ಕೇಂದ್ರದ ವಕ್ಫ್ ಮಸೂದೆ ತಿದ್ದುಪಡಿ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು .
ಕೇಂದ್ರದ ಸರ್ಕಾರದ ಪ್ರಸ್ತಾಪಿಸಿರುವ ವಕ್ಫ್ (ತಿದ್ದುಪಡಿ) ಮಸೂದೆಯ ವಿರುದ್ಧ ರಾಜ್ಯದ ಸರ್ಕಾರ ವಿಧಾನಸಭೆಯಲ್ಲಿ ಬುಧವಾರ ನಿರ್ಣಯವನ್ನು ಅಂಗೀಕರಿಸಿರವುದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ನಾಸಿರ್ ಲಕ್ಕಿ ಸ್ಟಾರ್ ಮತ್ತು ಜಿಲ್ಲಾ ಸದಸ್ಯರು , ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.
ಕೇಂದ್ರದ ವಿವಾದಾತ್ಮಕ ಮಸೂದೆಯು ರಾಜ್ಯದ ಸ್ವಾಯತ್ತತೆ ಮತ್ತು ವಕ್ಫ್ ಮಂಡಳಿ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಅಲ್ಲದೆ ರಾಜ್ಯದ ವಕ್ಫ್ ಆಸ್ತಿಗಳ ಮೇಲೆ ಇರುವ ಹಕ್ಕನ್ನು ಕಸಿದುಕೊಳ್ಳುವ ಕೇಂದ್ರ ಸರ್ಕಾರದ ವಿಚಾರ ಸಂಪೂರ್ಣವಾಗಿ ಮುಸ್ಲಿಂ ಸಮಾಜ ಖಂಡಿಸುತ್ತದೆ .ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ವಕ್ಫ್ ಮಂಡಳಿಯ ಅಧಿಕಾರವನ್ನು ತನ್ನ ಆಧೀನದಲ್ಲಿಟ್ಟುಕೊಂಡು ಅಧಿಕಾರ ಚಲಾಯಿಸುವುದನ್ನು ವಿರೋಧಿಸುತ್ತದೆ.
ವಕ್ಫ್ ಆಸ್ತಿಗಳೆಂದರೆ, ದಾನಿಗಳು ಕೊಟ್ಟಿರುವಂತಹಾ ಆಸ್ತಿಗಳಾಗಿರುತ್ತವೆ. ಇವುಗಳನ್ನು ನಿಯಂತ್ರಿಸಲು ಸರ್ಕಾರಕ್ಕೆ ಹಕ್ಕು ಇರುವುದಿಲ್ಲ.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಂಡಿಸಿದ ನಿರ್ಣಯವನ್ನು ವಿರೋಧ ಪಕ್ಷದ ವಿರೋಧ ನಡುವೆ ಅಂಗೀಕರಿಸಿರುವುದಕ್ಕೆ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರಿಗೆ ಹಾಗೂ ಎಲ್ಲಾ ಮಂತ್ರಿ ಮಂಡಲದವರಿಗೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ಯಾವುದೇ ಸರ್ಕಾರಗಳು ಧರ್ಮದ ಆಧಾರದ ಮೇಲೆ ಅಧಿಕಾರ ಮೊಟಕು ಗೊಳಿಸುವುದು, ದೇಶದಲ್ಲಿ ಅಶಾಂತಿಯನ್ನುಂಟು ಮಾಡಲು ಕಾರಣವಾಗುತ್ತದೆ
ಸರ್ಕಾರ ತನ್ನ ನಿರ್ಣಯದಲ್ಲಿ ಕೇಂದ್ರ ಸರ್ಕಾರ ಮಸೂದೆಯನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದ್ದು, ಈ ಮಸೂದೆಗೆ ಒಳಪಡುವವರೊಳಗೆ ವಿಶಾಲವಾದ ಸಮಾಲೋಚನೆಯ ಅಗತ್ಯವನ್ನು ಒತ್ತಿಹೇಳಿದೆ. ಇದು ಸ್ವಾಗತಾರ್ಹವಾಗಿದೆ. ವಕ್ಫ್ ಆಸ್ತಿಗಳು ಮತ್ತು ಆಡಳಿತದ ಮೇಲೆ ರಾಜ್ಯದ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂದು ಸರ್ಕಾರ ವಾದಿಸಿರವುದು ಸೂಕ್ತ ಸಲಹೆ.