಟನೆಗಳ ಅಧೀನದಲ್ಲಿ ಖುದ್ದುಸಾಬ್ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ರೂಹಾನಿ ಇಜ್ತಿಮಾದ ಭಾಗವಾಗಿ ನಡೆದ ಗ್ರ್ಯಾಂಡ್ ಇಫ್ತಾರ್ ಸಂಗಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಜನರು ಭಾಗವಹಿಸಿದರು. ಇದು ಬೆಂಗಳೂರಿನ ಅತಿದೊಡ್ಡ ಇಫ್ತಾರ್ ಸಂಗಮದಲ್ಲೊಂದಾಗಿತ್ತು.

ಇಫ್ತಾರ್‌ಗಾಗಿ ವಿವಿಧ ಮದರಸಾಗಳಿಂದ ಸಿಹಿತಿಂಡಿಗಳ ಸಂಗ್ರಹವು ಇಫ್ತಾರನ್ನು ಹೆಚ್ಚು ಜನಪ್ರಿಯಗೊಳಿಸಿತು.
ಇಫ್ತಾರ್‌ನಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಡಾ. ಅಬ್ದುಲ್ ಹಕೀಮ್ ಅಝ್ಹರಿ, .ಎನ್. ಕೆ. ಎಂ ಶಾಫಿ ಸ‌ಅದಿ,ಜನಾಬ್ ಉಸ್ಮಾನ್ ಶರೀಫ್ ಸೇರಿದಂತೆ ಪ್ರಮುಖರು ಹಾಜರಿದ್ದರು.

ಆತ್ಮೀಯ ಸಂಘಮದ ಭಾಗವಾಗಿ ಸಂಜೆ ನಡೆದ ಫ್ಯಾಮಿಲಿ ಮೀಟ್ ನಲ್ಲಿ ನೂರಾರು ಕುಟುಂಬಗಳು ಭಾಗವಹಿಸಿತು. ಸಯ್ಯಿದ್ ಇಬ್ರಾಹಿಂ ಬಾಫಕಿ ತಂಙಳ್ ಪ್ರಾರ್ಥನೆಯೊಂದಿಗೆ ಸಭೆಗೆ ಚಾಲನೆ ನೀಡಿದರು. ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಉದ್ಘಾಟಿಸಿದರು. ಫಾಝಿಲ್ ನೂರಾನಿ ಕ್ಯಾಲಿಕಟ್ ವಿಷಯ ಮಂಡನೆ ನಡೆಸಿದರು. ಸನ್ಮಾನ್ಯ ಸ್ಪೀಕರ್ ಜನಾಬ್ ಯು.ಟಿ.ಖಾದರ್, ಎಸ್.ಎಂ.ಎ. ಅಧ್ಯಕ್ಷರಾದ ಹಕೀಮ್ ಆರ್.ಟಿ. ನಗರ, ಎಸ್. ಅಬ್ದುರ್ರಹ್ಮಾನ್ ಹಾಜಿ, ಅನಸ್ ಸಿದ್ದಿಕಿ, ಮತ್ತು ಜಾಫರ್ ನೂರಾನಿ ಉಪಸ್ಥಿತರಿದ್ದರು.